ಅಹ್ಮದಾಬಾದ್: ಮೀಸಲಾತಿ ಹಾಗೂ ರೈತರ ಸಾಲಮನ್ನಾಕ್ಕಾಗಿ ಒತ್ತಾಯಿಸಿ ಅನಿರ್ದಿಷ್ಟಾವಧಿ ಸತ್ಯಾಗ್ರಹ ನಡೆಸುತ್ತಿದ್ದ ಪಾಟೀದಾರ್ ಸಮುದಾಯದ ಮುಖಂಡ ಹಾರ್ದಿಕ್ ಪಟೇಲ್ ಬುಧವಾರ ತಮ್ಮ ಉಪವಾಸ ಕೊನೆಗೊಳಿಸಿದ್ದಾರೆ.

ಹತ್ತೊಂಬತ್ತು ದಿನಗಳ ನಂತರ ಅವರ ಉಪವಾಸ ಸತ್ಯಾಗ್ರಹವನ್ನು ಅವರು ಕೊನೆಗೊಳಿಸಿದ್ದು, ಸರಕಾರದಿಂದ ಸ್ಪಂದನೆ ಬರಬಹುದು ಎಂಬ ನಿರೀಕ್ಷೆಯಲ್ಲಿದ್ದ ಅವರಿಗೆ ಯಾವುದೇ ರೀತಿ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ನೀರನ್ನು ಕೂಡ ಸೇವಿಸುವುದನ್ನು ನಿಲ್ಲಿಸಿದ ಮೇಲೆ ಆರೋಗ್ಯ ಕ್ಷೀಣಿಸುತ್ತಾ ಬಂದಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಬೆಂಬಲಿಗರ ಒತ್ತಾಯಕ್ಕೆ ಮಣಿದು ಉಪವಾಸ ಸತ್ಯಾಗ್ರಹ ನಿಲ್ಲಿಸಿದ ನಂತರ ಟ್ವೀಟ್ ಮಾಡಿದ ಅವರು, ನನ್ನನ್ನು ಪ್ರೀತಿಸುವವರ ಸಲುವಾಗಿ, ಜೀವಂತ ಇರಲು ಬಯಸುತ್ತೇನೆ. ಅವರಿಗಾಗಿ ನಾನು ಸಾಯಲೂ ಸಿದ್ಧ. ಆದರೆ ನನ್ನ ಗೆಳೆಯರ ಸಲುವಾಗಿ ಬದುಕುತ್ತೇನೆ ಹೊರತು ನನ್ನನ್ನು ಕೊಲ್ಲಲು ಬಯಸುವವರ ಪ್ರಯತ್ನ ಸಫಲ ಆಗುವುದಕ್ಕೆ ಬಿಡುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ಮಾತ್ರವಲ್ಲ ನನ್ನ ಸಮುದಾಯ ಮತ್ತು ಕೃಷಿ ಸಾಲ ಮನ್ನಾಕ್ಕಾಗಿ ತನ್ನ ಹೋರಾಟ ಮುಂದುವರೆಸುವುದಾಗಿ ಹೇಳಿದ್ದಾರೆ.

Leave a Reply