ಪರಿಸರವು ಕ್ಷಿಪ್ರಗತಿಯಲ್ಲಿ ನಾಶ ವಾಗುತ್ತಿರುವುದನ್ನು ನಾವು ಭೀತಿ ಯಿಂದ ನೋಡುತ್ತಿದ್ದೇವೆ. ಪರಿಸರ ವನ್ನು ಸಂರಕ್ಷಿಸುವ ಮತ್ತು ಗಿಡ ಗಳನ್ನು ನೆಡುವ ಕೆಲಸಗಳನ್ನು ದಿನಾಚರಣೆಗಳಿಗೆ ಸೀಮಿತಗೊಳಿಸಿ ದ್ದೇವೆ. ಪರಿಸರದ ಬಗ್ಗೆ ಮೊಸಳೆ ಕಣ್ಣೀರು ಸುರಿಸಲು ಆ ದಿನವನ್ನು ಬಳಸಿಕೊಳ್ಳುತ್ತೇವೆ. ಜನರಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ದಿನಾ ಚರಣೆಗಳು ಸ್ವಲ್ಪ ಮಟ್ಟಿಗೆ ಸಹಾಯಕ ವಾಗುತ್ತದೆ ಎಂಬುದು ಸುಳ್ಳಲ್ಲ.

ವಿಶ್ವ ಸಂಸ್ಥೆಯ ಪರಿಸರ ಯೋಜನೆಯ ಅಂಗವಾಗಿ ಜೂನ್ 5 ನ್ನು ಪರಿಸರ ದಿನವನ್ನಾಗಿ ಆಚರಿಸಲಾಗುತ್ತದೆ. 1972 ಜೂನ್ 5ಕ್ಕೆ ಯು.ಎನ್.ಓ.ನ ಪ್ರಥಮ ಪರಿಸರ ಸಮ್ಮೇಳನ ಸ್ಟಾಕ್ ಹೋಮ್‍ನಲ್ಲಿ ಆರಂಭಿಸಿತು. ಜನರಲ್ ಅಸೆಂಬ್ಲಿಯು ಇದರ ಚುಕ್ಕಾಣಿ ಹಿಡಿಯಿತು. 12 ದಿನದ ಈ ಸಮ್ಮೇಳನದಿಂದ ‘ಯುನೈಟೆಡ್ ನೇಶನ್ಸ್ ಎನ್‍ವಿರಾನ್‍ಮೆಂಟ್ ಪ್ರೆÇೀಗ್ರಾಂ (U.ಓ.ಇ.P.) ಆಸ್ತಿತ್ವಕ್ಕೆ ಬಂತು. ನಂತರ ಎಲ್ಲಾ ವರ್ಷ ಗಳಲ್ಲೂ ಜೂನ್ 5ನ್ನು ವಿಶ್ವ ಪರಿಸರ ದಿನವೆಂದು ಆಚರಿಸಿ ವಿಶ್ವದಲ್ಲಿ ಪರಿಸರದ ಬಗ್ಗೆ ಕಾಳಜಿ ಮೂಡಿಸುವ ಪ್ರಯತ್ನವನ್ನು ಮಾಡಲಾಗುತ್ತದೆ. 1973ರಲ್ಲಿ ಇದರ ಪ್ರಥಮ ದಿನಾಚರಣೆ ನಡೆಯಿತು.

ಪ್ರತಿಯೊಬ್ಬನಿಗೂ ಒಂದೊಂದು ಮರ ಎಂಬ ನಿಟ್ಟಿನಲ್ಲಿ ಶಾಲಾ ಮಕ್ಕಳಲ್ಲಿ ಗಿಡಗಳನ್ನು ಕೊಟ್ಟು ನೆಡಿಸುವ ಕಾರ್ಯವು ಆರಂಭ ವಾಯಿತು. ಮಕ್ಕಳಲ್ಲಿ ಗಿಡದ ಪ್ರೇಮ ಮೂಡಿಸಲು ಸಹಕಾರಿಯಾಯಿತು.

* ದಾರಿ ಹೋಕರಿಗೆ ನೆರಳಾಗಿದ್ದ ರಸ್ತೆ ಬದಿಯ ಮರಗಳು ರಸ್ತೆ ಅಗಲೀಕರಣಕ್ಕಾಗಿ ಕೊಡಲಿಯೇಟಿಗೆ ಉರುಳಿ ಬೀಳುತ್ತಿವೆ. ಒಂದು ಮರವನ್ನು ನಾವು ನೆಟ್ಟು ಆ ನೆರಳನ್ನು ಮರಳಿ ಪಡೆಯಬಹುದು.

* ಪರಿಸರ ಕಾಳಜಿ ಸಾರ್ವ ಜನಿಕರಲ್ಲಿ ಮೂಡಿಸಲು ಬೀದಿ ನಾಟಕ, ಪ್ಲೇ ಕಾರ್ಡ್‍ಗಳು, ಸೈಕಲ್ ರ್ಯಾಲಿ, ಭಿತ್ತಿ ಪತ್ರ ಪ್ರಚಾರ, ಉಪ ನ್ಯಾಸ, ಚಿತ್ರ ರಚನೆ, ಕ್ವಿಝ್, ಬೀಜ ವಿತರಣೆಯನ್ನು ಮಾಡಬಹುದು.

* ಇಂಧನ ಕೊರತೆ ನೀಗಿಸಲು ನೈಸರ್ಗಿಕ ಶಕ್ತಿಗಳಾದ ಸೂರ್ಯ, ಗಾಳಿ, ನೀರು ಮೊದಲಾದವನ್ನು ಶಕ್ತಿಯಾಗಿ ಬಳಸಬಹುದು. ಇದನ್ನು ಶಾಲೆ
ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸುವುದು.

* ಪರಿಸರದ ಖಳನಾಯಕನಾಗಿ ರುವ ಪ್ಲಾಸಿಕ್ಟ್‍ನ ಉಪಯೋಗ ಗರಿಷ್ಠವಾಗಿ ನಿಲ್ಲಿಸುವ ಪ್ರಯತ್ನ ಮಾಡುವುದು.

* ಪ್ಲಾಸ್ಟಿಕ್‍ನ ಹಾನಿಯ ಕುರಿತು ಪುರಾವೆ ಸಹಿತ ಸಮಾಜಕ್ಕೆ ತಿಳಿಸಿ ಕೊಡಬೇಕು. ಪತ್ರಿಕಾ ವರದಿಗಳು, ಚಿತ್ರಗಳು, ಸಮೀಕ್ಷೆಗಳನ್ನು ಜನ ಸಾಮಾನ್ಯರಿಗೆ ಪ್ರದರ್ಶಿಸಬೇಕು.

* ಪ್ಲಾಸ್ಟಿಕ್‍ನ ಬದಲು ಬಟ್ಟೆಯ ಚೀಲಗಳು, ಪೇಪರ್‍ಗಳ ಉಪಯೋಗವನ್ನು ಪ್ರಚಾರ ಮಾಡುವುದು.

* ಪ್ಲಾಸ್ಟಿಕ್ ಬ್ಯಾಗ್‍ಗಳನ್ನು ಉಪಯೋಗಿಸುವುದನ್ನು ಬಿಟ್ಟು ಬಿಡಲು ಸಾಧ್ಯವೇ ಇಲ್ಲವೆಂದಾದರೆ ಉಪಯೋಗಿಸಿದ್ದನ್ನೇ ಹಲವು ಬಾರಿ ಉಪಯೋಗಿಸಿ.
ಒಮ್ಮೆ ಉಪ ಯೋಗಿಸಿ ಎಸೆಯಬೇಡಿ.

* ಶುಚಿತ್ವದ ಆರಂಭ ಮನೆ ಯಿಂದಲೇ ಆಗಲಿ. ಮಕ್ಕಳಲ್ಲೂ ಶುಚಿತ್ವದ ಪ್ರಜ್ಞೆ ಮೂಡಿಸಲು ಪ್ರಯತ್ನಿಸುವುದು.

* ಮಾಲಿನ್ಯವನ್ನು ಎರಡು ಭಾಗವಾಗಿ ವಿಭಾಗಿಸಿ ಜೈವ ಮಾಲಿನ್ಯ (ಸುಲಭದಲ್ಲಿ ಜೀರ್ಣ ವಾಗುವಂತಹದು) ಇನ್ನೊಂದು ಪ್ಲಾಸ್ಟಿಕ್‍ನಂತವುಗಳು.

* ಇಂಧನ ಶಕ್ತಿಯನ್ನು ಅನಾವ ಶ್ಯಕವಾಗಿ ಪೋಲು ಮಾಡದಿರುವುದು.

* ಮರಗಳು, ಪ್ರಾಣಿ ಪಕ್ಷಿಗಳು ನಮ್ಮ ಗೆಳೆಯರೆಂಬುದನ್ನು ತಿಳಿದುಕೊಳ್ಳುವುದು.

* ಪರಿಸರ ಮಾಲಿನ್ಯದಿಂದ ಭೂಮಿಯ ಮೇಲಾಗುತ್ತಿರುವ ಗಂಭೀರ ಪರಿಣಾಮವನ್ನು ತೋರಿ ಸುವ ಸಿ.ಡಿ.ಗಳನ್ನು ಪ್ರದರ್ಶಿಸುವುದು.
ಅಂತಹ ಪುಸ್ತಕಗಳ ಪ್ರಚಾರ, ಶಾಲಾ ಲೈಬ್ರರಿಗಳಲ್ಲೂ, ಸಾರ್ವಜನಿಕ ಲೈಬ್ರರಿಗಳಲ್ಲೂ ಇಡುವುದು. ಕರಪತ್ರಗಳನ್ನು ಹಂಚುವುದು.

* ಪ್ಲಾಸ್ಟಿಕ್‍ಗೆ ಬದಲಿಯಾಗಿ ನಿರ್ಮಿಸುವ ಬಟ್ಟೆಯ ಅಥವಾ ಪೇಪರ್ ಬ್ಯಾಗ್ ನಿರ್ಮಿಸುವವರನ್ನು ಕರೆದು ಅವರನ್ನು ಸ್ವತಃ ನಿರ್ಮಿಸಲು ತರಬೇತಿ ನೀಡುವುದು.

ಸರಕಾರ ಹಾಗೂ ಅಧಿಕಾರಿ ಗಳನ್ನೇ ದೂರುತ್ತಾ ಕಾಲಕಳೆಯುವುದಕ್ಕಿಂತ, ಅವರಿಂದ ಗರಿಷ್ಠ ಸಹಾಯ ಪಡೆದುಕೊಂಡು ನಮ್ಮ ಪರಿಸರವನ್ನು ನಾವೇ ಉಳಿಸಿ ಬೆಳೆಸುವುದು. ಪ್ರಯತ್ನಕ್ಕೆ ಖಂಡಿತಾ ಪ್ರತಿಫಲ ಸಿಗುವುದು.

– ಎ.ಹುದಾ

Leave a Reply