ಹೊಸದಿಲ್ಲಿ: ಪಾಕಿಸ್ತಾನ ಭಯೋತ್ಪಾದನೆ ನಿಲ್ಲಿಸಿದರೆ ಭಾರತ ಸೈನ್ಯ ಏಷ್ಯನ್ ಗೇಮ್ಸ್‍ನಲ್ಲಿ ಪದಕ ಗಳಿಸಿದ ನೀರಜ್ ಚೋಪ್ರರಂತೆ ವರ್ತಿಸುತ್ತದೆ ಎಂದು ಭೂ ಸೇನೆಯ ಮಹಾ ದಂಡನಾಯ ಬಿಪಿನ್ ರಾವತ್ ಹೇಳಿದರು. ಭಯೋತ್ಪಾದನ ಚಟುವಟಿಕೆಗಳನ್ನು ನಿಲ್ಲಿಸಲು ಪಾಕಿಸ್ತಾನ ಮುಂದಾದರೆ ಅದನ್ನು ಪ್ರೋತ್ಸಾಹಿಸಿ ಭಾರತ ನಿಲುವು ಕೈಗೊಳ್ಳಲಿದೆ ಎಂದು ರಾವತ್ ಹೇಳಿದರು. ಏಷ್ಯನ್ ಗೇಮ್ಸ್‍ನಲ್ಲಿ ಪದಕಗೆದ್ದವರನ್ನು ಗೌರವಿಸುವ ಕಾರ್ಯಕ್ರಮದಲ್ಲಿ ಅವರು ಮಾತಾಡುತ್ತಿದ್ದರು.

ಏಶ್ಯನ್ ಗೇಮ್ಸ್‍ನಲ್ಲಿ ಜಾವೆಲಿನ್ ತ್ರೋದಲ್ಲಿ ನೀರಜ್ ಚೋಪ್ರ ಚಿನ್ನ ಗೆದ್ದಿದ್ದರು. ಕಂಚು ಗೆದ್ದ ಪಾಕಿಸ್ತಾನದ ಆಟಗಾರನ ಕೈಕುಲುಕಿದ್ದರು. ಈ ಚಿತ್ರ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.

ಕಾಶ್ಮೀರದ ಸ್ತಿತಿಗತಿಗಲು 2017ಕ್ಕೆ ಹೋಲಿಸಿದರೆ ಉತ್ತಮವಾಗಿದೆ. ಈಗ ನುಸುಳುಕೋರರನ್ನು ತಡೆಯಲು ಬಲವಾದ ಕ್ರಮಕೈಗೊಳ್ಳಾಗುತ್ತಿದೆ ಎಂದು ರಾವತ್ ಹೇಳಿದರು.
ಭಾರತದ ಕ್ರೀಡೆಯಲ್ಲಿ ಅಂತಾರಾಷ್ಟ್ರೀಯವಾಗಿ ಮಿಂಚಬೇಕು. 2020 ಒಲಿಂಪಿಕ್ಸ್‍ಗೆ ಈಗಲೇ ಸಿದ್ಧತೆ ನಡೆಸಿದರೆ ಗರಿಷ್ಠ ಕ್ರೀಡಾಳುಗಳನ್ನು ಒಲಿಂಪಿಕ್ಸ್‍ಗೆ ಕಳುಹಿಸಲು ಸಾಧ್ಯವಿದೆ. ಏಷ್ಯನ್ ಗೇಮ್ಸ್‍ನಲ್ಲಿ ಭೂಸೇನೆಯಿಂದ 73 ಕ್ರೀಡಾಪಟುಗಳು ಆಲ್ಗೋಂಡಿದ್ದರು. ನಾಲ್ಕು ಚಿನ್ನ್ ನಾಲ್ಕು ಬೆಳ್ಳಿಗೆ ಸಹಿತ ಹನ್ನೊಂದು ಪದಕಗಳು ಸೇನೆಯ ಪಾಲಾಗಿವೆ.

Leave a Reply