Image : Indiatimes

ದುಬೈ : ಒಬ್ಬ ಕ್ರೈಸ್ತ ಉದ್ಯಮಿಯಾಗಿ ಮುಸ್ಲಿಂ ಕಾರ್ಮಿಕರಿಗೆ ನಮಾಜ್ ಮಾಡಲು ಫ್ಯುಜೈರಾದಲ್ಲಿ ಮಸೀದಿ ಕಟ್ಟಿಸಿ ಕೊಟ್ಟ ಸುದ್ದಿ ಕಳೆದ ವರ್ಷ ಎಲ್ಲರ ಮನಗೆದ್ದಿತ್ತು. ಇದೀಗ ಅದೇ ಉದ್ಯಮಿ ಮತ್ತು ಕ್ರೈಸ್ತ ಅನುಯಾಯಿ ಕೇರಳದ ಕಾಯಂಕುಳಂ ಮೂಲದ 49 ವರ್ಷದ ಸಾಜಿ ಚೆರಿಯನ್ ಈ ಬಾರಿ ಸುಮಾರು 800 ಕಾರ್ಮಿಕರಿಗೆ ಇಫ್ತಾರ್ ವ್ಯವಸ್ಥೆ (ಉಪವಾಸ ತೊರೆಯಲು ಭೋಜನದ ವ್ಯವಸ್ಥೆ) ಮಾಡಿದ್ದಾರೆ. 49 ವರ್ಷ ವಯಸ್ಸಿನ ಸಜೀ ಚೆರಿಯಾನ್ ಈ ನಡೆಗೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಕಳೆದ ವರ್ಷ ಕಾರ್ಮಿಕರು ತಮ್ಮ ಗಳಿಕೆಯನ್ನು ಟ್ಯಾಕ್ಸಿಗೆ ಕೊಟ್ಟು ದೂರದ ಮಸೀದಿಗೆ ಹೋಗುವದನ್ನು ಮನಗಂಡ ಅವರು ಜೀಸಸ್ ಅಮ್ಮ ಮೇರಿ ಅಥವಾ ಉಮ್ಮುಈಸಾ ಎಂಬ ಮಸೀದಿ ಕಟ್ಟಿಸಿ ಕೊಟ್ಟಿದ್ದರು.

ಈ ಇಫ್ತಾರ್ ಕೂಟದಲ್ಲಿ ಕಾರ್ಮಿಕರಿಗೆ ಖರ್ಜೂರ, ತಾಜಾ ಹಣ್ಣುಗಳು, ತಿನಿಸುಗಳು, ಹಣ್ಣಿನ ರಸ, ಬಿರಿಯಾನಿ ಮತ್ತು ನೀರು ಒದಗಿಸಲಾಗುತ್ತದೆ. ಪ್ರತಿದಿನ ಇಪ್ತಾರ್ ವೇಳೆ ಅವರಿಗೆ ಉಲ್ಲಾಸವಾಗಲು ಬಗೆ ಬಗೆಯ ಬಿರಿಯಾನಿ ಮಾಡಿ ತಿನ್ನಿಸುತ್ತೇನೆ ಎಂದು ಸಜಿ ಹೇಳಿದ್ದಾರೆ.

ಜಗತ್ತು ಇಂತಹ ಜನರನ್ನು ಬಯಸುತ್ತದೆ ಮತ್ತು ಇಂತಹ ಜನರು ಇಲ್ಲದೆ ಇರುತ್ತಿದ್ದರೆ ಈ ಜಗತ್ತು ಎಂದೋ ನಾಶವಾಗಿ ಹೋಗುತ್ತಿತ್ತು. ನಾವು ಅವರಿಗಾಗಿ ಪ್ರಾರ್ಥಿಸುತ್ತೇವೆ ಎಂದು ಕಾರ್ಮಿಕನೊಬ್ಬನ ಮನದಾಳದ ಮಾತು.

2003ರಲ್ಲಿ ಸಂಯುಕ್ತ ಅರಬ್ ಸಂಸ್ಥಾನಕ್ಕೆ ಕೈಯ್ಯಲ್ಲಿ ಕೆಲವು ನೂರು ದಿರ್ಹಂ ಇಟ್ಟುಕೊಂಡು ಆಗಮಿಸಿದ್ದ ಚೆರಿಯನ್ ಇದೀಗ ವಿವಿಧ ಕಂಪೆನಿಗಳ ಹಿರಿಯ ಉದ್ಯೋಗಿಗಳು ಹಾಗೂ ಕಾರ್ಮಿಕರಿಗೆ ಅದೇ ಕಾಂಪ್ಲೆಕ್ಸ್ ನಲ್ಲಿರುವ ಹವಾನಿಯಂತ್ರಿತ ಸಭಾಂಗಣದಲ್ಲಿ ಇಫ್ತಾರ್ ಕೂಟ ಏರ್ಪಡಿಸುತ್ತಾರೆ.

Leave a Reply