ಸಮ್ಮಿಶ್ರ ಸರಕಾರಕ್ಕೆ ಯಾವುದೇ ಅಡ್ಡಿ ಆತಂಕಗಳಿಲ್ಲ. ಅದು ತನ್ನ ಪೂರ್ಣಾವಧಿಯನ್ನು ನಿರಾತಂಕವಾಗಿ ಪೂರೈಸಲಿದೆ. ಮೇಲ್ಮನೆ ಚುನಾವಣೆ ಬಳಿಕ ಶೀಘ್ರವೇ ಸಚಿವ ಸಂಪುಟ ಪುನಾರಚನೆ ಆಗಾಗಲಿದೆ ಎಂದು ಸಮನ್ವಯ ಸಮಿತಿ ಅಧ್ಯಕ್ಷರೂ, ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಮೈತ್ರಿ ಸರಕಾರದ ವಿರುದ್ಧ ಭುಗಿಲೆದ್ದ ಅಪಸ್ವರದ ಕುರಿತು ಮಾತನಾಡಿದ ಅವರು, ಮೈತ್ರಿ ಸರಕಾರದಲ್ಲಿ ಕೆಲವೊಂದು ಬಿನ್ನಾಭಿಪ್ರಾಯ ಇವೆಯೇ ಹೊರತು, ಸರಕಾರಕ್ಕೆ ಯಾವುದೇ ಅಡ್ಡಿ ಆತಂಕಗಳಿಲ್ಲ. ಭಿನ್ನಾಭಿಪ್ರಾಯಗಳನ್ನು ಶೀಘ್ರ ಬಗೆಹರಿಸುತ್ತೇವೆ. ಆದರೆ ಇದನ್ನೇ ಮುಂದಿಟ್ಟು ಬಿಜೆಪಿಯವರು ಹುಯಿಲೆಬ್ಬಿಸುತ್ತಿದ್ದು, ಅವರ ಆಸೆ ಈಡೇರುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

ಪಕ್ಷದಲ್ಲಿ ಕೆಲವೊಂದು ಆಕಾಂಕ್ಷಿಗಳಿರುವುದು ಸಹಜ. ಅದಕ್ಕಾಗಿ ಕೆಲವೊಂದು ಬೇಡಿಕೆ ಇಟ್ಟಿರುವುದು ನಿಜ. ಆದರೆ ಸರಕಾರ ಐದು ವರ್ಷ ಪೂರೈಸುತ್ತದೆ. ಮಂತ್ರಿ ಸರಕಾರ ಆದ ಮೇಲೆ ಮಂತ್ರಿ ಪದವಿ ಕೇಳುವುದರಲ್ಲಿ ತಪ್ಪೇನಿದೆ. ಎಲ್ಲರಿಗೂ ಆಸೆ ಆಕಾಂಕ್ಷೆಗಳು ಇದ್ದೇ ಇರುತ್ತದೆ. ಭಿನ್ನಮತ ಎಂಬುದು ಬಿಜೆಪಿ ಮತ್ತು ಮಾಧ್ಯಮಗಳ ಸೃಷ್ಟಿ ಎಂದು ಹೇಳಿದ್ದಾರೆ.

Leave a Reply