ಬಹುಭಾಷಾ ಹಾಡುಗಾರನಾಗಿ ನೀಡಿದ ಸಭಾ ಕಾರ್ಯಕ್ರಮವೊಂದರಲ್ಲಿ 76 ಭಾಷೆಗಳಲ್ಲಿ ಹಾಡುವ ಮೂಲಕ ಗಿನ್ನಿಸ್ ದಾಖಲೆ ಬರೆದ ಗಜಲ್ ಹಾಡುಗಾರ 51 ರ ಹರೆಯದ ಕೆಸಿರಾಜು ಶ್ರೀನಿವಾಸ್ ಇದೀಗ ಲೈಂಗಿಕ ಕಿರುಕುಳದ ಆರೋಪದಲ್ಲಿ ಜೈಲುಪಾಲಾಗಿದ್ದಾರೆ. ಶ್ರೀನಿವಾಸ್ ಸಂಸ್ಥಾಪಿಸಿದ ಭಕ್ತಿ ಹಾಡುಗಳ ಆಲಯವಾಣಿ ರೆಡಿಯೋ ದಲ್ಲಿ ಉದ್ಯೋಗಿಯಾಗಿದ್ದ 29 ರ ಹರೆಯದ ಯುವತಿಯು ವಿಡಿಯೋ ಮತ್ತು ಇತರೆ ದಾಖಲೆಗಳ ಸಮೇತ ತನ್ನ ಮೇಲೆ ಶ್ರೀನಿವಾಸ್ ರವರು ಕಳೆದ ಒಂಬತ್ತು ತಿಂಗಳಿನಿಂದ ಲೈಂಗಿಕ ಕಿರುಕುಳ ನೀಡುತ್ತಿದ್ದು ಅವರು ಹೇಳಿದಂತೆ ಪಾಲಿಸದಿದ್ದಲ್ಲಿ ಕೆಲಸದಿಂದ ಕಿತ್ತೆಸೆಯುವ ಬೆದರಿಕೆಯನ್ನು ನೀಡುತ್ತಿದ್ದಾರೆಂದು ಪೋಲಿಸರ ಮೊರೆ ಹೋಗಿದ್ದಳು. ಯುವತಿ ಮುಂದಿಟ್ಟ ಸಾಕ್ಷ್ಯಾಧಾರಗಳನ್ನು ಮುಂದಿಟ್ಟುಕೊಂಡು ಪೋಲಿಸರು ಶ್ರೀನಿವಾಸ್ ರವರನ್ನು ಬಂಧಿಸಿದ್ದು, ತನಗೆ ಥೆರಪಿ ನೀಡಲು ಓರ್ವ ಮಹಿಳೆ ಬರುತ್ತಿದ್ದು ಅವರೊಂದಿಗೆ ಸೇರಿ ಸೇವೆಗೈಯ್ಯಲು ಯುವತಿ ಸ್ವತಃ ಸೇರಿಕೊಂಡಿದ್ದಳೆಂದು ಹೇಳಿದ ಶ್ರೀನಿವಾಸ್ ತನ್ನ ಮೇಲಿನ ಆರೋಪವನ್ನು ತಳ್ಳಿ ಹಾಕಿದ್ದಾರೆ.

Leave a Reply