ವಾರಣಾಸಿ: ವಿದ್ಯಾರ್ಥಿನಿ ನೇಹಾ ಸುಮಾರು 16 ಲಕ್ಷ ಮುತ್ತುಗಳನ್ನು ಬಳಸಿ ರಚಿಸಿದ ಭಾರತದ ನಕ್ಷೆ ದಾಖಲೆಗೆ ಕಾರಣವಾಗಿದೆ. ಮಹಾತ್ಮಾಗಾಂಧಿ ಕಾಶಿ ವಿದ್ಯಾಪೀಠದ ವಿದ್ಯಾರ್ಥಿ ನೇಹಾ ವಾರಣಾಸಿಯ ಗುರುಧಾಮ್ ಆಲಯದಲ್ಲಿ ಆಯೋಜಿಸಿದ್ದ ‘ಸಮಗ್ರ ಕಾಶಿ’ ಫೋಟೋ ಪ್ರದರ್ಶನದಲ್ಲಿ ಈ ನಕ್ಷೆ ಎಲ್ಲರ ಗಮನ ಕೇಂದ್ರವಾಗಿದೆ.

ಪ್ರಾದೇಶಿಕ ಪುರಾತತ್ವ ಇಲಾಖೆ ತನ್ನ 25ನೇ ಸ್ಥಾಪನಾ ದಿನಾಚರಣೆ ಪ್ರಯುಕ್ತ ಈ ಕಾರ್ಯಕ್ರಮ ಆಯೋಜಿಸಿದ್ದು, ವಾರಣಾಸಿಯ ಜನಪ್ರಿಯ ಹಬ್ಬ ಹಾಗೂ ಪ್ರಾಚೀನ ಕಲಾಕೃತಿಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ.

ನೇಹಾ ರಚಿಸಿರುವ ಭಾರತದ ನಕ್ಷೆ ಸುಮಾರು 30 ಕೆ.ಜಿ ತೂಕ ಇದೆ. ದೇಶದ 29 ರಾಜ್ಯಗಳನ್ನು ವಿವಿಧ ಬಣ್ಣಗಳಲ್ಲಿ ತುಂಬಿದ್ದು ಆಕರ್ಷಕವಾಗಿದೆ.

Leave a Reply