ಭೋಪಾಲ್: ಪ್ರಿಯಾಂಕ ಗಾಂಧಿ ಮಧ್ಯ ಪ್ರದೇಶದ ಇಂದೋರ್ ನಲ್ಲಿ ಪ್ರಚಾರದಲ್ಲಿ ತೊಡಗಿದ್ದಾಗ ಮಾರ್ಗದ ಮಧ್ಯೆ ನಿಂತು ಮೋದಿ ಬೆಂಬಲಿಗರು “ಮೋದಿ ಮೋದಿ” ಎಂದು ಘೋಷಣೆ ಕೂಗಿದ್ದನ್ನು ಕಂಡು ಪ್ರಿಯಾಂಕಾ ಕೂಡಲೇ ಕಾರು ನಿಲ್ಲಿಸಿದ್ದಾರೆ. ಕಾರಿನಿಂದ ಕೆಳಗೆ ಇಳಿದ ಪ್ರಿಯಾಂಕಾ ಕೂಡಲೇ ಮೋದಿ ಬೆಂಬಲಿಗರ ಹತ್ತಿರ ಬಂದು ಅವರ ಕೈ ಕುಲುಕಿ ಅವರಿಗೆ ಪ್ರೋತ್ಸಾಹ ನೀಡಿದರು.
ಪ್ರಿಯಾಂಕಾರಾ ಈ ನಡೆಗೆ ಅಲ್ಲಿದ್ದ ಎಲ್ಲಾರೂ ಅಚ್ಚರಿಗೊಂಡಿದ್ದು, ಅವರೂ ಪ್ರಿಯಾಂಕಾ ಅಭಿಮಾನಿಯಂತೆ ಕೈ ಕುಲುಕಲು ಮುಂದೆ ಮುಂದೆ ಬಂದರು. ಶೇಕ್ ಹ್ಯಾಂಡ್ ಮಾಡುವ ವೇಳೆ ಪ್ರಿಯಾಂಕ, ಎಲ್ಲರಿಗೂ ಆಲ್ ದಿ ಬೆಸ್ಟ್ ಆಲ್ ದಿ ಬೆಸ್ಟ್ ಎನ್ನುತ್ತಾ ನೀವು ನಿಮ್ಮ ಜಾಗದಲ್ಲಿ ಸರಿಯಾಗಿದ್ದೀರಿ ನಾನು ನನ್ನ ಜಾಗದಲ್ಲಿ ಸರಿಯಾಗಿದ್ದೇನೆ ಎಂದಾಗ ಪ್ರತ್ಯತ್ತರವಾಗಿ ಅವರೂ ಆಲ್ ದಿ ಬೆಸ್ಟ್ ಎಂದು ಹೇಳಿದರು. ಈ ವಿಡಿಯೋವನ್ನು ಮಧ್ಯಪ್ರದೇಶ ಕಾಂಗ್ರೆಸ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಲಾಗಿದೆ. ವಿಡಿಯೋ ತುಂಬಾ ವೈರಲ್ ಆಗಿದ್ದು, ಪ್ರಿಯಾಂಕ ಒಂದಲ್ಲ ಒಂದು ರೀತಿಯಲ್ಲಿ ಜನರನ್ನು ಆಕರ್ಷಿಸುವಲ್ಲಿ ಮತ್ತೊಮ್ಮೆ ಸಫಲರಾಗಿದ್ದಾರೆ.

Leave a Reply