ಸತತ ಐದು ದಿನಗಳ ಸುದೀರ್ಘವಾದ ಯೋಗ ಪ್ರದರ್ಶನ ನೀಡುವ ಮೂಲಕ ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ ಗುರುವಾರ ಕವಿತಾ ಭರಣಿಧರನ್ ತನ್ನ ಹೆಸರನ್ನು ದಾಖಲಿಸಿದ್ದಾರೆ.

ಮೂರೂವರೆ ವಯಸ್ಸಿನ ಮಗುವಿನ ತಾಯಿಯಾಗಿರುವ ಅವರು ಡಿಸೆಂಬರ್ 23 ರಂದು ಬೆಳಗ್ಗೆ 7 ಗಂಟೆಗೆ ಪ್ರಾರಂಭಿಸಿ, ಸುದೀರ್ಘವಾದ ಯೋಗ ಪ್ರದರ್ಶನ ಮೂಲಕ ಹಿಂದಿನ ದಾಖಲೆಯನ್ನು ಮುರಿದರು.

ಈ ಹಿಂದೆ ನಾಸಿಕ್‍ನ ಪ್ರಧಾನ ಪಾಟೀಲ್ ಅವರು ಇದೇ ವರ್ಷದ ಜೂನ್ ತಿಂಗಳಲ್ಲಿ 16 ರಿಂದ 20ನೆ ತಾರೀಕಿನವರೆಗೂ 103 ಗಂಟೆಗಳ ಸತತ ಯೋಗಪಟ್ಟುಗಳನ್ನು ಮಾಡುವ ಎಲ್ಲರ ಮೆಚ್ಚುಗೆ ಪಾತ್ರರಾಗಿದ್ದರಲ್ಲದೆ ದಾಖಲೆಯನ್ನು ನಿರ್ಮಿಸಿದ್ದರು. ಈಗ ಚೆನ್ನೈನ ಭರಣಿ ಅವರು ಈ ದಾಖಲೆಯನ್ನು ಮುರಿದಿದ್ದು ಡಿಸೆಂಬರ್ 30ರವರೆಗೂ ಈ ಯೋಗ ಮ್ಯಾರಥಾನ್ ಅನ್ನು ಮುಂದುವರಿಸುವ ಮೂಲಕ ಸತತ 7 ದಿನಗಳ ನಿರಂತರ ಪ್ರದರ್ಶನ ನೀಡಿದ ನೂತನ ದಾಖಲೆಯನ್ನು ತನ್ನದಾಗಿಸಿಕೊಳ್ಳುವತ್ತ ಗುರಿ ನೆಟ್ಟಿದ್ದೇನೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

Leave a Reply