ಗುರುವಾಯೂರ್: ಬಂದ್‍ನ ಡುವೆಯೂ ಗುರುವಾಯೂರಿನಲ್ಲಿ ಮದುವೆಯ ರಶ್ಶು. ಸೋಮಾರ ಇಲ್ಲಿ 137 ಮದುವೆಗಳು ಆಗಿವೆ. ಕೇರಳದ ನೆರೆ ಹಾವಳಿಯಿಂದಾಗಿ ಮುಂದೂಡಲಾಗಿದ್ದ ಮದುವೆಗಳು ಇಂದು ನಡೆದಿವೆ.

ಬೆಳಗ್ಗೆ 9ರಿಂದ ಹತ್ತು ಗಂಟೆಯ ನಡುವೆ ಹೆಚ್ಚಿನ ಮದುವೆಗಳುಆಗಿವೆ. ಮದುವೆಯನ್ನು ನಿಶ್ಚಯಿಸಿದ ಮುಹೂರ್ತದಲ್ಲಿ ಮಾಡಿದರೂ ಔತಣಕೂಟಕ್ಕೆ ಬೇರೆ ದಿವಸಕ್ಕೆ ಹಲವರು ನಿಶ್ಚಯಿಸಿದ್ದಾರೆ. ಮಧ್ಯಾಹ್ನದವರೆಗೆ ಗುರುವಾಯೂರು ನಗರದಲ್ಲಿ ರಸ್ಸಿತ್ತು. ಮದುವೆಯಲ್ಲಿ ಭಾಗವಹಿಸಲು ಬಂದವರ ವಾಹನಗಳಿಗೆ ಯಾರೂ ಅಡ್ಡಿಪಡಿಸಲಿಲ್ಲ. ರವಿವಾರ ರಾತ್ರೆಯಿಂದಲೆ ನಗರದಲ್ಲಿ ಜನಜಂಗುಳಿಯಿತ್ತು. ಲಾಡ್ಜ್‍ಗಳಲ್ಲಿಯೂ ರಸ್ಸಿತ್ತು. ಆದ್ದರಿಂದ ಹಲವುರ ದೇವಾಸ್ಥಾನದಲ್ಲಿಯೇ ರಾತ್ರೆ ಕಳೆದರು.

ಪಾರ್ಕಿಂಗ್ ಮೈದಾನದಲ್ಲಿ ತುಂಬಿದ್ದವು. ಆದ್ದರಿಂದ ವಾಹನಗಳನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಲಾಗಿತ್ತು. ಹೊಟೇಲುಗಳು ಮುಚ್ಚಿದ್ದರಿಂದ ದೇವಾಸ್ಥಾನದ ಪ್ರಸಾದ ವರದಾನವಾಯಿತು. ಬೆಳಗ್ಗೆ ದೇವಸ್ಥಾನದಲ್ಲಿ ಕೊಡುವ ಉಪ್ಪಿಟ್ಟು,ಚಾ ವಿತರಣೆ ಸಮಯವನ್ನು ಒಂದು ಗಂಟೆ ಹೆಚ್ಚಿಸಲಾಯಿತು. ಮಧ್ಯಾಹ್ನದ ಪ್ರಸಾದ ಊಟ ಕೂಡಾ ಹೆಚ್ಚು ಮಂದಿಗಾಗಿ ತಯಾರಿಸಲಾಗಿತ್ತು.

photo courtesy : Madhyamam

Leave a Reply