ಭಾರತ ಪಾಕಿಸ್ತಾನದ ನಡುವೆ ಚರ್ಚೆ ಪುನರಾರಂಭಿಸಲು ಸನ್ನದ್ಧತೆ ಪ್ರಕಟಿಸಿ ಪಾಕಿಸ್ತಾನದ ಅಧ್ಯಕ್ಷ ಇಮ್ರಾನ್ ಖಾನ್ ಮೋದಿಯವರಿಗೆ ಪತ್ರ ಬರೆದಿದ್ದಾರೆ.

2015 ರಲ್ಲಿ ನಿಲ್ಲಿಸಿದ ಮಾತುಕತೆಯನ್ನು ಪುನರಾರಂಭಿಸುವಂತೆ ಪತ್ರದಲ್ಲಿ ತಿಳಿಸಲಾಗಿದೆ. ಎರಡೂ ರಾಷ್ಟ್ರಗಳ ವಿದೇಶಾಂಗ ಸಚಿವರೂ ಚರ್ಚೆಯಲ್ಲಿ ಭಾಗವಹಿಸಬೇಕು. ಭಾರತ ಮತ್ತು ಪಾಕಿಸ್ತಾನದ ನಡುವೆ ಕ್ರಿಯಾತ್ಮಕವಾದ ಸಂಬಂಧ ಬೆಳೆಯಬೇಕು ಎಂದೂ ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಇತ್ತೀಚಿಗೆ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತು ಪಾಕಿಸ್ತಾನದ ಶಾ ಮೆಹಮೂದ್ ಕುರೇಶಿ ಅವರು ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಮಾತುಕತೆ ನಡೆಸಿದ್ದರು.ಈಗ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ಪತ್ರದ ವಿಚಾರವಾಗಿ ಪ್ರಸ್ತಾಪಿಸಿರುವ ಪಾಕ್ ವಿದೇಶಾಂಗ ವಕ್ತಾರ “ಪಾಕ್ ಪ್ರಧಾನಿ ಪ್ರಧಾನಿ ಮೋದಿ ಅವರಿಗೆ ಸಕಾರಾತ್ಮಕ ಸ್ಪೂರ್ತಿಯೊಂದಿಗೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಇಂತಹದ್ದೊಂದು ಪ್ರಕ್ರಿಯೆ ಇಮ್ರಾನ್ ರಿಂದ ಎರಡನೇಯ ಬಾರಿಗೆ ನಡೆದಿದೆ.

Leave a Reply