ಹುಬ್ಬಳ್ಳಿ: ಹುಬ್ಬಳ್ಳಿಯ ಹಳೇ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಕಿಡಿಗೇಡಿಯೊಬ್ಬ ತಲಾವಾರು ಬೀಸಿದ ಘಟನೆ ನಡೆದಿದೆ. ಜನಬಿಡದ ಪ್ರದೇಶವಾದ ಆನಂದ ನಗರ ವೃತ್ತದಲ್ಲಿ ನಿನ್ನೆ ರಾತ್ರಿ 8 ಗಂಟೆಯ ವೇಳೆ ಪಲ್ಸರ್ ಬೈಕ್‌ನಲ್ಲಿ ಬಂದ ಕಿಡಿಗೇಡಿಯೊಬ್ಬ ತಲಾವಾರು ಬೀಸಿ ಅಶ್ಲೀಲ ಪದಗಳಿಂದ ಕೂಡಿದ ಡೈಲಾಗನ್ನು ಹೊಡೆದಿದ್ದಾನೆ ಎನ್ನಲಾಗಿದೆ.

ಇದೇ ರೀತಿಯ ಘಟನೆಗಳು ಪದೇಪದೇ ಮರುಕಳಿಸುತ್ತಿರುವುದರಿಂದ ಜನರು ಬೆಜ್ಜಿ ಬಿದ್ದಿದ್ದಾರೆ ಮತ್ತು ಕಾನೂನು ಭಯ ಇಲ್ಲದಿರುವುದೇ ಇದಕ್ಕೆಲ್ಲ ಕಾರಣ ಎಂದು ಜನರು ಆರೋಪಿಸುತ್ತಿದ್ದಾರೆ. ಈ ಕುರಿತು ಆನಂದ‌ ನಗರ ಹಳೇ ಪೋಲಿಸ್ ಠಾಣೆಯ ಪೋಲಿಸರು ಕ್ರಮ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ.

Leave a Reply