ಲಖನೌ: ಉತ್ತರ ಪ್ರದೇಶದಲ್ಲಿ ಹಜ್‌ ಭವನಕ್ಕೆ ಯೋಗಿ ಸರ್ಕಾರ ಕೇಸರಿ ಬಣ್ಣ ಬಳಿದಿದ್ದು, ಇದರ ವಿರುದ್ಧ ಕೆಲವು ಮುಸ್ಲಿಂ ಮೌಲ್ವಿಗಳು ಆಕ್ರೋಶ ವ್ಯಕ್ತ ಪಡಿಸಿದ್ದರು. ವಿರೋಧ ಪಕ್ಷದ ಈ ಬಗ್ಗೆ ತರಾಟೆಗೆ ತೆಗೆದುಕೊಂಡಿತ್ತು.

ಬಣ್ಣ ಬಳಿದ ಖಾಸಗಿ ಗುತ್ತಿಗೆದಾರರು ಬಣ್ಣ ಆಯ್ಕೆ ಮಾಡುವಲ್ಲಿ ತಪ್ಪೆಸಗಿದ್ದು, ಖಾಸಗಿ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹಜ್ ಕಮಿಟಿ ಹೇಳಿದೆ. ಇದೀಗ ಕೇಸರಿ ಬಣ್ಣ ತೆಗೆದು ಗೋಡೆಗೆ ಕ್ರೀಮ್ ಬಣ್ಣ ಹಚ್ಚುವ ಕಾರ್ಯ ಶನಿವಾರ ನಡೆದಿದೆ.

ಈ ಹಿಂದೆ ಹಜ್‌ ಭವನದ ಗೋಡೆಗಳು ಬಿಳಿ ಮತ್ತು ಹಸಿರು ಬಣ್ಣ ಹೊಂದಿತ್ತು. ಇತ್ತೀಚೆಗೆ ಅದಕ್ಕೆ ಕೇಸರಿ ಬಣ್ಣ ಬಳಿಯಲಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಹಜ್ ಕಮಿಟಿ ಕಾರ್ಯದರ್ಶಿ ಗೋಡೆಗೆ ಕೇಸರಿ ಬಣ್ಣ ಬಳಿದುದರ ಹಿಂದೆ ಬೇರೆ ಯಾವ ಉದ್ದೇಶವೂ ಇಲ್ಲ ಎಂದಿದ್ದಾರೆ. ಯೋಗಿ ಸರ್ಕಾರದಲ್ಲಿ ಸರ್ಕಾರಿ ಕಚೇರಿಗಳು, ಬಸ್ ಗಳು ಕೇಸರಿ ಬಣ್ಣಕ್ಕೆ ತಿರುಗಿದ್ದು, ಇದೀಗ ಹಜ್ ಭವನವೂ ಹಾಗೆ ಬದಲಾದುದರಿಂದ ವಿವಾದ ಸೃಷ್ಟಿಸಿತ್ತು.

Leave a Reply