ಹೊಸದಿಲ್ಲಿ: ಬಿಜೆಪಿ ನಾಯಕ ಹಾಗೂ ಕೇಂದ್ರ ಸಚಿವ ಗಿರಿರಾಜಸಿಂಗ್ ಮುಸ್ಲಿಮರ ಜನಸಂಖ್ಯೆಯಲ್ಲಿ ಹೆಚ್ಚಳದ ಕುರಿತು ಆತಂಕ ವ್ಯಕ್ತಪಡಿಸುತ್ತಿದ್ದು, ಅದು ದೇಶಕ್ಕೆ ಅಪಾಯಕಾರಿ ಎಂದಿದ್ದಾರೆ.

ವರದಿಯಾಗಿರುವ ಪ್ರಕಾರ ಗಿರಿರಾಜ್ ದೇಶದೊಳಗಿನ ಜನಸಂಖ್ಯೆ ಮತ್ತು ವಿಶೇಷ ರೂಪದಲ್ಲಿ ಮುಸ್ಲಿಮರ ಜನಸಂಖ್ಯೆ ದೇಶಕ್ಕೆ ಅಪಾಯಕಾರಿಯಾಗಿದೆ. ಜೊತೆಗೆ ಅಭಿವೃದ್ಧಿಗೂ ಅಪಾಯಕಾರಿಯಾಗಿದೆ ಎಂದಿದ್ದಾರೆ. ಅವರು ಸಾಮಾಜಿಕ ಸಾಮರಸ್ಯದ ಕುರಿತು ಮಾತಾಡುತ್ತಾ ಹಿಂದೂ ಜನಸಂಖ್ಯೆ ಅನುಪಾತ ಕುಸಿದಿದೆ. ಮತ್ತು ಸಾಮಾಜಿಕ ಸಾಮರಸ್ಯ ಮುರಿದಿದೆ. ಕೇರಳದಲ್ಲಿ ಮುಸ್ಲಿಮರು ಬಿಹಾರದ ಕಿಶನ್ ಗಂಜ್, ಉತ್ತರ ಪ್ರದೇಶ, ಕೈರಾನ, ಬಿಹಾರದ ರಾನಿ ಸಾಗರ ಮತ್ತು ಭೋಪುರ ಜಿಲ್ಲೆಯಲ್ಲಿ ಇದಕ್ಕೆ ಸಾವಿರಾರು ಉದಾಹರಣೆ ಇದೆ ಎಂದಿದ್ದಾರೆ. ಅಭಿವೃದ್ಧಿ ಮತ್ತು ಸಾಮಾಜಿಕ ಸಾಮರಸ್ಯಕ್ಕಾಗಿ ಇದು ಒಳ್ಳೆಯ ವಿಷಯವಿಲ್ಲ. ಆದ್ದರಿಂದ ಇದರಲ್ಲಿ ಚರ್ಚೆ ಆಗಬೇಕಾಗಿದೆ. ಮತ್ತು ಕಾನೂನು ರೂಪಿಸಬೇಕಾಗಿದೆ ಎಂದು ಹೇಳಿದ್ದಾರೆ.

ಮುಸ್ಲಿಮರ ವಿರುದ್ಧ ಗಿರಿರಾಜ್ ಮೊದಲನೆ ಬಾರಿ ಮಾತಾಡಿಲ್ಲ. ಇದಕ್ಕಿಂತ ಮೊದಲು ಮುಸ್ಲಿಮರ ವಿರುದ್ಧ ಮಾತಾಡಿದ್ದು ಅವರನ್ನು ಅಲ್ಪಸಂಖ್ಯಾತ ಸ್ಥಾನದಿಂದ ಹೊರಗಿಡಬೇಕೆಂದಿದ್ದರು. ಭಾರತದಲ್ಲಿ ಮುಸ್ಲಿಮರ ಜನಸಂಖ್ಯೆ ಎಷ್ಟು ಹೆಚ್ಚಿದೆಯೆಂದರೆ ಅವರನ್ನು ಅಲ್ಪಸಂಖ್ಯಾತರ ಸ್ಥಾನದಿಂದ ಹೊರಗಿಡುವ ಕುರಿತು ಚರ್ಚೆ ನಡೆಯಬೇಕಾಗಿದೆ ಎಂದು ಹೇಳಿದ್ದಾರೆ.

Leave a Reply