ಬೆಂಗಳೂರು: ಇನ್ಮುಂದೆ ಪೊಲೀಸರೂ ಅರ್ಧ ಹೆಲ್ಮೆಟ್ ಧರಿಸುವಂತಿಲ್ಲ. ಸಂಚಾರ ಪೊಲೀಸರು, ‘ಆಪರೇಷನ್ ಸೇಫ್ ರೈಡ್’ ಹೆಸರಿನ ಕಾರ್ಯಾಚರಣೆಯನ್ನು ಫೆ. 1ರಿಂದ ಆರಂಭಿಸಲಿದ್ದು ಇನ್ಮುಂದೆ ಕೇಸು ಹಾಕುವ ಪೊಲೀಸರೂ ಐಎಸ್ಐ ಮತ್ತು ಬಿಐಎಸ್ ಮುದ್ರೆಯ ಹೆಲ್ಮೆಟ್ ಧರಿಸಲು ಇಲಾಖೆಯಿಂದ ಸೂಚಿಸಲಾಗಿದೆ.
ಮೈಸೂರಿನಲ್ಲಿ ಈಗಾಗಲೇ ಕಳಪೆ ಗುಣಮಟ್ಟದ ಹೆಲ್ಮೆಟ್ ಸವಾರರ ಮೇಲೆ ಪೊಲೀಸರು ಕ್ರಮಕೈಗೊಂಡಿದ್ದು ಬೆಂಗಳೂರಿನಲ್ಲಿಯೂ ಆಪರೇಷನ್ ಸೇಫ್ ರೈಡಿಂಗ್ ಅಭಿಯಾನದಡಿಯಲ್ಲಿ ಜಾಗೃತಿ ಮೂಡಿಸಲಾಗುವುದು. ಅದಕ್ಕೂ ಮೊದಲು ಪೊಲೀಸರು ಕಾನೂನನ್ನು ಪಾಲಿಸಬೇಕಲ್ವೇ?
‘ಸಿಬ್ಬಂದಿಗೆ ಇಲಾಖೆಯಿಂದ ಯಾವುದೇ ಹೆಲ್ಮೆಟ್ ನೀಡುತ್ತಿಲ್ಲ. ಪೊಲೀಸರೇ ಅವುಗಳನ್ನು ಸ್ವಂತ ಖರ್ಚಿನಲ್ಲಿ ಖರೀದಿಸುತ್ತಿದ್ದಾರೆ. ಕಾನೂನು ಎಲ್ಲರಿಗೂ ಒಂದೇ. ಹೀಗಾಗಿ ಐಎಸ್ಐ ಮತ್ತು ಬಿಐಎಸ್ ಮುದ್ರೆ ಇರುವ ಹೆಲ್ಮೆಟ್ ಮಾತ್ರ ಧರಿಸುವಂತೆ ನಮ್ಮ ಸಿಬ್ಬಂದಿಗೂ ಸೂಚಿಸಿದ್ದೇವೆ. ಒಂದು ವೇಳೆ ಪಾಲಿಸದಿದ್ದರೆ ಮೊದಲು ಅವರಿಗೆ ದಂಡ ವಿಧಿಸುತ್ತೇವೆ’ ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ (ಸಂಚಾರ) ಆರ್.ಹಿತೇಂದ್ರ ತಿಳಿಸಿದರು.