ಕಳೆದ 29 ವರ್ಷಗಳಿಂದ ಕೊಲ್ಕತ್ತಾದ ಲಕ್ಷ್ಮಿ ನಾರಾಯಣ್ ಕಚೋರಿ ಅಂಗಡಿಯನ್ನು (ಕ್ಯಾಂಟೀನ್) ನಡೆಸುತ್ತಿದ್ದಾರೆ. ಆಹಾರ ವಸ್ತುಗಳಿಗೆ ಬೆಲೆಯೇರಿದರೂ ಲಕ್ಷ್ಮಿ ನಾರಾಯಣ್ ರವರ ಅಂಗಡಿಯಲ್ಲಿ ಆಹಾರಕ್ಕೆ ಕಳೆದ 29 ವರ್ಷಗಳಿಂದ ಅದೇ ರೇಟು. ಬೆಳಿಗ್ಗೆ ಬರುವ ಬಡವರಿಗೆ ಒಂದು ಪ್ಲೇಟ್ ಕಚೋರಿ (ಕೊಲ್ಕೊತ್ತಾ ರೋಟಿ) ಗೆ 50 ಪೈಸೆ ಮತ್ತು ಶಾಲಾ ಮಕ್ಕಳಿಗೆ ಬೆಲೆ ಕೇವಲ 25 ಪೈಸೆ ಅವರು ಪಡಕೊಳ್ಳುತ್ತಾರೆ.
ಇಂಡಿಯನ್ ಎಕ್ಸ್ಪ್ರೆಸ್ ವರದಿಯ ಪ್ರಕಾರ, ಜ್ಯೋತಿ ಬಸು ಸರ್ಕಾರದ ಅವಧಿಯಲ್ಲಿ ನಾರಾಯಣ್ ಅವರು ತನ್ನ ಪುಟ್ಟ ಕ್ಯಾಂಟೀನ್ ಪ್ರಾರಂಭಿಸಿದರು. ಪ್ರತಿ ಕಚೋರಿಗೆ 50 ಪೈಸೆ ಮತ್ತು ಶಾಲಾ ಮಕ್ಕಳಿಗಾಗಿ ಇದು 25 ಪೈಸೆ ಇತ್ತು. ಈಗಲೂ ಅದು ಮುಂದುವರೆದಿದೆ. ಪ್ರತಿ ದಿನ ಅವರು ಬೆಳಗ್ಗೆ ಏಳು ಗಂಟೆಗೆ ತನ್ನ ಕ್ಯಾಂಟೀನ್ ತೆರೆಯುತ್ತಾರೆ. ಬಡವರು ಬಂದು ಅವರ ಕ್ಯಾಂಟೀನ್ ಸುತ್ತ ಸೇರುತ್ತಾರೆ. ಅವರ ಕ್ಯಾಂಟೀನ್ ಬಳಿ ಹತ್ತು ಗಂಟೆಯ ವರೆಗೆ ಜನಸಂದಣಿ ಇರುತ್ತದೆ.

ಬಲಿಕ ಮಧ್ಯಾಹ್ನ ಎರಡು ಗಂಟೆಗೆ ಅವರು ತನ್ನ ಕ್ಯಾಂಟೀನ್ ಪುನಃ ತೆರೆದು ವಿದ್ಯಾರ್ಥಿಗಳಿಗಾಗಿ ಕೇವಲ ಒಂದು ರೂಪಾಯಿಗೆ ವಿಭಿನ್ನ ರುಚಿಕರ ಆಹಾರ (telebhajas (fritters) like peyaji, alur chop, mochar chop, dhokar chop, beguni) ತಯಾರಿಸುತ್ತಾರೆ. ಶಾಲೆ ಬಿಟ್ಟು ಬಂದು ಮಕ್ಕಳು ಇವರ ಬಳಿ ತಿಂದು ಹೋಗುತ್ತಾರೆ. ತಾವು ಬೆಲೆ ಯಾಕೆ ಹೆಚ್ಚಿಸಿಲ್ಲ ಎಂದು ಕೇಳಿದ್ದಕ್ಕೆ, ನಾನು ಈಗ ಬೆಲೆ ಹೆಚ್ಚಿಸಿದರೆ, ಅನೇಕರಿಗೆ ನಿರಾಶೆಯಾಗುತ್ತದೆ.. ನೆರೆಹೊರೆಯವರು ಎಲ್ಲರೂ ಬಹಳ ಕಾಲಗಳಿಂದ ಇಲ್ಲಿ ತಿನ್ನುತ್ತಿದ್ದಾರೆ. ವಿದ್ಯಾರ್ಥಿಗಳು ತುಂಬಾ ಗುಂಪಾಗಿ ಬಂದು ತಿಂದು ಹೋಗುತ್ತಾರೆ ಇದರಿಂದ ನನಗೆ ಸಂತೃಪ್ತಿ ಇದೆ ಎಂದು ಲಕ್ಷ್ಮಿ ನಾರಾಯಣ್ ಹೇಳುತ್ತಾರೆ.

Leave a Reply