ಸಾಧ್ಯವಾದರೆ ಕ್ಷಮಿಸಿ ಸಹೋದರರೇ

ಸಹೋದರ ದೀಪಕ್ ಮತ್ತು ಬಶೀರ್…

ನಿಮ್ಮನ್ನು ಉಳಿಸಿಕೊಳ್ಳಲು ಸಾಧ್ಯವಾಗದ ‘ಮಂಗಳೂರು’ನಂತಹ ಮಂಗಳೂರಿನ ಸಾಮಾನ್ಯ ಪ್ರಜೆ ನಾನು. ಕೇಳಿಸಿಕೊಳ್ಳಲು ಮತ್ತು ಹೇಳಲು ತುಂಬಾ ವಿಷಯಗಳಿವೆ‌. ಆದರೆ ನಿಮ್ಮಂತಹ ಅನೇಕ ಅಮೂಲ್ಯ ಜೀವಗಳನ್ನು ಬಲಿ ತೆಗೆದುಕೊಂಡ ‘ಕೋಮುವಾದಿ’ಗಳ ನರ್ತನ ನಮ್ಮ ಕಣ್ಮುಂದೆಯೇ ನಡೆಯುತ್ತಿದ್ದರೂ ಅದನ್ನು ತಡೆಯಲಾಗದ ಅಪರಾಧಿ ಪ್ರಜ್ಞೆ ನನ್ನನ್ನ ನಾಚಿ ತಲೆ ತಗ್ಗಿಸಿದೆ. ಬೆರಳುಗಳು ಕಂಪಿಸುತ್ತಿವೆ. ಕಣ್ಣೀರು ಮೊಬೈಲ್ ಪರದೆಯನ್ನು ಮಂಕಾಗಿಸಿದೆ.

ಮುಗಿಸುತ್ತೇನೆ, ನಿಮ್ಮ ಬಲಿದಾನ ವ್ಯರ್ಥವಾಗಲು ಬಿಡಲಾರೆ ಎಂಬ ವಾಗ್ದಾನದೊಂದಿಗೆ‌. ಯಾವ ಬೆಲೆ ತೆತ್ತಾದರೂ ‘ಮಂಗಳೂರು’ನ ಮಾನ, ಮರ್ಯಾದೆ ಬೀದಿಗಳಲ್ಲಿ ಹರಾಜಾದಂತೆ ಪ್ರಯತ್ನಿಸುತ್ತೇನೆ.

ನಿಮ್ಮಂತೆಯೇ ನನ್ನಲ್ಲಿ ಆಯುಧಗಳಿಲ್ಲ. ಮಾನವ ಸಹಜ ಪ್ರೀತಿಯಿದೆ. ಅದನ್ನು ಹಂಚುವ ಮೂಲಕ ಒಡೆದ ಮನಸ್ಸುಗಳನ್ನು ಒಂದಾಗಿಸಲು, ಭೀತಿಯಿಲ್ಲದ ಸಮಾಜ ನಿರ್ಮಿಸಲು, ಬಹುತ್ವದ ಸ್ವಾಸ್ಥ್ಯ ಉಳಿಸಿಕೊಳ್ಳಲು ಹೋರಾಡುತ್ತೇನೆ.

ಸಾಧ್ಯವಾದರೆ ಬಡಪಾಯಿಯಾದ ನನ್ನನ್ನು ಕ್ಷಮಿಸಿಬಿಡಿ.

ನಿಮ್ಮ ಸಹೋದರ
ಉಮರ್ ಯು.ಹೆಚ್.

Leave a Reply