ಹೈದರಾಬಾದಿನ ಅನಿಲ್ ಕುಮಾರ್ ಚೌಹಾಣ್ ಅವರ ಅರಬಿಕ್ ಕ್ಯಾಲಿಗ್ರಫಿಯ ಕಲೆಯಿಂದಾಗಿ ದೇಶ ವಿದೇಶಗಳಲ್ಲಿ ಪ್ರಸಿದ್ಧರಾಗಿದ್ದಾರೆ. ಅವರ ಅಜ್ಜ ಮತ್ತು ತಂದೆ ಇಬ್ಬರೂ ಸೈನ್‌ಬೋರ್ಡ್‌ಗಳನ್ನು ಚಿತ್ರಿಸುತ್ತಿದ್ದರು, ಅವರ ಹೆಜ್ಜೆಗಳನ್ನು ಅನುಸರಿಸಿ, ಅನಿಲ್ ಕುಮಾರ್ ಅವರು ಸೈನ್‌ಬೋರ್ಡ್‌ಗಳನ್ನು ಚಿತ್ರಿಸಲು ಪ್ರಾರಂಭಿಸಿದರು. ಅಲ್ಲಿ ಸೈನ್‌ಬೋರ್ಡ್‌ಗಳು ಮುಖ್ಯವಾಗಿ ಉರ್ದು ಭಾಷೆಯಲ್ಲಿ ಇರುತ್ತದೆ. ಉರ್ದು ಅರ್ಥ ಮಾಡಲು ಪ್ರಯತ್ನಿಸಿದರೂ ಅವರಿಗೆ ಅದು ಕಬ್ಬಿಣದ ಕಡಲೆಯಾಗಿ ಕಂಡಿತು. ಅದಕ್ಕಾಗಿ ಅವರು ಅದನ್ನು ಕಾಗದದ ಮೇಲೆ ಜಾಗರೂಕತೆಯಿಂದ ನಕಲು ಮಾಡಲು ತೊಡಗಿದರು. ಕ್ರಮೇಣ ಉರ್ದು ಕಲಿಯಲು ಆಸಕ್ತಿ ವಹಿಸಿದ ಅವರು ಉರ್ದು ಭಾಷೆಯನ್ನೂ ಕಲಿತರು.

ಅನಿಲ್ ಕುಮಾರ್ ವೃತ್ತಿಪರ ಪೇಂಟಿಂಗ್ ಡಿಪ್ಲೊಮಾ ಕೂಡ ಮಾಡಿದ್ದಾರೆ. 20 ವರ್ಷಗಳ ಹಿಂದೆ ಹಲವಾರು ಫಲಕಗಳನ್ನು ಚಿತ್ರಿಸಿದ ನಂತರ ಹಳೆಯ ನಗರದ ಮಸೀದಿಗೆ ಪವಿತ್ರ ಕುರ್‌ಆನ್‌ನ ವಾಕ್ಯಗಳನ್ನು ಬರೆಯುವ ಅವಕಾಶ ಅವರಿಗೆ ಸಿಕ್ಕಿತು. ಮೊದಲು ಕಲ್ಮಾ ತಯ್ಯಬ್ ಅನ್ನು ಅವರು ಬರೆದರು (ದಕ್ಷಿಣ ಏಷ್ಯಾದ ಮುಸ್ಲಿಮರು ಪದೇ ಪದೇ ಓದುವ ಪದಗಳು) ಅನಿಲ್ ಕುಮಾರ್ ವಿವರಿಸುತ್ತಾರೆ “ನಾನು ಅರೇಬಿಕ್‌ನಲ್ಲಿ ಹರ್ಕತ್ (ಜೆರ್, ಜಬರ್, ಪೇಶ) ಸಹಾಯದಿಂದ ಉರ್ದುವಿನಲ್ಲಿ ಇದೇ ರೀತಿಯ ಅಕ್ಷರಗಳನ್ನು ಗುರುತಿಸಲು ಪ್ರಯತ್ನಿಸುತ್ತಿದ್ದೇನೆ”. ಕಲಿಮ ತಯ್ಯಿಬಾ ವನ್ನು ಕೆತ್ತಿದ ಅನಿಲ್ ಕುಮಾರ್ ರವರ ಕಲೆಯನ್ನು ಮೆಚ್ಚಿ ಹಲವು ಮಸೀದಿಗಳಿಂದಲೂ ಅವರಿಗೆ ಆಫರ್ ಬಂತು.

Meet Anil Kumar Chauhan the Arabic calligrapher from Hyderabad

ಅನಿಲ್ ಕುಮಾರ್ ಇದುವರೆಗೆ 200 ಕ್ಕೂ ಹೆಚ್ಚು ಮಸೀದಿಗಳಲ್ಲಿ ಕೆಲಸ ಮಾಡಿದ್ದಾರೆ, ಮಸೀದಿಗಳ ಗೋಡೆಗಳನ್ನು ಕುರಾನ್‌ನ ಆಯ್ದ ಭಾಗಗಳಿಂದ ಅಲಂಕರಿಸಿದ್ದಾರೆ. ಮಾತ್ರವಲ್ಲ ಸುಮಾರು ನೂರು ಮಸೀದಿಗಳಿಂದ ಯಾವುದೇ ಹಣವನ್ನು ಪಡೆದಿಲ್ಲ. ತನ್ನ ಈ ಪ್ರಯತ್ನಕ್ಕೆ ಕೇವಲ ಕೃತಜ್ಞತೆಯ ಪತ್ರಗಳು ಮಾತ್ರ ಸಾಕು ಎಂದು ಅವರು ಹೇಳುತ್ತಾರೆ. ಮಸೀದಿಗಳಲ್ಲಿ ಕುರಾನ್ ವಚನಗಳನ್ನು ಬರೆಯುವುದನ್ನು ಅವರ ಸಮುದಾಯದಲ್ಲಿ ಯಾರೂ ವಿರೋಧಿಸಲಿಲ್ಲ, ಆದರೆ ಕೆಲವು ಮುಸ್ಲಿಮರು ಅದನ್ನು ವಿರೋಧಿಸಿದರು. ಪ್ರತಿಭಟನೆಯ ನಂತರ, ಅನಿಲ್ ಕುಮಾರ್ ಜಾಮಿಯಾ ನಿಜಾಮಿಯಾ ವಿಶ್ವವಿದ್ಯಾಲಯದಿಂದ ಫತ್ವಾ ಕೇಳಿದರು. ಅಲ್ಲಿಂದ ಅನುಮತಿ ಸಿಕ್ಕಿದ ಬಳಿಕ ಅವರನ್ನು ವಿರೋಧಿಸಿದವರು ಬಾಯಿ ಮುಚ್ಚಿದರು.

ಅನಿಲ್ ಕುಮಾರ್ ಭಾರತದಾದ್ಯಂತ ಅನೇಕ ದೂರದರ್ಶನ ಚಾನೆಲ್‌ಗಳು, ಮುದ್ರಣ ಮಾಧ್ಯಮಗಳಿಗೆ ಹಲವು ಬಾರಿ ಸಂದರ್ಶನಗಳನ್ನು ನೀಡಿದ್ದಾರೆ. ಕಳೆದ ತಿಂಗಳು, ಅವರು ಜೂಮ್‌ನಿಂದ ವೀಡಿಯೊ ಕಾನ್ಫರೆನ್ಸಿಂಗ್ ವೇದಿಕೆಯ ಮೂಲಕ ಪಾಕಿಸ್ತಾನಿ ಚಾನೆಲ್‌ಗೆ ಸಂದರ್ಶನ ನೀಡಿದರು. ಮಸೀದಿಗಳಲ್ಲಿ ಅವರ ಕೆಲಸದ ಬಗ್ಗೆ ಅನೇಕ ಆಸಕ್ತಿದಾಯಕ ಅನುಭವಗಳನ್ನು ಹೊಂದಿದ್ದಾರೆ. ಅವರ ಕೆಲವು ಅನುಭವಗಳು ಆಧ್ಯಾತ್ಮಿಕವಾಗಿವೆ.

A fatwa that saved the art of Anil Chauhan

ಅನಿಲ್ ಕುಮಾರ್ ಅವರ ಮಕ್ಕಳು ಚಿತ್ರಕಲೆ ಅಥವಾ ಕ್ಯಾಲಿಗ್ರಫಿ ಕಲಿತಿಲ್ಲ. ಆದಾಗ್ಯೂ, ಅವನ ಕಿರಿಯ ಸಹೋದರ ಅವರಿಗೆ ಈ ಕೆಲಸದಲ್ಲಿ ಸಹಾಯ ಮಾಡುತ್ತಾನೆ. ಅವರ ಮಕ್ಕಳಿಬ್ಬರೂ ಪದವೀಧರರು ಮತ್ತು ಖಾಸಗಿ ವಲಯದಲ್ಲಿ ಕೆಲಸ ಮಾಡುತ್ತಿದ್ದಾರೆ. “ಕ್ಯಾಲಿಗ್ರಫಿ ಸಾಯುತ್ತಿದೆ. ಕೆಲವೇ ಜನರಿಗೆ ಇದು ತಿಳಿದಿದೆ, ಎರಡನೆಯದಾಗಿ ತಿಳಿದಿರುವವರಿಗೆ, ಅವರಿಗೆ ಹೆಚ್ಚಿನ ಉದ್ಯೋಗಾವಕಾಶಗಳೂ ಇಲ್ಲ. ನಾನು ದುಃಖಿತನಾಗಿದ್ದೇನೆ ” ಎಂದು ಅನಿಲ್ ವಿಷಾದದಿಂದ ಹೇಳುತ್ತಾರೆ. ತನ್ನ ಕೆಲಸದ ಮೂಲಕ, ಅನಿಲ್ ಕುಮಾರ್ ಹೆಚ್ಚು ಹಣವನ್ನು ಗಳಿಸದೇ ಇರಬಹುದು, ಆದರೆ ಅವರು ಅನೇಕ ಜನರಿಂದ ಸಾಕಷ್ಟು ಪ್ರೀತಿ ಮತ್ತು ಗೌರವವನ್ನು ಗಳಿಸಿದ್ದಾರೆ.

Leave a Reply