ಹರಿಯಾಣದ ಸಿಬಿಎಸ್.ಇ ರ್ಯಾಂಕ್ ವಿಜೇತೆ ಹತ್ತೊಂಬತ್ತರ ಹರೆಯದ ಯುವತಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ. ಹರಿಯಾಣದ ಮಹೇಂದಗಡ್ ಎಂಬಲ್ಲಿ ಈ ಕುಕೃತ್ಯ ನಡೆದಿದೆ. ಬುಧವಾರ ಕಾರಲ್ಲಿ ಬಂದ ಐವರು ದುಷ್ಕರ್ಮಿಗಳು ಯುವತಿಯನ್ನು ಅಪಹರಿಸಿ ಮಾದಕ ದ್ರವ್ಯ ಕುಡಿಸಿ ಅತ್ಯಾಚಾರಗೈದಿದ್ದಾರೆ. ಬಳಿಕ ಹತ್ತಿರದ ಬಸ್ಸು ನಿಲ್ದಾಣದ ಬಳಿ ತೊರೆದು ಹೋಗಿದ್ದಾರೆ.

ಯುವತಿ ನೀಡಿದ ದೂರಿನನ್ವಯ ಕೇಸು ದಾಖಲಿಸಲಾಗಿದೆ, ಯುವತಿಯು ಪ್ರತಿಭಾನ್ವಿತೆಯಾಗಿದ್ದು ಕಲಿಕೆಯಲ್ಲಿ ಮುಂದಿದ್ದಳು. ಸಿ.ಬಿ.ಎಸ್.ಸಿ ಪರೀಕ್ಷೆಯಲ್ಲಿ ರ್ಯಾಂಕ್ ವಿಜೇತೆಯಾಗಿದ್ದಳು.

ಕೋಚಿಂಗ್ ಸೆಂಟರ್ ಗೆ ಹೋಗುವಂತಹ ಸಂದರ್ಭದಲ್ಲಿ ಯುವತಿಯನ್ನು ಕಾರಿನಲ್ಲಿ ಎಳೆದು ಅಪಹರಿಸಿಕೊಂಡು ಈ ಕೃತ್ಯ ಎಸಗಲಾಗಿದೆ. ಪೊಲೀಸರು ಆರಂಭದಲ್ಲಿ ಪ್ರಕರಣ ದಾಖಲಿಸಲು ನಿರಾಕರಿಸಿರುವ ಬಗ್ಗೆ ಪೋಷಕರು ಆರೋಪಿಸಿದ್ದಾರೆ.

“ನನ್ನ ಮಗಳನ್ನು ಮೋದಿಜಿ ಸಿಬಿಎಸ್ಇ ಯಲ್ಲಿ ಉತ್ತಮ ಟಾಪ್ ಮಾಡಿದ ಕಾರಣಕ್ಕೆ ಸನ್ಮಾನಿಸಿದ್ದರು. ಮೋದಿಜಿ ಹೇಳುತ್ತಾರೆ, ಬೇಟಿ ಪಡಾವೋ, ಬೇಟಿ ಬಚವೋ ಈಗ ಏನಾಗಿದೆ? ಪೊಲೀಸರು ಪ್ರಕರಣ ದಾಖಲಿಸಲು ಹಿಂದೇಟು ಹಾಕುತ್ತದ್ದಾರೆಂದು” ಯುವತಿಯ ತಾಯಿ ಕಣ್ಣೀರು ಸುರಿಸಿದ್ದಾರೆ.

Leave a Reply