ಚೆನ್ನೈ : ದೇಶಾದ್ಯಂತ ಗಣೇಶ ಹಬ್ಬದ ಸಡಗರ ಸಂಭ್ರಮ ನಡುವೆ ಚೆನ್ನೈನಲ್ಲಿ ರೂಪಿಸಲಾಗಿರುವ ಬಾಳೆ ಹೂವಿನ ಗಣಪ ಸಾರ್ವಜನಿಕರನ್ನು ಬಹಳ ಆಕರ್ಷಿಸಿದೆ.

ಕಲಾವಿದರು ಸುಮಾರು ಏಳು ಸಾವಿರ ಬಾಳೆ ಹೂವುಗಳನ್ನು ಬಳಸಿ ಹತ್ತು ದಿನಗಳ ಕಾಲ ಪರಿಶ್ರಮಿಸಿ ಈ ಪರಿಸರ ಸ್ನೇಹಿ ಗಣಪ ವಿಗ್ರಹವನ್ನು ರಚಿಸಿದ್ದಾರೆ. ಹತ್ತು ಅಡಿ ಎತ್ತರ, ಹಸ್ತದಲ್ಲಿ ಸ್ವಸ್ತಿಕ್ ಮುದ್ರೆ, ಆಸೀನ ಭಂಗಿಯ ಗಣಪ ಸಾವಿರಾರು ಭಕ್ತರನ್ನು ಆಕರ್ಷಿಸಿದೆ.

ಈ ಕಲಾತ್ಮಕ ಗಣಪನ ಮುಂದೆ ನಿಂತು ಜನರು ಸೆಲ್ಫಿ ತೆಗುಯುತ್ತಿದ್ದಾರೆ. ಪ್ಲಾಸ್ಟರ್ ಆಫ್ ಪ್ಯಾರಿಸ್ ಅಥವಾ ಪಿಒಪಿ ಗಣಪ ವಿಗ್ರಹವನ್ನು ಈ ಬರಿ ಬಳಸಬಾರದು ಎಂದು ವ್ಯಾಪಕ ಅಭಿಯಾನ ಕೈಗೊಂಡ ನಿಟ್ಟಿನಲ್ಲಿ ಜನರು ಪರಿಸರ ಸ್ನೇಹಿ ಗಣಪ ವಿಗ್ರಹದತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಮಾತ್ರವಲ್ಲ, ಕೆಲವು ಕಡೆ ಚಾಕಲೇಟ್ ಗಣಪತಿ ಇನ್ನಿತರ ನ್ಯಾಚುರಲ್ ಗಣಪತಿ ವಿಗ್ರಹವನ್ನು ಸೃಷ್ಟಿಸಿ ಆಕರ್ಷಿಸಲಾಗಿದೆ.

Leave a Reply