ಆನ್ ಲೈನ್ ಶಾಪಿಂಗ್ ನಲ್ಲಿ ಅಮೋಘ ಡಿಸ್ಕೌಂಟ್ ಗಳನ್ನು ನೀಡುತ್ತಿದ್ದ ಫ್ಲಿಪ್ ಕಾರ್ಟನಲ್ಲಿ
ಅಮೇರಿಕಾದ ಬ್ರ್ಯಾಂಡ್ ಆಗಿರುವ ಸ್ಕೆಚ್ಚರ್ಸ ಶೂ ಗಳ ನಕಲಿ ಉತ್ಪನ್ನಗಳು ಮಾರಾಟವಾಗಿರುವುದನ್ನು ಗಮನಿಸಿದ ಕಂಪೆನಿಯು ಫ್ಲಿಪ್ ಕಾರ್ಟನ್ನು ಫೇಕು ಉತ್ಪನ್ನಗಳ ಮಾರಾಟದ ಆರೋಪದಲ್ಲಿ ಕೋರ್ಟಿಗೆಳೆದಿದೆ.

ದೆಹಲಿ,ಅಹ್ಮದಾಬಾದ್ ನ ಏಳು ದಾಸ್ತಾನು ಗಳಿಗೆ ಕೋರ್ಟ್ ಅನುಮತಿ ಮೇರೆಗೆ ದಾಳಿ ನಡೆಸಿದಾಗ ಈ ಸತ್ಯವು ಹೊರ ಬಂದಿದೆ. ರಿಟೇಲ್ ನೆಟ್, ಟೆಕ್ ಕನೆಕ್ಟ್,ಕೆಮ್ ಲಾಜಿಸ್ಟಿಕ್ಸ್, ಮಾರ್ಕೋ ವೇಗಾನ್ ಪೂರೈಕೆದಾರರು ಈಗಾಗಲೇ ಸ್ಕೆಚ್ಚರ್ಸ್ ಬ್ರ್ಯಾಂಡ್ ನ ಹೆಸರಲ್ಲಿ ಹದಿನೈದು ಸಾವಿರ ಜೊತೆ ನಕಲಿ ಶೂಗಳನ್ನು ಮಾರಾಟಾ ಮಾರಾಟ ಮಾಡಿರುವುದು ಬೆಳಕಿಗೆ ಬಂದದೆ.
ಕಳೆದ ಮೂರು ವರ್ಷಗಳಿಂದ ಲವೀಸ್,ಸೂಪರ್ ಡ್ರೈ ಸೇರಿದಂತೆ ಹಲವಾರು ಬ್ರ್ಯಾಂಡ್ ಗಳು ಸಾವಿರಾರು ನಕಲಿ ಉತ್ಪನ್ನಗಳ ಮಾರಾಟವನ್ನು ಕಂಡುಹಿಡಿದಿದ್ದವು.
ಭಾರತದಲ್ಲಿ ಬ್ರ್ಯಾಂಡ್ ಗಳ ಫೇಕ್ ಉತ್ಪನ್ನಗಳ ಮಾರಾಟವು ಇದೇ ಮೊದಲ ಬಾರಿಗೆ ಹೊರ ಬಿದ್ದಿದ್ದು ಇತರೆ ಪ್ರದೇಶಗಳಲ್ಲಿಯೂ ತನಿಖೆ ನಡೆಸಲು ಸ್ಕೆಚ್ಚರ್ಸ್ ಮುಂದಾಗಿದೆ.
ಈ ಕುರಿತು ಫ್ಲಿಪ್ ಕಾರ್ಟ್ನ
ವಿಚಾರಣೆ ನಡೆಸಿದಾಗ “ನಾವು ಕೇವಲ ಖರೀದಿದಾರರಿಗೆ ಮತ್ತು ಮಾರಾಟಗಾರರಿಗೆ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ಒಂದು ವೇಳೆ ಮಾರಾಟಗಾರರು ತಮ್ಮ ಗ್ರಾಹಕರಿಗೆ ವಂಚಿಸುತ್ತಿದ್ದಲ್ಲಿ ಅಂತಹ ಮಾರಾಟಗಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು” ಹೇಳಿ ಕೈ ತೊಳೆದುಕೊಂಡಿದೆ.

Leave a Reply