ಕರಾವಳಿಯಲ್ಲಿ ಮಗದೊಮ್ಮೆ ಸೌಹಾರ್ದತೆಯ ಚಿಲುಮೆಗೆ ನಾಂದಿಹಾಡಿದ ನವವಿವಾಹಿತ ಶೈಲೇಶ್. ಕರಾವಳಿಯ ಹೃದಯ ಬಾಗವಾಗಿರುವ ಈ ಪರಿಸರದಲ್ಲಿ ಹಿಂದೂ ಯುವಕನೋರ್ವ ತನ್ನ ಮದುವೆಯ ಔತಣಕೂಟದ ಸಲುವಾಗಿ, ಮಸೀದಿಯಲ್ಲಿ ಮುಸ್ಲಿಮರಿಗೆ ಇಫ್ತಾರ್ ಕೂಟವನ್ನು ಏರ್ಪಡಿಸುವ ಮೂಲಕ ಸೌಹಾರ್ದ ಮೆರೆದ ಘಟನೆ ಬಂಟ್ವಾಳ ತಾಲೂಕಿನ ಮುಡಿಪು ಸಮೀಪದ ಸಂಬಾರ ತೋಟ ಎಂಬಲ್ಲಿ ನಡೆದಿದೆ. ಇಂದು ಮನುಷ್ಯ ಮನಸ್ಸುಗಳಲ್ಲಿ ಸಾವಿರ ರೀತಿಯ ತನ್ನದೇ ಧರ್ಮದ ಚಿಂತನೆಗಳು ಮೂಡುತ್ತಿರುವ ಸಂಧರ್ಭದಲ್ಲಿ ಶೈಲೇಶ್ ಎಂಬ ವ್ಯಕ್ತಿಯ ಈ ಸುಂದರ ಚಿಂತನೆಯನ್ನು ಸರ್ವಧರ್ಮಿಯರು ಕೊಂಡಾಡಬೇಕಾಗಿದೆ…. ಶೈಲೇಶ್ ಎಂಬ ವ್ಯಕ್ತಿಯು ಮೂಲತಃ ಇರಾ ವ್ಯಾಪ್ತಿಯಲ್ಲಿ ನೆಲೆಸಿ,, ತನ್ನ ಉದ್ಯೋಗ ವೃತ್ತಿಯನ್ನು ಮುಡಿಪು ಪರಿಸರದ ಸಂಬಾರ ತೋಟದಲ್ಲಿ “ಅಮ್ಮ ಎಂಟರ್ಪ್ರೈಸಸ್ “ಎಂಬ ಎಲೆಕ್ಟ್ರಾನಿಕ್ಸ್ ಸಾಮಗ್ರಿಗಳನ್ನು ಮಾರಾಟ ಮಾಡುವ ತನ್ನದೇ ಆದ ಸ್ವಂತ ಕೇಂದ್ರದಲ್ಲಿ ತನ್ನ ಉದ್ಯೋಗವನ್ನು ಎಲ್ಲರ ಮೆಚ್ಚುಗೆಯೊಂದಿಗೆ ಮುನ್ನಡೆಸುತ್ತಿದ್ದಾರೆ… ಸರ್ವಧರ್ಮಿಯರು ಕೇವಲ ವ್ಯಾಪಾರಕ್ಕೆ ಮಾತ್ರ ಸೀಮಿತ ಅಲ್ಲ,,, ನನ್ನ ಜೀವನದ ಎಲ್ಲ ಕಷ್ಟ ಸುಖಗಳಿಗೂ ಸೀಮಿತ ಎನ್ನುವ ನಿಟ್ಟಿನಲ್ಲಿ,

ಶ್ರೀಯುತ ಶೈಲೇಶ್ ಅವರು ತನ್ನ ಕರ್ಮಭೂಮಿಯ ಸುತ್ತಮುತ್ತಲಿನ ಎಲ್ಲಾ ಮುಸಲ್ಮಾನ ಬಂದುಗಳಿಗೆ ತನ್ನ ಸುಂದರ ಸಾಂಸಾರಿಕ ಜೀವನಕ್ಕೆ ನಾಂದಿಹಾಡುವ ಪುಣ್ಯಕಾರ್ಯಕ್ಕೆ ಆಮಂತ್ರಣ ನೀಡುವ ಸಂಧರ್ಭದಲ್ಲಿ, ಮುಸಲ್ಮಾನರು ಉಪವಾಸ ವ್ರತದಲ್ಲಿರುವರು ಎಂದು ತಿಳಿದು ಆ ಎಲ್ಲರನ್ನು ಅಂದು ತನ್ನ ಮನೆಗೆ ರಾತ್ರಿಯ ಔತಣಕೂಟಕ್ಕೆ ಕರೆದು ಆಶೀರ್ವಾದ ಮಾಡಬೇಕೆಂದು ಹೇಳಿದ್ದಲ್ಲದೇ ನೂರಾನಿಯ ಜುಮಾ ಮಸೀದಿ ಸಂಬಾರ ತೋಟದಲ್ಲಿ ಇಫ್ತಾರ್ ಕೂಟ ಏರ್ಪಡಿಸಿ ತನ್ನ ಸೌಹಾರ್ದ ಮನೋಭಾವನೆಯನ್ನು ಇಡೀ ಮನುಕುಲಕ್ಕೆ ಸಾರುವಂತಿದೆ.  ಇವರು ಶ್ರೀ ಸೋಮನಾಥೇಶ್ವರ ದೇವಾಲಯ ದಲ್ಲಿ ತನ್ನ ಕನಸಿನ ರಾಣಿ ಶ್ರುತಿ ಯವರೊಂದಿಗೆ ವೈವಾಹಿಕ ಜೀವನಕ್ಕೆ ಮುನ್ನುಡಿ ಬರೆದಿದ್ದಾರೆ… ಇವರ ಈ ಸುಂದರ ಚಿಂತನೆಯ ಬದುಕು ಯಶಸ್ವಿಯಾಗಲಿ,ಇವರ ಜೀವನ ಶೈಲಿ ಉಳಿದ್ದೆಲ್ಲರಿಗೂ ಮಾರ್ಗದರ್ಶನವಾಗಲಿ ಎಂದು ಮನಸ್ಸಿನ ಅಂತರಾಳದಿಂದ ಹಾರೈಸುತ್ತಿದ್ದೇವೆ…..

Leave a Reply