image: parenting.firstcry

ಮೂಲ : ಮಲಯಾಳಂ
ಅನುವಾದ : ಸ್ನೇಹಜೀವಿ ಅಡ್ಕ.

ತನ್ನ ಹೆಂಡತಿಯ ಸೌಂದರ್ಯವನ್ನು ನೋಡಬೇಕಾದರೆ ,ನೆರೆಯ ಮನೆಯ ಕಿಟಕಿಯ ಮೂಲಕ ನೋಡಬೇಕೆಂದು ಯಾರೋ ಹೇಳಿದ್ದರು. ತನ್ನ ಕಣ್ಣನ್ನು ಸರಿಯಾಗಿಸದೆ ಯಾವ ಕಿಟಕಿಯ ಮೂಲಕ ನೋಡಿದರೂ ಯಾವ ಪ್ರಯೋಜನವಿಲ್ಲ. ಅದೆಷ್ಟೋ ಬರೆದಿದ್ದರೂ, ಭಾಷಣ ಬಿಗಿದಿದ್ದರೂ ಕೆಲ ಗಂಡಂದಿರಿಗೆ ಹೆಂಡತಿ ಅನ್ನುವುದು ಕೇವಲ ಒಂದು ವಸ್ತುವಾಗಿ ಮಾತ್ರ ಬದಲಾಗಿಬಿಟ್ಟಿದೆ.
ನೆನಪಿಡಿ ಹಣ ಕೊಡದೆ ಖರೀದಿಸಲು ಸಾಧ್ಯವಾಗುವಂತದರಲ್ಲಿ ಅತೀ ದೊಡ್ಡ ಮೌಲ್ಯಯುತವಾದಂತಹ ವಸ್ತುವಾಗಿದ್ದಾಳೆ ಹೆಂಡತಿ
ಕೇವಲ ಹೆಂಡತಿ ಅನ್ನುವ ಮೂರಕ್ಷರದಲ್ಲಿ ಮರೆತು ಬಿಡುವ, ವರ್ಣಿಸಲಾಗದ ಬೆಲೆಕಟ್ಟಲಾಗದ ವಿಸ್ಮಯ.

ನಿಖಾಹ್ ಕಳೆದ ನಂತರ ಪ್ರತಿನಿತ್ಯ ಗಂಟೆಗಳ ಕಾಲ ಅವಳೊಡನೆ ಮಾತನಾಡುತ್ತೇವೆ. ಬಿಡುವುಗಳಿಲ್ಲದಿದ್ದರೂ ಬಿಡುವು ಮಾಡಿಕೊಂಡು ಅವಳನ್ನು ಕಾಣಲು ನಾವು ಪ್ರಯತ್ನಿಸುತ್ತೇವೆ.

Representational Image

ಸಿಗುವಂತದರಲ್ಲಿ ಅತೀ ಮೌಲ್ಯಯುವಾದ ವಸ್ತುವನ್ನೇ ಅವಳಿಗೆ ಕೊಡುತ್ತೇವೆ. ಮದುವೆಗೆ ಮುಂಚೆ ಮಧ್ಯರಾತ್ರಿ ಮನೆಗೆ ತಲುಪುತ್ತಿದ್ದವರು ,ಮದುವೆಯ ನಂತರ ರಾತ್ರಿಯಾದೊಡನೆ ಮನೆಗೆ ಬರುತ್ತೇವೆ. ಒಂದೊಂದೇ ಕಾರಣಗಳನ್ನು ನೀಡಿ ಮನೆಯೊಳಗೇ ದಿನಗಳನ್ನು ಕಳೆಯಲು ಪ್ರಯತ್ನಿಸುತ್ತೇವೆ. ಬಿಡುವಿನ ಸಮಯದಲ್ಲೆಲ್ಲಾ ಹೆಂಡತಿಯನ್ನು ಕರೆದುಕೊಂಡು ಸುತ್ತಾಡಲು ಹೋಗುತ್ತೇವೆ.
ಗೆಳೆಯರ ಜೊತೆಗಿನ ಸುತ್ತಾಟ, ಗಾನಮೇಳೆ ಇದನ್ನೆಲ್ಲಾ ಬಿಡುತ್ತೇವೆ. ನಾಲ್ಕು ದಿನ ಹೆಂಡತಿ ಅವಳ ತವರಿಗೆ ಹೋದರೆ ಮತ್ತೆ ಬೆಡ್ ರೂಮಿಗೆ ಹೋಗಲು ಒಂಥರಾ ನಿರಾಸೆ. ನಾಲ್ಕು ದಿನಕ್ಕಾಗಿ ತವರಿಗೆ ಹೋದವಳನ್ನು ಎರಡು ದಿನಗಳಾದಾಗಲೇ ಕರೆದುಕೊಂಡು ಬರುತ್ತೇವೆ.

Representational Image

ಇನ್ನು ಒಂದೈದಾರು ವರ್ಷಗಳು ಕಳೆದು ಎರಡ್ಮೂರು ಮಕ್ಕಳಾದಾಗ ಬೆಳಿಗ್ಗೆಯಿಂದಲೇ ಪ್ರಾರಂಭಿಸುತ್ತೇವೆ.
ನನ್ನ ಪರ್ಸ್ ಎಲ್ಲಿ..?
ನನ್ನ ಶರ್ಟ್ ಇನ್ನೂ ಐರನ್ ಮಾಡಿಲ್ವಾ..?
ಬ್ರೇಕ್ ಫಾಸ್ಟ್ ಇನ್ನೂ ರೆಡಿಯಾಗಿಲ್ವಾ..?
ಅಥವಾ ಒಂದು ವೇಳೆ ಅದನ್ನು ತಯಾರಿಸಿಕೊಟ್ಟರೂ ಇವತ್ತು ದೋಸೆ ,ಸಾಂಬಾರ್ ಮಾತ್ರವಾ ಅಂತ ಹೇಳಿದರೂ ಹೊಟ್ಟೆ ತುಂಬಾ ತಿಂದು ಅವಳೊಡನೆ ಹೇಳದೆಯೇ ಅವನು ಹೊರಟು ಹೋಗುತ್ತಾನೆ.

ಅತ್ಯಧಿಕ ಗಂಡಂದಿರೂ ಹೆಂಡತಿಯರೊಡನೆ ಕೇಳುವಂತಹ ಒಂದು ಪ್ರಶ್ನೆಯಿದೆ ” *ನಿನಗೆ ಅಂತಹ ಕೆಲಸವಾದರೂ ಏನು ಇಲ್ಲಿರುವುದು..?”
ನಾವು ಒಂದು ಕ್ಷಣವಾದರೂ ಚಿಂತಿಸಿದ್ದೇವೆಯಾ ಸಹೋದರ ನಮ್ಮ ಹೆಂಡತಿಯ ಕೆಲಸದ ಕುರಿತು..?

ಒಬ್ಬ ಸರ್ಕಾರಿ ನೌಕರನಿಗೆ ಸರಿಯಾದ ಕೆಲಸದ ಸಮಯವಿದೆ, ಪ್ರಮೋಷನ್ ಇರುತ್ತದೆ. ಒಬ್ಬ ಕೂಲಿ ನೌಕರನಿಗೂ ಸರಿಯಾದ ಕೆಲಸದ ಸಮಯವಿರುತ್ತದೆ. ಆದರೆ ಒಬ್ಬಾಕೆ ಹೆಂಡತಿಗೆ ಸರಿಯಾದ ಕೆಲಸದ ಸಮಯನೂ ಇಲ್ಲ, ಬಿಡುವೂ ಇಲ್ಲ, ಸಂಬಳನೂ ಇಲ್ಲ , ಪ್ರಮೋಷನ್ ಸಹ ಇಲ್ಲ. ಅದೇನೇ ಮಾಡಿದರೂ ,ಅದೆಷ್ಟೇ ಮಾಡಿದರೂ ಅದು ಅವಳ ಕರ್ತವ್ಯವಲ್ಲವೇ ಅಂತ ನಮಗೆ ಕ್ಷುಲ್ಲಕವಾಗಿ ಅದನ್ನು ಕಾಣಲು ಸಾಧ್ಯವಾಗಬಹುದು.

Representational Image

ಬೆಳಿಗ್ಗೆಯೆದ್ದು ಮನೆಯಂಗಳ ಗುಡಿಸಿ, ಬ್ರೇಕ್ ಫಾಸ್ಟ್ ತಯಾರಿಸಿ , ಮಕ್ಕಳನ್ನು ಶಾಲೆಗೆ ಕಳುಹಿಸಿ , ಡ್ರೆಸ್ ತೊಳೆಯಲು ಇರುವುಎಲ್ಲವನ್ನೂ ತೊಳೆದು , ನೆಲ ಒರೆಸಿ ,ಮಧ್ಯಾಹ್ನದ ಊಟವನ್ನು ತಯಾರಿಸಿ , ಸಾಯಂಕಾಲ ಶಾಲೆ ಬಿಟ್ಟು ಬರುವ ಮಕ್ಕಳಿಗೆ ಚಾ ರೆಡಿ ಮಾಡಿಟ್ಟು ಸ್ವಲ್ಪ ನೆಮ್ಮದಿಯಿಂದ ಮಲಗಲೂ ಸಮಯವನ್ನು ಕಂಡುಕೊಳ್ಳಲು ಸಾಧ್ಯವಾಗುವುದಿಲ್ಲ.
ಇನ್ನು ರಾತ್ರಿ ಸಮಾಧಾನದಿಂದ ಮಲಗಬೇಕು ಅಂದುಕೊಂಡರೆ ತನ್ನ ಗಂಡ ಬರಬೇಕು. ಗಂಡ ಬಂದು ಅವರ ಕೆಲಸಗಳೆಲ್ಲಾ ಕಳೆದು ಮಲಗುವಾಗ ಮಧ್ಯರಾತ್ರಿ. ಆಗ ನಿದ್ದೆಯಿಂದ ಎದ್ದು ಮಗು ಅಳಲು ಪ್ರಾರಂಭಿಸಿದರೆ ಗಂಡನು ಅಸಹಿಷ್ಣುತೆಯಿಂದ ತಿರುಗಿ ಮಲಗುವಾಗ , ನಿದ್ದೆ ಕಳೆದುಕೊಂಡ ಬೇಸರ ವ್ಯಕ್ತಪಡಿಸದೆ ಆ ಮಗುವನ್ನು ಮಲಗಿಸುತ್ತಾಳೆ. ನಂತರ ಬೆಳಿಗ್ಗೆ ಬೇಗ ಎದ್ದು ಅವಳು ಅವಳ ನಿತ್ಯ ಕಾಯಕದಲ್ಲಿ ತೊಡಗಿಕೊಳ್ಳುತ್ತಾಳೆ. ಹೌದು, ಮರೆಯಲೇಬಾರದು . *ಎಲ್ಲಾ ಇದ್ದರೂ ಮನೆಯಲ್ಲಿದ್ದುಕೊಂಡೇ ಪ್ರವಾಸಿಯಾಗಿ ಜೀವಿಸುವಂತಾಗಲು ವಿಧಿಸಲ್ಪಟ್ಟವಳು ಹೆಂಡತಿ..!!

ಅಂದೆಲ್ಲಾ ಹೆಂಡತಿಯ ಫೋನ್ ಕರೆಯನ್ನು ಕಾಣುವಾಗ ಸಂತೋಷದಿಂದ ಸ್ವೀಕರಿಸುತ್ತಿದ್ದವರು ಇಂದು ” ಅವಳಿಗೆ ಫೋನ್ ಮಾಡಲು ಸಿಕ್ಕ ಸಮಯ ಇದುವೇನಾ ” ಅಂತ ಕೋಪಗೊಂಡಾಗಲೇ ಆತ ಮಾತನಾಡುತ್ತಿರುವುದು ಹೆಂಡತಿಯೊಡನೆ ಅಂತ ಅರ್ಥವಾಗಿಸಲು ಸಾಧ್ಯವಾಗುವ ರೂಪದಲ್ಲಾಗಿರುತ್ತದೆ ಆತನ ವರ್ತನೆ.

ಹೇ.. ಇವತ್ತು ನಾವು ಸುತ್ತಾಡಲು ಹೋಗೋಣವೇ ಅಂತ ಗೆಳೆಯನಲ್ಲಿ ಕೇಳುವಾಗ , ನಿನ್ನ ಹೆಂಡತಿ ಮನೆಗೆ ಹೋದಳಾ ಅಂತಾಗಿರುತ್ತದೆ ಗೆಳೆಯನ ಉತ್ತರ. ಅಂದೆಲ್ಲಾ ಹೆಂಡತಿ ತವರಿಗೆ ಹೋದ ದಿನ ಸಂಕಟಪಡುತ್ತಿದ್ದ ಗಂಡ ಇಂದು ಹೆಂಡತಿ ತವರಿಗೆ ಹೋದ ದಿನವಾಗಿರುತ್ತದೆ ಅತಿಯಾಗಿ ಸಂತೋಷಗೊಳ್ಳುವುದು. ಈ ಲೋಕದಲ್ಲಿ ಅತ್ಯಂತ ಹೆಚ್ಚು ಸುಳ್ಳು ಹೇಳುವವರು ವಕೀಲರಲ್ಲ, ಗಂಡಂದಿರಾಗಿದ್ದಾರೆ.
*ಅತ್ಯಂತ ಹೆಚ್ಚು ಸುಳ್ಳು ಕೇಳಲ್ಪಡುವವರು ಜಡ್ಜ್ ಗಳಲ್ಲ , ಹೆಂಡತಿಯರಾಗಿದ್ದಾರೆ.

Representational Image

ಒಬ್ಬ ಗಂಡನಾದವನ ಮುಂದೆ ಕ್ಯಾಮೆರಾ ಇಡುವುದಾದರೆ ಅತ್ಯಂತ ದೊಡ್ಡ ನಟ ಪ್ರಶಸ್ತಿಯನ್ನು ಆತನಿಗೆ ನೀಡಬೇಕಾದೀತು.
ನ್ಯಾಯದ ವಿಷಯದಲ್ಲೂ ತದ್ವಿರುದ್ಧ ಗಂಡನಾದವನು ಇನ್ನೊಬ್ಬಾಕೆಯೊಡನೆ ಸಂಬಂಧ ಇಟ್ಟುಕೊಂಡಿದ್ದರೂ , ತನ್ನ ಹೆಂಡತಿಯಾದವಳು ಅಂತಹ ಸಂಶಯಾಸ್ಪದವಾದ ವರ್ತನೆ ತೋರಿದರೆ ಕೋಪದಿಂದ ಕುದಿಯತೊಡಗುತ್ತಾನೆ. ಗಂಡನ ಇತರ ಸಂಬಂಧಗಳ ಕುರಿತು ಹೆಂಡತಿ ತಿಳಿದುಕೊಂಡಾಗ ಅವಳೊಬ್ಬಳಾಗಿ ಕುಳಿತುಕೊಂಡು ಅಳುತ್ತಾಳೆ , ಕೋಪಿಸಿಕೊಳ್ಳುತ್ತಾಳೆ. ಒಂದೆರಡು ತಿಂಗಳಾದಾಗ ಕಾಲಿಗೆ ಬಿದ್ದಾದರೂ ಆತನೊಡನೆ ಸಂತೋಷದಿಂದಿರಲು ಪ್ರಯತ್ನಿಸುತ್ತಾಳೆ. ಮನೆಯವರಿಗೆ ನಾನು ಭಾರವಾಗುವೆನೋ, ನನ್ನ ಮಕ್ಕಳ ಭವಿಷ್ಯ ಅದೇನಾಗಬಹುದೋ ಅಂತ ಚಿಂತಿಸಿ ಅವಳು ಮತ್ತೆ ಒಂದಾಗುವಳು. ಆದರೆ, ಅದನ್ನೇ ಅವಳು ಮಾಡಿದರೆ ಡೈವೋರ್ಸ್ ಆಗಿ , ಅವಳು ಬೀದಿ ಪಾಲಾಗಿ ಮಾನವನ್ನು ಕಳೆದುಕೊಂಡು ಜೀವಿಸಬೇಕಾಗುತ್ತದೆ. ನಷ್ಟಗೊಂಡ ಮಾನವು ಪುರುಷರಿಗೆ ಬೇಗ ತಿರುಗಿ ಸಿಗಬಹುದಾದರೆ ಹೆಣ್ಣಿಗೆ ಅದನ್ನು ಮರಳಿ ಪಡೆಯುವಂತಾಗಲು ತುಂಬಾ ಸಮಯವನ್ನು ತೆಗೆದುಕೊಳ್ಳಬೇಕಾಗುತ್ತದೆ.

ಮನೆಯಿಂದ ಹೊರಗೆ ಹೋದ ಗಂಡಂದಿರು , ತನ್ನ ಗೆಳೆಯರೊಡನೆ ಆಡುತ್ತಾ ಸಂತೋಷದಿಂದ ದಿನ ಕಳೆದರೆ ಬಹುತೇಕ ಹೆಂಡತಿಯರ ಜೀವನ ಮನೆಯೊಳಗಿನ ಕತ್ತಲೆ ಕೋಣೆಯಲ್ಲಿ ಆಗಿರುತ್ತದೆ. ನೀವು ನಿಮ್ಮ ಹೆಂಡತಿಯೊಡನೆ ಪ್ರೀತಿ ತೋರಿಸುತ್ತಿದ್ದೀರಾ..?
ಇಲ್ಲವಾದಲ್ಲಿ ಒಂದು ದಿನವಾದರೂ ಅವಳೊಡನೆ ಪ್ರೀತಿಯನ್ನು ತೋರಿಸಿ ನೋಡಿ.ಆನ್ ಲೈನ್ ನಲ್ಲಿ ಪರಿಚಯಗೊಳ್ಳುವ ಹುಡುಗಿಯರೊಡನೆ ಮಾತನಾಡುವ ಮಧುರವಾದ ಮಾತುಗಳಲ್ಲಿ ನಾಲ್ಕರಲ್ಲಿ ಒಂದನ್ನಾದರೂ ನಿಮ್ಮ ಹೆಂಡತಿಯೊಡನೆ ಮಾತನಾಡಿ. ಬದಲಾವಣೆ ಖಂಡಿತಾ ಕಾಣಬಹುದು. ಬಿಡುವಿನ ವೇಳೆಯಲ್ಲಿ ಅಡುಗೆ ಕೋಣೆಯಲ್ಲಿ ಅಡುಗೆ ನಿರತಳಾದ ನಿಮ್ಮ ಹೆಂಡತಿಯನ್ನು ಹಿಂದಿನಿಂದ ಹೋಗಿ ತಬ್ಬಿಕೊಂಡು ಕುತ್ತಿಗೆಗೊಂದು ಮುತ್ತನ್ನು ನೀಡಿ ,ಕಿವಿ ಯಲ್ಲಿ ಐ ಲವ್ ಯೂ ಅಂತ ಹೇಳಿದ್ದೀರಾ..?

ಯಾವತ್ತಾದರೂ ರುಚಿ ಚೆನ್ನಾಗಿಲ್ಲದಿದ್ದರೂ, ಊಟ ಮಾಡಿದ ನಂತರ ಸಖತ್ತಾಗಿದೆ, ಕೈ ಪುಣ್ಯ ಚೆನ್ನಾಗಿದೆ ಅಂತ ಹೇಳಿ ನೋಡಿದ್ದೀರಾ..?*
ಬಾಗಿಲ ಮರೆಯಲ್ಲಿ ನಿಂತು ಅವಳು ನಗುಮೊಗವನ್ನು ಬೀರುವುದನ್ನು ನೋಡಬಹುದು.

ನೀವು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ತೆಗೆದುಕೊಡುವ ಚಿನ್ನಾಭರಣಕ್ಕಿಂತಳೂ ಮೌಲ್ಯಯುತವಾಗಿರಬಹುದು ಅವಳ ಪಾಲಿಗೆ ನಿಮ್ಮ ಆ ಮಾತು..!!
ಅವಳು ಯಾವುದಾದರೂ ಹೊಸ ವಸ್ತ್ರ ಧರಿಸಿಕೊಂಡು ಬಂದಾಗ ನೀನಿಂದು ಸುಂದರಿಯಾಗಿದ್ದಿಯಾ ಅಂತ ಹೇಳಿ ನೋಡಿ.
ಬೆಳಿಗೆದ್ದು ಕೆಲಸಕ್ಕೆ ಹೋಗುವಾಗ ಅವಳೊಡನೆ ಯಾತ್ರೆ ಹೇಳಿ ಅವಳ ಹಣೆಗೊಂದು ಮುತ್ತು ಕೊಟ್ಟು ಹೊರಡಿ ನೋಡಿ,
ಮಧ್ಯಾಹ್ನ ಊಟ ಮಾಡುವ ಮುಂಚೆ ಅವಳಿಗೊಂದು ಫೋನ್ ಕರೆ ಮಾಡಿ ನೀನು ಊಟ ಮಾಡಿದ್ದಿಯಾ ಅಂತ ಕೇಳಿ ನೋಡಿ.
ಕೆಲವೊಮ್ಮೆ ಮನೆಯಿಂದ ಹೊರಗೆ ಹೋಗಿ ಒಟ್ಟಿಗೆ ಕೂತು ಊಟ ಮಾಡಿ. ವಿಶೇಷವಾದ ದಿನಗಳಲ್ಲಿ ಪಾರ್ಕ್ , ಇನ್ನಿತರ ಪ್ರವಾಸಿ ತಾಣಗಳಿಗೆ ಆಕೆಯನ್ನು ಕರೆದುಕೊಂಡು ಹೋಗಿ ನೋಡಿ. ಈ ರೀತಿಯೆಲ್ಲಾ ಮಾಡುವ ಗಂಡಂದಿರು ನೀವಾಗಿದ್ದೇ ಆದಲ್ಲಿ ನಿಮ್ಮ ಹೆಂಡತಿ ಹೇಳುವಳು *” ಈ ಲೋಕದಲ್ಲಿ ಅತ್ಯಂತ ದೊಡ್ಡ ಭಾಗ್ಯಶಾಲಿ ಹೆಣ್ಣು ನಾನೆಂದು”.*
ಹೆಂಡತಿ ಅವಳು ಭಾರವಲ್ಲ ,ಅದು ಸ್ನೇಹ. ಅದು ಮನಸ್ಸಿನೊಳಗೆ ಅದುಮಿಟ್ಟು ಜೀವಿಸಲು ಇರುವುದಲ್ಲ. ಅದನ್ನು ವ್ಯಕ್ತಪಡಿಸಬೇಕಾಗಿರುವುದಾಗಿದೆ.

Representational Image

ಇನ್ನು ಹೆಂಡತಿ ಫೋನ್ ಮಾಡಿದಾಗ ಸಂತೋಷದಿಂದ ಮಾತನಾಡಿ ಝೈನಬ, ಆಮಿನ ಅನ್ನುವ ಇನ್ನಿತರ ಹೆಸರಿನ ಬದಲು ಚಕ್ಕರೆ, ಮುತ್ತೇ ಅಂತ ಕರೆದು ನೋಡಿ.
ಕೆಲವೊಂದು ಪದಗಳಿಗೆ ತುಂಬಾ ಆಳವಾದ ಶಕ್ತಿಯಿದೆ. ಮನಸ್ಸನ್ನು ಬದಲಾಯಿಸಬಲ್ಲಂತಹ ಶಕ್ತಿ.
ಕೆಲವೊಮ್ಮೆ ಪದೇ ಪದೇ ಹೆಂಡತಿ ನಿಮಗೆ ಕರೆ ಮಾಡುತ್ತಿದ್ದರೆ ಕೋಪಗೊಳ್ಳದಿರಿ. ಯಾಕಂದರೆ ಅವಳಿಗೆ ಕರೆ ಮಾಡಲು ಇರುವುದು ನೀವು ಮಾತ್ರ.
ಹೆಂಡತಿಯನ್ನು ಹೊರೆಯಾಗಿ ಕಾಣದೆ , ಪ್ರೀತಿಯನ್ನು ಧಾರೆಯೆರೆಯುವ ಮೂಲಕ ಜೀವನ ಪರ್ಯಂತ ಸುಖವಾಗಿ ಅವಳೊಡನೆ ಜೀವಿಸುವಂತವರಾಗಿ.

(ಧನ್ಯವಾದಗಳು)

Leave a Reply