ಬೆಡ್‍ರೆಸ್ಟ್ ತೆಗೆದುಕೊಳ್ಳುವುದರಿಂದ ಪ್ಲಾಸೆಂಟಾಗೆ ರಕ್ತ ಸಂಚಾರ ಹೆಚ್ಚುತ್ತದೆ ಹೆಚ್ಚಳವಾಗಲು ಕಾರಣವಾಗುತ್ತದೆ.

  • ನಿಮ್ಮ ವೈದ್ಯರು ಈ  ಕೆಳಗಿನ ಸಂದರ್ಭಗಳಲ್ಲಿ ನಿಮಗೆ ಬೆಡ್‍ರೆಸ್ಟನ್ನು ಸೂಚಿಸಬಹುದು 

  • ಅಧಿಕ ರಕ್ತದೊತ್ತಡ
  • ಯೋನಿಯಲ್ಲಿ ರಕ್ತಸ್ರಾವ ಅಥವಾ ಪ್ಲಾಸೆಂಟಾದಲ್ಲಿ ತೊಂದರೆ.
  • ಗರ್ಭ ದ್ವಾರವು ಅವಧಿಗಿಂತ ಮುನ್ನವೇ ತೆರೆಯಲ್ಪಟ್ಟಿರುವುದು.
  • ಅವಧಿಪೂರ್ವ ಹೆರಿಗೆ ಬೇನೆ ಮತ್ತು ಅದರ ಲಕ್ಷಣಗಳು ಗೋಚರವಾಗುವುದು.
  • ಅವಳಿ ಮಕ್ಕಳು ಮತ್ತು ಅದಕ್ಕಿಂತ ಹೆಚ್ಚಿನ ಮಗುವಿನ ಗರ್ಭಧಾರಣೆ.
  • ಗರ್ಭಸ್ಥ ಮಗುವಿನ ಬೆಳವಣಿಗೆ ಯಲ್ಲಿ ತೊಂದರೆಗಳು ಕಂಡು ಬರುವುದು.

ಬೆಡ್‍ರೆಸ್ಟ್ ಎಂದರೇನು?

ಕೆಲವು ಸಂದರ್ಭಗಳಲ್ಲಿ ವೈದ್ಯರು ಸೂಚಿಸುವ ಬೆಡ್‍ರೆಸ್ಟ್ ಅಂದರೆ ಹೆಚ್ಚಿನ ಕೆಲಸಗಳನ್ನು ಮಾಡದೆ ಸಾಮಾನ್ಯ ಮನೆ ಕೆಲಸಗಳನ್ನು ಒಂದು ಸೀಮಿತ ಅವಧಿಯ ವರೆಗೆ ಮಾಡುವುದು. ಮನೆಯೊಳಗೆ ಸ್ವತಂತ್ರವಾಗಿ ಓಡಾಡಲು ಅನುಮತಿ ಇದೆ. ಆದರೆ ಭಾರವಾದ ವಸ್ತುಗಳನ್ನು,
ಮಕ್ಕಳನ್ನು ಎತ್ತುವುದಾಗಲಿ, ಕಠಿಣ ಮನೆ ಕೆಲಸ ಮಾಡುವುದಾಗಲೀ ಮಾಡಬಾರದು. ನಿಮ್ಮ ಕೆಲಸದ ರೀತಿಯನ್ನು ಅನುಸರಿಸಿ,
ಕೆಲಸವನ್ನು ಮುಂದುವರಿಸಲು ಅವಕಾಶ ಸಿಗಬಹುದು.

ಕೆಲವು ಸಂದರ್ಭಗಳಲ್ಲಿ ಬೆಡ್‍ರೆಸ್ಟ್ ನಿರ್ದೇಶನಗಳು ಕಠಿಣವಾಗಿರಬಹುದು. ನಿಮಗೆ ಕೇವಲ ಕುಳಿತಿರಲು ಅಥವಾ ಒರಗಿಕೊಂಡಿರಲು ಮಾತ್ರ ಅವಕಾಶ ಸಿಗಬಹುದು. ಶೌಚಾಲಯಕ್ಕೆ, ಸ್ನಾನಕ್ಕೆ ಹೋಗಲು ಮಾತ್ರ ನಡೆದಾಡುವ ಅನುಮತಿ. ಇಲ್ಲದಿದ್ದರೆ ನಡೆಯಲು,  ಮನೆಯ ಸುಲಭದ ಕೆಲಸಗಳನ್ನು ನೆರವೇರಿಸಲು ಕೂಡಾ ಅನುಮತಿ ಇರುವುದಿಲ್ಲ. ಹೆರಿಗೆಯವರೆಗೆ ಈ ಪರಿಸ್ಥಿತಿ ಮುಂದುವರಿಯುತ್ತದೆ. ನಿಮ್ಮ ವೈದ್ಯರು ಸಂಪೂರ್ಣ ಬೆಡ್ ರೆಸ್ಟ್‍ಗೆ ಆದೇಶಿಸಿದ್ದರೆ ನೀವು ಸದಾ ಮಲಗಿಕೊಂಡು ಅಥವಾ ಒಂದೇ ಕಡೆ ತಿರುಗಿ ಮಲಗಿಕೊಂಡು ಇರಬೇಕಾಗುತ್ತದೆ. ತಿನ್ನುವಾಗಲೂ ಎದ್ದೇಳಬಾರದು. ಶುಚಿತ್ವ ಪಾಲಿಸಲು ಕೂಡಾ ಸ್ಪಂಜ್ ಬಾತ್‍ನಂತಹ ಕ್ರಮವನ್ನು ಕೈಗೊಳ್ಳಬೇಕಾಗುವುದು. ಇಂತಹ ರೀತಿಯ ಬೆಡ್‍ರೆಸ್ಟ್‍ಗೆ ಆಸ್ಪತ್ರೆಯಲ್ಲೇ ದಾಖಲಾಗಬೇಕಾದ ಪರಿಸ್ಥಿತಿಯೂ
ಬರಬಹುದು.

  • ಬೆಡ್‍ರೆಸ್ಟ್‍ನ ಅಡ್ಡಪರಿಣಾಮಗಳ ಬಗ್ಗೆಯೂ ಅರಿವಿರಲಿ

ನೀವು ಗರ್ಭಧಾರಣೆಯ ವೇಳೆ ಬೆಡ್‍ರೆಸ್ಟ್‍ನಲ್ಲಿದ್ದರೆ, ಸಂಧಿ ನೋವು, ಮಾಂಸಖಂಡಗಳ ನೋವು ಸಾಮಾನ್ಯ. ರಕ್ತ ಹೆಪ್ಪುಗಟ್ಟುವ ಸಾಧ್ಯತೆಯೂ ಹೆಚ್ಚಾಗಿರುತ್ತದೆ. ವಿಶೇಷವಾಗಿ ನರಗಳು ಮತ್ತು ಕಾಲುಗಳಲ್ಲಿ ಬೋನ್ ಮಾಸ್ ಕಡಿಮೆ ಯಾಗಬಹುದು. ಭಾವನಾತ್ಮಕವಾಗಿ, ನಿಮಗೆ ಖಾಲಿತನ ಮತ್ತು ಒಂಟಿತನದ ಅನುಭವವಾಗ ಬಹುದು. ಮೂಡ್ ಬದಲಾವಣೆ, ತಪ್ಪಿತಸ್ಥ ಭಾವನೆ, ಉದ್ವೇಗ, ಖಿನ್ನತೆ ಸಾಮಾನ್ಯ ವಾಗಿರುವುದು. ನಿಮ್ಮ ಬಾಳ ಸಂಗಾತಿಯೂ ಇದನ್ನೇ ಅನುಭವಿಸುತ್ತಿರುವನು. ಮಕ್ಕಳನ್ನು ನೋಡಿಕೊಳ್ಳುವುದು ಈ ದಿನಗಳಲ್ಲಿ ಒತ್ತಡವನ್ನುಂಟು ಮಾಡಬಲ್ಲದು. ಮಕ್ಕಳು ಕೂಡಾ ಭಯಭೀತ ರಾಗುವರು ಮತ್ತು ಗೊಂದಲದಲ್ಲಿರುವರು. ನಿಮಗೆ ಉದ್ಯೋಗಕ್ಕೆ ಹೋಗಲು ಸಾಧ್ಯವಾಗದಿರುವುದರಿಂದ ಆರ್ಥಿಕವಾಗಿಯೂ ಸಮಸ್ಯೆಗಳು ಉಂಟಾಗಬಹುದು. ಹೆರಿಗೆಯ ಬಳಿಕವೂ ಹೃದಯ ಮತ್ತು
ಮಾಂಸಖಂಡಗಳ ಚಟುವಟಿಕೆಗಳು ಪುನಃ ಸಹಜ ರೀತಿಗೆ ಮರಳಲು ಸಮಯ ತೆಗೆದುಕೊಳ್ಳಬಹುದು. ಇದರಿಂದ ನಿಮ್ಮ
ದೈನಂದಿನ ಚಟುವಟಿಕೆಗಳಿಗೆ ಮರಳಲು ತಡವಾಗಬಹುದು.

  • ನಿಯಮಗಳು ತಿಳಿದಿರಲಿ

ನಿಮ್ಮ ವೈದ್ಯರು ನಿಮಗೆ ಬೆಡ್‍ರೆಸ್ಟ್ ಮಾಡಲು ಸಲಹೆ ನೀಡಿದರೆ, ಅವರೊಂದಿಗೆ ಇದರ ಬಗ್ಗೆ ಅನೇಕ ಪ್ರಶ್ನೆಗಳನ್ನು ಕೇಳಬೇಕು. ಇದರಿಂದ ನಿಮಗೆ ನಿಯಮಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗಬಹುದು. ಸಮಯ: ನನಗೆ ಯಾಕೆ ಬೆಡ್ರೆಸ್ಟ್ ಬೇಕು? ಯಾವಾಗ ಆರಂಭಿಸಬೇಕು? ಅನಾರೋಗ್ಯದ ಲಕ್ಷಣಗಳು ಹೊರಟು ಹೋದರೆ ಈ ನಿಬಂಧನೆಗಳು ತೆಗೆಯಲ್ಪಡುತ್ತದೆಯೇ?

ಸ್ಥಿತಿ: ಕುಳಿತುಕೊಳ್ಳಬಹುದೇ? ಎಷ್ಟು ಹೊತ್ತು? ಮೆಟ್ಟಿಲುಗಳನ್ನು ಹತ್ತಬಹುದೇ? ಯಾವಾಗ ಮಲಗಬೇಕು. ಯಾವುದಾದರೂ ಒಂದೆಡೆ ತಿರುಗಿ ಮಲಗಬೇಕೇ? ರಕ್ತ ಹೆಪ್ಪು ಕಟ್ಟದಿರಬೇಕಾದರೆ ಏನು ಮಾಡಬೇಕು?

ವೈಯಕ್ತಿಕ ಸ್ವಚ್ಛತೆ: ಶೌಚಾಲಯಕ್ಕೆ ಹೋಗಲು ಎದ್ದು ನಡೆದಾಡಬಹುದೇ? ಸ್ನಾನ ಮಾಡಬಹುದೇ, ತಲೆ ಕೂದಲು ತೊಳೆದುಕೊಳ್ಳಬಹುದೇ.

ಚಟುವಟಿಕೆ: ಊಟವನ್ನು ಡೈನಿಂಗ್ ಟೇಬಲ್ ಬಳಿ ಹೋಗಿ ತಿನ್ನಬಹುದೇ? ಬಟ್ಟೆ ಮಡಚಿಡುವುದು ಮತ್ತು ಅಂತಹ ಸರಳ ಮನೆಕೆಲಸಗಳನ್ನು ಮಾಡಬಹುದೇ? ಕಾರು ಚಲಾಯಿಸಬಹುದೇ? ಸರಳ ವ್ಯಾಯಾಮಗಳನ್ನು ಮಾಡಬಹುದೇ? ಅತ್ಯುತ್ತಮವಾದುದನ್ನು ಮಾಡಿ ನೆನಪಿರಲಿ ನಿಮ್ಮ ಬೆಡ್‍ರೆಸ್ಟ್‍ನ ಪ್ರತಿದಿನ ಮುಗಿಯುವಾಗ ನೀವು ನಿಮ್ಮ ಹೆರಿಗೆಗೆ ಒಂದು ದಿನ ಹತ್ತಿರವಾಗುತ್ತೀರಿ. ಈ ವೇಳೆಯಲ್ಲಿ ಈ ಕೆಳಗಿನ ವಿಷಯಗಳತ್ತ ಗಮನವಿಡಿ.

ಅಚ್ಚುಕಟ್ಟುತನ ಪಾಲಿಸಿ: ಎಲ್ಲ ವಸ್ತುಗಳು ನಿಮ್ಮ ಕೈ ಅಳತೆಯಲ್ಲಿ ಸಿಗುವಂತೆ ಜೋಡಿಸಿಕೊಳ್ಳಿ. ಮೊಬೈಲ್, ಲಾಪ್‍ಟಾಪ್, ಕಂಪ್ಯೂಟರ್ ಮತ್ತಿತರ ಉಪಕರಣಗಳು, ಒಂದು ಫ್ರಿಜ್ ನೀರು ಮತ್ತು ಆರೋಗ್ಯ ಪೂರ್ಣ ಆಹಾರಗಳು, ಟಿಷ್ಯೂ, ಲಿಪ್ ಬಾಮ್, ಕೈ ಒರೆಸುವ ಬಟ್ಟೆ, ರಿಮೋಟ್ ಕಂಟ್ರೋಲ್, ಪುಸ್ತಕಗಳು, ಮ್ಯಾಗಝಿನ್ ಗಳು, ಬರೆಯುವ ವಸ್ತುಗಳು, ಹೆಚ್ಚಿನ ತಲೆದಿಂಬು ಮತ್ತು ಬ್ಲಾಂಕೆಟ್‍ಗಳು.

ಏಕತಾನತೆಯನ್ನು ಗೆಲ್ಲಿರಿ ನಿಮ್ಮ ಗೆಳತಿಯರಿಗೆ, ಸಂಬಂಧಿಕರಿಗೆ ಎಸ್.ಎಮ್.ಎಸ್. ಕಳಿಸಿ, ಇಮೇಲ್ ಮಾಡಿ, ಕಾಗದ ಬರೆಯಿರಿ. ನಿಮ್ಮ ಹಳೆಯ ಆಲ್ಬಮ್‍ಗಳನ್ನು ನೋಡಿ. ಪುನಃ ಹೊಸದಾಗಿ ಜೋಡಿಸಿ ಮಗುವಿಗೆ ಸ್ವೆಟರ್ ಹೊಲಿಯಿರಿ. ಉತ್ತಮ ಪುಸ್ತಕಗಳನ್ನು ಓದಿ. ರಿಲಾಕ್ಸ್ ಆಗುವುದನ್ನು ಕಲಿಯಿರಿ. ದೈನಂದಿನ ಆಹಾರದ ಲಿಸ್ಟ್ ಮಾಡಿ. ವಾರ, ತಿಂಗಳ ಸಾಮಾಗ್ರಿಗಳ ಲಿಸ್ಟ್ ಮಾಡಿ. ನಿಮ್ಮ ಫ್ಯಾಮಿಲಿ ಬಜೆಟ್ ತಯಾರಿಸಿ. ಮಗುವಿನ ವಸ್ತುಗಳನ್ನು ಆನ್‍ಲೈನ್‍ಗಳಲ್ಲಿ ಖರೀದಿಸಿ.

ಸರಳ ವ್ಯಾಯಾಮ:

ನಿಮ್ಮ ವೈದ್ಯರು ಅನುಮತಿ ನೀಡಿದರೆ ಇದನ್ನು ಮಾಡಬಹುದು.

ಸಹಾಯವನ್ನು ಪಡೆದುಕೊಳ್ಳಿ: ನಿಮ್ಮ ಆತ್ಮೀಯರು, ಗೆಳತಿಯರು ಯಾವುದಾದರೂ ಸಹಾಯಬೇಕಾ ಎಂದು ಕೇಳಿದರೆ ಪ್ರೀತಿಯಿಂದ ಒಪ್ಪಿಕೊಳ್ಳಿ. ಲಾನ್ ಸರಿಪಡಿಸುವುದು, ಸಾಮಗ್ರಿ ಖರೀದಿಸಿ ತರಲು, ಮಕ್ಕಳನ್ನು ಪಾರ್ಕ್‍ಗೆ ಕರೆದುಕೊಂಡು ಹೋಗಲು. ಸುಮ್ಮನೆ ನಿಮ್ಮೊಂದಿಗೆ ಸ್ವಲ್ಪ ಸಮಯ ಕಳೆಯಲು ಅವರನ್ನು ಕರೆಯಿರಿ.

ನಿಮ್ಮ ದೊಡ್ಡ ಮಕ್ಕಳನ್ನು ಹೊಂದಿಕೊಳ್ಳುವಂತೆ ಮಾಡಿ: ನಿಮಗೆ ದೊಡ್ಡ ಮಕ್ಕಳಿದ್ದರೆ ಅವರಿಗೂ ಸೂಕ್ತ ವ್ಯವಸ್ಥೆ ಮಾಡಿ. ಅವರು ಶಾಲೆಗೆ,
ನರ್ಸರಿಗೆ ಹೋಗುತ್ತಿದ್ದರೆ ಅವರನ್ನು ಕರೆತರಲು, ಬಿಡಲು ಸೂಕ್ತ ನಂಬಿಕಸ್ಥ ಜನರನ್ನು ನೇಮಿಸಿ ಅವಳನ್ನು ಅಜ್ಜಿ ಮನೆಗೆ ಕಳುಹಿಸಿ. ನೀವು ಮಗು ಹುಟ್ಟುವವರೆಗೆ ಹೀಗೆಯೇ ಮಲಗಿಕೊಂಡು ರೆಸ್ಟ್ ಪಡೆಯಬೇಕಾಗುತ್ತದೆ. ಹಾಗೆ ಮಾಡಿದರೆ ಆರೋಗ್ಯವಂತ ಮಗು ಜನಿಸುತ್ತದೆ
ಎಂಬುದನ್ನು ಅವರಿಗೆ ಮನವರಿಕೆ ಮಾಡಿಸಿ. ಬರೆಯುವ, ಓದುವ, ಟಿ.ವಿ. ನೋಡುವ ಕೆಲಸ ಮಕ್ಕಳ ಜೊತೆ ಮಾಡಿ.

ಸಪೋರ್ಟ್ ಪಡೆದುಕೊಳ್ಳಿ: ಕೆಲವು ದಿನಗಳು ಕಳೆದರೆ ಎಲ್ಲವೂ ಸರಿಯಾಗುತ್ತದೆ. ಸಕಾರಾತ್ಮಕವಾಗಿರಬೇಕಿದ್ದರೆ, ಈ
ಮೊದಲು ರೆಸ್ಟ್ ಪಡೆಯುತ್ತಿದ್ದ ಅಮ್ಮಂದಿರನ್ನು ಸಂಪರ್ಕಿಸಿ. ಅಂತಹವರೊಂದಿಗೆ ವಿಷಯಗಳನ್ನು ಹಂಚಿಕೊಳ್ಳಿ

ಭಾವನಾತ್ಮಕ ಸಂಘರ್ಷವನ್ನು ನಿರೀಕ್ಷಿಸಿ: ನಿಮ್ಮ ಭಯ, ಆಶೆ ಮತ್ತು ಕಾಳಜಿಯನ್ನು ನಿಮ್ಮ ಬಾಳಸಂಗಾತಿಯೊಂದಿಗೆ
ಹಂಚಿಕೊಳ್ಳಿ. ಅಗತ್ಯವಿರುವಾಗ ಬಳಿ ಯಲ್ಲಿರಿ. ಲೈಂಗಿಕ ಚಟುವಟಿಕೆಗಳಿಗೆ ಅನುಮತಿ ಇಲ್ಲದಿದ್ದರೆ ನಿಮ್ಮ ಸಂಬಂಧವು
ಇನ್ನಷ್ಟು ಹತ್ತಿರವಾಗಿರಲು ಚುಂಬಿಸುವುದು, ಅಪ್ಪಿಕೊಳ್ಳುವುದು, ಕಾಳಜಿ ವಹಿಸುವುದು ಮಾಡಿ. ಒಂದುವೇಳೆ ಬೆಡ್‍ರೆಸ್ಟ್ ಸಮಯದ ಏಕಾಂತತೆ ಮತ್ತು ಒಂಟಿತನ. ಸಹಿಸಲಸಾಧ್ಯವಾದರೆ ನಿಮಗೆ ಅದನ್ನು ನಿರ್ವಹಿಸಲಾಗದಿದ್ದರೆ ನಿಮ್ಮ ವೈದ್ಯರನ್ನು ಸಂಪರ್ಕಿಸಿ.
ಮಾನಸಿಕ ತಜ್ಞರನ್ನು ಭೇಟಿಯಾಗಬಹುದು. ನೆನಪಿರಲಿ, ಬೆಡ್‍ರೆಸ್ಟ್ ಸದಾ ಮುಂದುವರಿಯುವುದಿಲ್ಲ. ಆದುದರಿಂದ ನೀವು
ಆರೋಗ್ಯವಂತ ಸ್ಥಿತಿಗೆ ಮರಳುವ ನಿಮ್ಮ ಮಗುವನ್ನು ನೀವೇ ತೋಳಲ್ಲಿ ಎತ್ತಿಕೊಳ್ಳುವ ದಿನಗಳ ನಿರೀಕ್ಷೆಯಲ್ಲಿರಿ.

ಲೇಖಕರು : ಸುನೀತಾ
Curtesy : Anupama women’s Monthly 

 

Leave a Reply