Representational Image

ಮಹಿಳೆಯರಿಗೆ ಲೈಂಗಿಕ ಕಿರುಕುಳ ತಪ್ಪಿದ್ದಲ್ಲ. ಅದು ಮೇಲುಸ್ಥರದಿಂದ ಹಿಡಿದು ಕೆಳಗಿನ ಮಟ್ಟದ ವರೆಗೆ ದುಡಿಯುವ ಮಹಿಳೆಯರು ಒಂದಲ್ಲ ಒಂದು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಕೆಲವರು ಇಂತಹ ಸವಾಲುಗಳನ್ನು ಬಹಳ ಧೈರ್ಯದಿಂದ ಎದುರಿಸುತ್ತಾರೆ. ಅಂತಹ ಒಂದು ಘಟನೆ ಏರ ಇಂಡಿಯಾ ಸಿಬ್ಬಂದಿಯೋರ್ವರಿಂದ ನಡೆದಿದೆ. ಏರ್ ಇಂಡಿಯಾ ತನ್ನ ಸೀನಿಯರ್ ಕಾಪ್ಟನ್ ವಿರುದ್ಧ ವಿಚಾರಣೆ ನಡೆಸಲು ಆದೇಶ ನೀಡಿದೆ. ತನ್ನ ಕಿರಿಯ ಮಹಿಳಾ ಸಹದ್ಯೋಗಿಯೊಂದಿಗೆ ಅನುಚಿತ ವಾಗಿ ಪ್ರಶ್ನೆ ಕೇಳಿದ್ದು, ನಿನಗೆ ಪ್ರತಿ ದಿನ ಸೆಕ್ಸ್ ಬೇಡವೇ ಎಂದು ಪ್ರಶ್ನೆ ಕೇಳಿದ್ದಾಗಿ ಆರೋಪಿಸಲಾಗಿದೆ. ಮಹಿಳೆ ತನ್ನ ಮೇಲಾಧಿಕಾರಿಯ ಮೇಲೆ ಕೇಸು ದಾಖಲಿಸಿದ್ದಾರೆ. ಹಿರಿಯ ಕಾಪ್ಟನ್ ಈ ಮಹಿಳೆಗೆ ತರಬೇತಿ ನೀಡಿದ್ದು, ತರಬೇತಿಯ ಬಳಿಕ ಮೇ 5 ರಂದು ಹೈದರಾಬಾದ್ನ ನಗರದ ರೆಸ್ಟೊರಾಂಟಿಗೆ ರು ಭೋಜನಕೂಟಕ್ಕೆ ಆಹ್ವಾನಿಸಿದರು. ಅವರನ್ನು ಗೌರವಿಸಿ ನಾನು ಒಪ್ಪಿದೆ.

ಸುಮಾರು 8 ಗಂಟೆಗೆ ನಾವು ರೆಸ್ಟಾರೆಂಟ್ಗೆ ಹೋದೆವು ಮತ್ತು ಅಲ್ಲಿ ನನ್ನ ಅಗ್ನಿಪರೀಕ್ಷೆ ಪ್ರಾರಂಭವಾಯಿತು ಎಂದು ಮಹಿಳೆ ಹೇಳಿದ್ದಾರೆ. ಅವರು ತಮ್ಮ ವೈವಾಹಿಕ ಜೀವನದಲ್ಲಿ ಅತೃಪ್ತಿ ಹೊಂದಿದ್ದಾರೆ ಎಂದು ಮಾತು ಆರಂಭಿಸಿ ಬಳಿಕ ನಿನ್ನ ಗಂಡ ಹೊರಗೆ ಇರುತ್ತಾರೆ. ನಿನಗೆ ಪ್ರತಿ ದಿನ ಸೆಕ್ಸ್ ಬೇಕಿಲ್ಲವೇ ಎಂದೆಲ್ಲ ಅನುಚಿತವಾಗಿ ಕೇಳಿದ್ದಾರೆ. ನನಗೆ ಬೇಸರವಾಗಿ ನಾನು ಹೋಟೆಲ್ ನಿಂದ ಹೊರಗೆ ಬಂದೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

Leave a Reply