ತ್ರಿಶೂರ್ ನಲ್ಲಿರುವ ಸುನಿತಾರ ಮನೆಯೊಳಗೆ ಹೋದರೆ ನಿಮಗೆ ಹಲವಾರು ವಿಧದ ನಾಯಿಗಳನ್ನು ಕಾಣಬಹುದು.

ಸ್ಮಿತಾ ಎಂದು ಸಹ ಕರೆಯಲ್ಪಡುವ ಮೂವತ್ತೊಂಭತ್ತು ವರ್ಷದ ಸುನಿತಾ ಎರಡು ಕೊಠಡಿಯ ಗುಡಿಸಲಿನಲ್ಲಿ ನಾಯಿ ಸಾಕುತ್ತಿದ್ದಾರೆ.
ಒಂದು ಹಂತದಲ್ಲಿ 30 ಬೀದಿ ನಾಯಿಗಳನ್ನು ಅವರು ಸಾಕುತ್ತಿದ್ದರು.
ಮುಂಚೆ ಅವರು ಯಾವುದೇ ಸಾಕು ಪ್ರಾಣಿಯನ್ನು ಸಾಕುತ್ತಿರಲಿಲ್ಲ. ಹತ್ತಿರದ ಮನೆಯಲ್ಲಿ ನಾಯಿಯೊಂದು ಏಳು ಮರಿಗಳಿಗೆ ಜನ್ಮ ಕೊಟ್ಟಿತು. ಅವರು ಅದನ್ನು ಸಾಕಲು ನಿರಾಕರಿಸಿದರು. ಎರಡು ನಾಯಿ ಮರಿ ಸತ್ತು ಹೋಯಿತು. ನನ್ನ ಗಂಡ ಅದನ್ನು ಮನೆಗೆ ತಂದರು. ತಾತ್ಕಾಲಿಕ ಶೆಡ್ ಮಾಡಿ ಅದನ್ನು ಸಾಕಲು ತೊಡಗಿದೆವು. ನಂತರ ಬೀದಿಯಲ್ಲಿ ಲಾರಿಯಡಿ ಬಿದ್ದು ಸಾಯಲಿದ್ದ 5 ಅನಾಥ ನಾಯಿ ಮರಿಗಳನ್ನು ಗಂಡ ತಂದರು. ನಂತರ ಹಲವು ಬೀದಿ ನಾಯಿಗಳನ್ನು ಸಾಕಲು ತೊಡಗಿದೆವು. ಮೊದಲು ಅವುಗಳು ನಮ್ಮ ಜೊತೆ ಇರಬಹದೇ ಎಂಬ ಆತಂಕ ಇತ್ತು. ಆದರೆ ಈಗ ಅವು ನಮ್ಮ ಜೀವನದ ಭಾಗವಾಗಿದೆ ಎಂದು ಸುನಿತಾ ಹೇಳುತ್ತಾರೆ.

ಖಾಸಗಿ ಕಂಪೆನಿಯೊಂದರಲ್ಲಿ ದುಡಿಯುತ್ತಿರುವ ಸುನಿತಾರಿಗೆ ಇದು ಸವಾಲಿನ ಕೆಲಸವಾಗಿದೆ. 80 ಕೆಜಿ ಅಕ್ಕಿ ನಾಯಿಗಳನ್ನು ಸಾಕಲು ಬೇಕಾಗುತ್ತದೆ. ಮೆಡಿಕಲ್ ಇನ್ನಿತರ ಖರ್ಚು ಸರಿ ಸುಮಾರು ತಿಂಗಳಿಗೆ ಎಂಟು ಸಾವಿರ ತಗಲುತ್ತದೆ.

ನನ್ನ ನಾಯಿ ಯಾರಿಗೂ ಕಚ್ಚುವುದಿಲ್ಲ. ಆದರೆ ಎಷ್ಟಾದರೂ ನಾಯಿಯಲ್ಲವೇ? ನೆರೆಯವರ ಚಪ್ಪಲಿ ಶೂ ಕಾಣೆಯಾದರೆ ಬಂದು ನನ್ನಲ್ಲಿ ತಕರಾರು ಮಾಡುತ್ತಾರೆ. ಕೊನೆಗೆ ನಾನು ವಿಧಿಯಿಲ್ಲದೆ ನಷ್ಟ ಭರಿಸುತ್ತೇನೆ. ಆದ್ದರಿಂದ ವಿಶಾಲ ಕೋಣೆ ಕಟ್ಟಿ ಅದರಲ್ಲಿ ಸಾಕಬೇಕು ಎಂದು ತೀರ್ಮಾನ ಮಾಡಿದ್ದೇನೆ ಎನ್ನುತ್ತಾರೆ ಸ್ಮಿತಾ.

ಸುನಿತಾ ಅಥವಾ ಸ್ಮಿತಾರಿಗೆ ಆರ್ಥಿಕ ನೆರವು ನೀಡಲು ನಿಮಗೆ ಇಚ್ಛೆ ಇದ್ದರೆ ನೀವು ಸಹಕರಿಸಬಹುದು. ಕೊಡುಗೆ ನೀಡಲು, ನೀವು 8078146977 ರಲ್ಲಿ ಅವರೊಂದಿಗೆ ಸಂಪರ್ಕಿಸಬಹುದು.

ಕೃಪೆ : ದಿ ನ್ಯೂಸ್ ಮಿನಿಟ್
ಅನುವಾದ: ಇದು ನಮ್ಮ ಊರು

 

Leave a Reply