ಒಂದು ಕಡೆ ಬೆಂಗಳೂರಿನ 3D ಆ್ಯನಿಮೇಟರ್ ಆದ ಅಂಕೂರ್ ಭಟ್ನಗರ್ ಹಾಗೂ ರೇಖಾ ವಿಜಯಕುಮಾರ್ ಆದರೆ ಇನ್ನೊಂದು ಕಡೆ ಮಂಗಳೂರಿನ ಆಫೀಸ್ ಉದ್ಯೋಗಿ ಮಹೇಶ್ ನಾಯಕ್ ಹಾಗೂ ಅವರ ಗೆಳೆಯ ರೋಹಿತ್ ರವರ ಪುತ್ರ ಮಂಗಳೂರಿನ ಲೌರ್ಡೆಸ್ ಸೆಂಟ್ರಲ್ ಸ್ಕೂಲಿನ ಏಳನೆಯ ತರಗತಿ ವಿದ್ಯಾರ್ಥಿ ಅಭಿನವ್ ರಾವ್. ಇವರ ನಡುವೆ ಸಂಬಂಧ ಬೆಸೆದದ್ದು ಒಂದು ಕ್ಯಾಮರಾ,ಫೇಸ್ ಬುಕ್ ಹಾಗೂ ಪಿಗ್ಗಿ ಬ್ಯಾಂಕ್ ಮಾತ್ರ.

2016 ರ ಡಿಸೆಂಬರ್ 17 ರಂದು ಬೆಂಗಳೂರಿನಲ್ಲಿ ಆರಂಭವಾದ ಕಥೆ ಇದು.

45 ದಿನಗಳ ಹೆಣ್ಣುನಾಯಿಯ ಮೇಲೆ ಕಾರು ಚಲಿಸಿದ ಪರಿಣಾಮವಾಗಿ ಅದರ ಹಿಂದಿನ ಎರಡೂ ಕಾಲುಗಳು ಹಾಗೂ ಸೊಂಟವು ನಿಸ್ತೇಜವಾಗಿತ್ತು.ಆದರೆ ನಾಯಿಯು ಚುರುಕಾಗಿರುವುದು ಅಂಕೂರ್ ರವರ ಗಮನ ಸೆಳೆಯಿತು. ಅವರು ನಾಯಿಯನ್ನು ತಮ್ಮ ಸಂರಕ್ಷಣೆಗೆ ತೆಗೆದುಕೊಂಡರಲ್ಲದೇ ಸೂಕ್ತವಾದ ಚಿಕಿತ್ಸೆಯನ್ನು ಕೊಡಿಸಿದರು. ತದನಂತರ ಮೋನಾ ಎಂದು ನಾಮಕರಣ ಮಾಡಿ ಅದರೊಂದಿಗಿನ ತಮ್ಮ ಚಿತ್ರಗಳನ್ನು ಹಾಗೂ ವಿಡಿಯೋಗಳನ್ನು ಫೇಸ್ ಬುಕ್ ನಲ್ಲಿ ಲಗತ್ತಿಸಿದರು. ಈ ನಡುವೆ ಡಾಕ್ಟರ್ ಮೋನಾ ಶಾಶ್ವತವಾಗಿ ನಡೆಯಲಾರಳು ಆದರೆ ಅವಳಿಗೆ ವೀಲ್ ಕಾರ್ಟ್ ನಡೆಯಲು ಸಹಾಯಕವಾಗಬಲ್ಲದು ಎಂದಿದ್ದರು.

ಮಹೇಶ್ ನಾಯಕ್ ರವರು ತಮ್ಮ ಆಫೀಸ್ ನಲ್ಲಿ ಪಿಗ್ಗಿ ಬ್ಯಾಂಕನ್ನು ಇಟ್ಟುಕೊಂಡು ದಿನ ಸಂಜೆ ಇರುವ ಚಿಲ್ಲರೆಗಳನ್ನೆಲ್ಲ ಅದಕ್ಕೆ ಹಾಕುತ್ತಿದ್ದರು. ಆದರೆ ಸ್ನೇಹಿತ ರೋಹಿತ್ ರವರ ಪುತ್ರ ಅಭಿನವ್ ರಾವ್ ಈ ಪಿಗ್ಗಿ ಬ್ಯಾಂಕಿಗೆ ಹಣವನ್ನು ಶೇಖರಿಸುವುದರಲ್ಲಿ ನಿರತನಾಗಿದ್ದನು. ತದನಂತರ ಪಿಗ್ಗಿ ಬ್ಯಾಂಕನ್ನು ಅಭಿನವ್ ಬ್ಯಾಂಕ್ ಎಂದೇ ಕರೆಯಲಾರಂಭಿಸಿದ್ದರು.

ಸಾಮಾನ್ಯವಾಗಿ ನಾಯಿಗಳಿ ವೀಲ್ ಕಾರ್ಟ್ ಖರೀದಿಸಲು 10 ರಿಂದ 15 ಸಾವಿರ ರೂಪಾಯಿಗಳು ತಗಲುತ್ತದೆ. ಆದ್ದರಿಂದ ಅವರು ಸೆಕೆಂಡ್ ಹ್ಯಾಂಡ್ ವೀಲ್ ಕಾರ್ಟ ನ್ನು ಖರೀದಿಸಿ ಮೋನಾಳ ಕಾಲಿಗೆ ಆಸರೆಯಾದರು. ತದನಂತರ ಮೋನಾ ವೀಲ್ ಕಾರ್ಟ್ ನಲ್ಲಿ ವೇಗವಾಗಿ ಓಡುವ ವಿಡಿಯೋಗಳು ಮಾನವೀಯತೆಗೆ ಮರುಜೀವ ತುಂಬಿದುದನ್ನು ಸಾಬೀತು ಪಡೆಸಿದವು. ಅಭಿನವ್ ಮೋನಾಳ ವೀಲ್ ಕಾರ್ಟ್ ಗಾಗಿ ತನ್ನ ಖರ್ಚಿಗಿದ್ದ ಎಲ್ಲ ಹಣವನ್ನು ತಂದು ಪಿಗ್ಗಿ ಬ್ಯಾಂಕಿಗೆ ಹಾಕುತ್ತಿರುವುದನ್ನು ಮೋನಾ ವೀಲ್ ಕಾರ್ಟ್ ಧರಿಸಿದ ಫೋಟೋ ಇರುವ ಕ್ಯಾಲೆಂಡರ್ ಕೈಗೆ ಲಭಿಸಿದಾಗ ಮಹೇಶ್ ಹರ್ಷ ವ್ಯಕ್ತಪಡಿಸಿದರು. ಸದ್ಯ ಮೋನಾ ರೇಖಾ ವಿಜಯ್ ಕುಮಾರ್ ರವರ ಆಸರೆಯಲ್ಲಿ ಓಡಾಡುತ್ತಿದ್ದಾಳೆ. ಈ ಹುಡುಗನಿಗೊಂದು ಸೆಲ್ಯೂಟ್..

Leave a Reply