ಬೆಂಗಳೂರು: ಹೆಂಡತಿ ಗಂಡನನ್ನು ಬಿಟ್ಟು ಇನ್ನೊಬ್ಬನ ಜೊತೆ ಓಡಿ ಹೋಗಿ, ಕೊನೆಗೆ ಆಕೆ ಓಡಿ ಹೋದವನಿಗೂ ಬೇಡ ಈ ಕಡೆ ಗಂಡನಿಗೂ ಬೇಡ ಎನ್ನುವಂತಹ ಅದೆಷ್ಟೋ ಪ್ರಕರಣಗಳು ನಡೆದಿವೆ. ನಾವು ನೋಡಿದ್ದೇವೆ ಕೂಡ.‌ ಆದರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದೆ.

ಒಂದೂವರೆ ವರ್ಷದ ಹಿಂದೆ ವಸಂತ್ ಎಂಬಾತನಿಗೆ ದೂರದ ಸಂಬಂಧಿ ರೇಷ್ಮಾ ಎಂಬಾಕೆಯ‌ ಜೊತೆ ಮದುವೆಯಾಗಿತ್ತು. ದೂರದ ಸಂಬಂಧಿಯಾಗಿದ್ದ ಕಾರಣ ರೇಷ್ಮಾಳನ್ನು ಆಕೆಯ ತಾಯಿ ಹೇಳಿದಂತೆ ವಸಂತ್ ಜೊತೆಯಲ್ಲಿ ಮದುವೆ ಮಾಡಿಸಿದ್ದರು. ಮದುವೆಯಾಗಿ ಹೊಸತರಲ್ಲಿ ಜೋಡಿಗಳು ಚೆನ್ನಾಗೇ ಇದ್ದರು. ಆದರೆ ಅದೇನಾಯಿತೋ ಮನೆಯಲ್ಲಿ ಇದ್ದಕ್ಕಿದ್ದಂತೆ ರೇಷ್ಮಾ ಜಗಳ ಮಾಡಲು ಶುರು ಮಾಡಿದ್ದಳು. ಗಂಡ ವಸಂತ್ ಇದನ್ನೆಲ್ಲಾ ನೋಡಿ ಸುಮ್ಮನಾಗುತ್ತಿದ್ದರು. ಆಕೆಗೆ ಪ್ರತಿ ಹಿಂಸೆ ಕೊಡುವ ಮುಲಾಜಿಗೆ ಹೋಗಿಲ್ಲ.

ಆದರೆ ವಾಸ್ತವ ಬೇರೆ‌ಯೇ ಆಗಿತ್ತು. ಆಕೆಯ ಜಗಳಕ್ಕೆ ಕಾರಣ ಆಕೆಯ ಇನ್ನೊರ್ವ ಪ್ರಿಯಕರ ಶ್ರೀನಿವಾಸ್ ಎನ್ನುವಾತನಾಗಿದ್ದ. ಗಂಡ ವಸಂತ್ ಇದರಿಂದ ಬೇಸತ್ತು ಆಕೆಗೆ ಬಹಳಷ್ಟು ಸಲ ಬುದ್ಧಿವಾದ ಹೇಳಿದರೂ ಆಕೆ ಅದನ್ನು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ರೇಷ್ಮಾಳ ಪೋಷಕರು ಕರೆದು ಪ್ರೀತಿಯಿಂದ ಹೇಳಿದರೂ ಕೇಳದೇ ಪ್ರೀತಿಸಿದವನ ಜೊತೆಯಲ್ಲಿಯೇ ಒಂದು ದಿನ ಓಡಿ ಹೋಗಿದ್ದಾಳೆ. ಇಷ್ಟೆಲ್ಲಾ ಆದ ಮೇಲೆ ದಾರಿ ಕಾಣದ ಗಂಡ ರೇಷ್ಮಾಳ ತಂದೆ ತಾಯಿಯ ಜೊತೆ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ್ದಾರೆ. ಪ್ರತಿನಿತ್ಯ ಫೋನ್ ಮಾಡಿ ರೇಷ್ಮಾಳ ಮನವೊಲಿಸುವ ಪ್ರಯತ್ನವನ್ನೂ ಮಾಡಿದ್ದಾರೆ. ಆದರೂ ಆಕೆ ಗಂಡನೊಂದಿಗೆ ಬಂದು ಜೀವನ ಮಾಡಲು ಒಪ್ಪಿಲ್ಲ. ಆಶ್ಚರ್ಯದ ಸಂಗತಿಯೆಂದರೆ ಅಳಿಯನ ಬೆನ್ನಿಗೆ ನಿಂತಿರುವ ಅತ್ತೆ-ಮಾವ ನಮಗೆ ನಮ್ಮ ಮಗಳು ಬೇಕು. ಆಕೆ ಓಡಿ ಹೋಗಿರುವ ಶ್ರೀನಿವಾಸನ ಮೇಲೆ‌ ಹಲವಾರು ಕ್ರಿಮಿನಲ್ ಕೇಸ್‍ಗಳು ಇವೆ ಎಂದು ಅಂಗಲಾಚಿ ಕೇಳುತ್ತಿದ್ದಾರೆ.

ಮಾನ ಹರಾಜು ಮಾಡಿ, ಗಂಡನ ಬಿಟ್ಟು ಹೋದ ಹೆಂಡತಿಯ ರಕ್ಷಣೆಗಾಗಿ ಗೋಗರಿಯುತ್ತಾ ಇರುವ ಗಂಡ ಆಕೆ ವಾಪಸ್ ಬಂದು ನನಗೆ ವಿಚ್ಛೇದನ ನೀಡಲಿ. ನಾನು ಆಕೆಯನ್ನು ಆಕೆಯ ಅಪ್ಪ ಅಮ್ಮನ ಬಳಿ ಬಿಟ್ಟು ಹೋಗುತ್ತಿದ್ದೇನೆ ಎಂದು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ದಾರಿ ತಪ್ಪಿದ ಹೆಂಡತಿಯ ಜೀವನ ಉಳಿಸಲು ಗಂಡ ಕಷ್ಟಪಡುತ್ತಿದ್ದಾರೆ.

ಇಷ್ಟು ಒಳ್ಳೆಯ ಕುಟುಂಬವನ್ನು ತೊರೆದು ಮೋಸ ಮಾಡಿ ಓಡಿ ಹೋದ ಆಕೆಗೆ ಏನು ಹೇಳಬೇಕೋ?

Leave a Reply