ಕೆಲವೊಮ್ಮೆ ನೀವು ಕೇಳಿರಬಹುದು, ಮೀನು ಮತ್ತು ಹಾಲಿನ ಸಂಯೋಜನೆಯು ದೇಹಕ್ಕೆ ಹಾನಿಕಾರಕವಾಗಿದೆ. ಅದರಿಂದ ಬಿಳಿ ಮಚ್ಚೆಗಳ (ಬಿಳಿ ತೊನ್ನು) ಸೋಂಕು ಉಂಟು ಮಾಡುತ್ತದೆ. ಈ ಸಂಯೋಜನೆಯು ಹಾನಿಕಾರಕವಲ್ಲ ಎಂದು ಪೌಷ್ಟಿಕತಜ್ಞರು ಹೇಳುತ್ತಾರೆ.
ಮ್ಯಾಕ್ಸ್ ಹೆಲ್ತ್ಕೇರ್ ಕ್ಲಿನಿಕಲ್ನ ಮುಖ್ಯ ಪೌಷ್ಟಿಕತಜ್ಞರಾದ ಡಾ. ರಿತಿಕಾ ಸಮ್ಮದರ್ ಅವರು ಎನ್ಡಿಟಿವಿಗೆ ಹೇಳಿದ ಪ್ರಕಾರ, ಕೋಳಿ ಅಥವಾ ಮೀನಿನೊಂದಿಗೆ ಹಾಲು ಕುಡಿಯುವುದರಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ. ಬಿಳಿ ಕಲೆಗಳು ಮುಖ್ಯವಾಗಿ ಮೆಲನಿನ್ ಕೊರತೆಯಿಂದಾಗಿ ಸಂಭವಿಸುತ್ತವೆ ಎಂದು ಅವರು ಹೇಳಿದರು