ಈ ಚಿತ್ರದಲ್ಲಿ ಕಾಣುವ ಮಗು ಬೆಂಗಳೂರು, ಮಂಗಳೂರು, ಕಾರವಾರ, ಉಡುಪಿ ಹೀಗೆ ಕರ್ನಾಟಕದ ನಾನಾ ಊರಿನ ಪೋಲೀಸ್ ಠಾಣೆಯಲ್ಲಿದೆ ಎಂಬ ಸಂದೇಶಗಳು ಕಳೆದ ಒಂದು ವರ್ಷದಿಂದ ವಾಟ್ಸಾಪ್ ಮುಖಾಂತರ ಹರಿದಾಡುತ್ತಿದೆ.‌ ಆದರೆ ಇದು ನಿಜವೋ ಸುಳ್ಳೋ ಎಂದು ಆಲೋಚಿಸುವಷ್ಟು ಶಕ್ತಿ, ತಾಳ್ಮೆ ಜನರಿಗೆ ಇಲ್ಲ.

ನಿಜವಾಗಿಯೂ ಮಗು ಕಾಣೆಯಾಗಿದೆಯೇ?

ಇಲ್ಲ, ಇದೊಂದು ಫೇಕ್ ಸಂದೇಶವಾಗಿದೆ.‌ ಇಂತಹ ಹಲವಾರು ಮಕ್ಕಳ ಪೋಟೊಗಳು, ನಾನಾ ರೀತಿಯ ತಲೆಬರಹಗಳನ್ನು ಒಳಗೊಂಡು ನಮ್ಮ ವಾಟ್ಸಾಪ್ ಗ್ರೂಪ್‌ಗಲ್ಲಿ ಅಥವಾ ಫೇಸ್‌ಬುಕ್‌ ಗ್ರೂಪ್‌ಗಳಲ್ಲಿ ಕಾಣಬಹುದು. ಇವೆಲ್ಲವೂ ವಾಸ್ತವಕ್ಕೆ ದೂರವಾಗಿದೆ.

ಕೆಲವು ಕಿಡಿಗೇಡಿಗಳು ಫೇಸ್‌ಬುಕ್‌ ಮುಖಾಂತರ ತಮ್ಮ ಫಾಲೋವರ್ಸ್‌ಗಳನ್ನು, ಲೈಕ್, ಕಾಮೆಂಟ್‌ಗಳನ್ನು ಹೆಚ್ಚಿಸಲು ಇಂತಹ ಡೋಂಗಿತನ ಮಾಡುತ್ತಾರೆ ಎಂದು ತಿಳಿದುಬಂದಿದೆ.

ಮಗು ಪಿನ್ ನುಂಗಿದೆ, ಮಗು ಕಾಯಿನ್ ನುಂಗಿದೆ, ಮಹಡಿ ಮೇಲಿಂದ ಬಿದ್ದಿದೆ, ಅಪಘಾತವಾಗಿದೆ ಇದನ್ನು ಹತ್ತು ಗ್ರೂಪ್‌ಗಳಲ್ಲಿ ಶೇರ್ ಮಾಡಿ ವಾಟ್ಸಾಪ್, ಫೇಸ್‌ಬುಕ್‌ ಹಣ ನೀಡುತ್ತೆ ಎಂಬ ಸಂದೇಶಗಳು ಕಾಣ ಸಿಗುತ್ತವೆ. ಇವೆಲ್ಲವೂ ನಕಲಿ ಸಂದೇಶಗಳೆಂದು ಬಹಳಷ್ಟು ಬಾರಿ ಸಾಬೀತಾಗಿದೆ.

ಪೋಲಿಸರು ವಾಟ್ಸಾಪ್‌ನಲ್ಲಿ ಫೋಟೊ ಹಾಕುತ್ತಾರಾ?

ಇಂತಹ ಪ್ರಶ್ನೆಗಳು ಅಲ್ಪಸ್ವಲ್ಪ ವಿದ್ಯೆ ಕಲಿತ ಬುದ್ಧಿವಂತ ವ್ಯಕ್ತಿಯನ್ನು ಕೇಳಿದರೂ ಬಹುಶಃ ಉತ್ತರ ಲಭಿಸಬಹುದು. ಪೋಲಿಸರಿಗೆ ಅವರದ್ದೇ ಆದ ಜವಾಬ್ದಾರಿಗಳು ಇವೆ. ಅವರಿಗೆ ಅಪರಿಚಿತ ಮಕ್ಕಳು ಸಿಕ್ಕರೆ ಅವರನ್ನು ಅವರ ಪೋಷಕರ ಬಳಿ ತಲುಪಿಸುವ ಪ್ರಯತ್ನವನ್ನು ಮಾಡುತ್ತಾರೆ. ಅದಕ್ಕೆಂದೇ ಪ್ರತ್ಯೇಕವಾದ ವ್ಯವಸ್ಥೆಗಳಿರುತ್ತದೆ. ಈ ರೀತಿ ಬೇಜವಾಬ್ದಾರಿಯಿಂದ ಫೋಟೊ ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲು ಬಿಡುವುದಿಲ್ಲ. ಒಂದು ವೇಳೆ ಇದರ ಬಗ್ಗೆ ಹರಿದು ಬಿಡಲೇ ಬೇಕೆಂದಿದ್ದರೆ ಅಂತಹ ಮೆಸೇಜ್ ಗಳನ್ನು ಓದುವಾಗಲೇ ತಿಳಿಯಬಹುದು. ಇಲ್ಲವೇ ಆ ಬಗ್ಗೆ ಸ್ವಲ್ಪ ಮಾಹಿತಿ ಕಲೆ ಹಾಕಲು ಪ್ರಯತ್ನ ಪಡಬೇಕು.

ಬುದ್ಧಿವಂತ ನಾಗರಿಕರು ಈ ಬಗ್ಗೆ ಜನರನ್ನು ಎಚ್ಚರಿಸಬೇಕು. ಕಿಡಿಗೇಡಿಗಳ ಕುತಂತ್ರಕ್ಕೆ ಮುಗ್ಧರು ಬಲಿಯಾಗದಿರಲಿ ಎಂದಷ್ಟೆ ನಮ್ಮ ಹಾರೈಕೆ.

Leave a Reply