ಬೆಂಗಳೂರು: ಮುಖ್ಯಮಂತ್ರಿಗಳ ಸಿದ್ದರಾಮಯ್ಯ ಅವರು ಸರ್ಕಾರದ ವತಿಯಿಂದ ನಡೆಸುತ್ತಿರುವ ಸಾಧನಾ ಸಮಾವೇಶ ಹಾಗೂ ಪ್ರಚಾರಕ್ಕಾಗಿ ದುಂದು ವೆಚ್ಚ ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ ಸಲಿಸಲಾಗಿತ್ತು‌‌.

ಈ ಕುರಿತು ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್.ಜಿ.ರಮೇಶ್ ನೇತೃತ್ವದ ಹೈಕೋರ್ಟ್ ವಿಭಾಗೀಯ ಪೀಠ ನಡೆಸಿದ್ದು ‘ಪ್ರಜಾಪ್ರಭುತ್ವ ರಾಷ್ಟದಲ್ಲಿ ಜಾಹೀರಾತು ನೀಡುವುದು ಕಾನೂನು ಬದ್ಧವಾಗಿದೆ. ಮುಖ್ಯಮಂತ್ರಿಗಳಿಗೆ ಭಾಷಣ ಮಾಡುವ ಸ್ವಾತಂತ್ರ್ಯವಿದೆ. ದುಂದು ವೆಚ್ಚದ ಕುರಿತು ದಾಖಲೆಗಳನ್ನು ಒದಗಿಸಿ ಎಂದು ಅರ್ಜಿದಾರರಲ್ಲಿ ಹೇಳಿದ ನ್ಯಾಯಪೀಠ ವಿಚಾರಣೆಯನ್ನು ಮುಂದೂಡಿದೆ.

Leave a Reply