ಹೊಸದಿಲ್ಲಿ: ದೇಶದ ಎಲ್ಲ ಮನೆಗಳಲ್ಲಿಯೂ ಬಲ್ಬ್ ಉರಿಸುವ ಉದ್ದೇಶ ಪೂರ್ತಿಗೊಳಿಸಿದ ಬಳಿಕ ಈಗ ಕೇಂದ್ರದ ಮೋದಿ ಸರಕಾರ ಆಹಾರ ತಯಾರಿಗೆ ಗ್ರಾಮಗಳಿಗೆ ಇಂಡಕ್ಷನ್ ಕುಕ್ಕರ್, ಸೋಲಾರ್ ಕುಕ್ಕರ್ ನೀಡಲಿದೆ.

ದೇಶದ ಆಮದು ಖರ್ಚನ್ನು ಕಡಿಮೆ ಮಾಡುವುದಕ್ಕಾಗಿ ಸರಕಾರ ಈ ಹೆಜ್ಜೆ ಇಡುತ್ತಿದೆ. ಇಂಧನ ಸಚಿವಾಲಯ ಈ ಕುರಿತು ಯೋಜನೆಗೆ ರೂಪು ನೀಡುತ್ತಿದೆ.

ಗ್ಯಾಸ್ ಸಿಲಿಂಡರ್ ತುಂಬುವ ಕಷ್ಟ ಇಲ್ಲ:

ಮುಂದಿನ ವರ್ಷದಲ್ಲಿ ಇಂಡಕ್ಷನ್ ಕುಕ್ಕರ್ ಮತ್ತು ಸೋಲಾರ್ ಕುಕ್ಕರ್ ವಿತರಣೆ ಆರಂಭವಾಗಲಿದ್ದು, ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಿಗೆ ಸೋಲಾರ್ ಕುಕ್ಕರ್ ಮತ್ತು ಇಂಡಕ್ಷನ್ ಕುಕ್ಕರ್ ವಿತರಣೆಯಾಗಲಿದೆ. ಸೋಲಾರ್ ಕುಕ್ಕರ್ ಮತ್ತು ಇಂಡಕ್ಷನ್ ಕುಕ್ಕರ್‍ಗಳನ್ನು ವಿತರಿಸುವ ಹೊಣೆಯನ್ನು ಇಂಧನ ಸಚಿವಾಲಯದ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಐಎಸ್‍ಎಲ್‍ಗೆ ವಹಿಸಿಕೊಡಲಾಗಿದ್ದು, ಇಂಧನ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ ಪ್ರಕಾರ ಗ್ರಾಮೀಣ ಪ್ರದೇಶದಲ್ಲಿ ಅಗ್ಗ ದರದಲ್ಲಿ ಇಂಡಕ್ಷನ್ ಕುಕ್ಕರ್ ಮತ್ತು ಸೋಲಾರ್ ಕುಕ್ಕರ್ ಲಭ್ಯಗೊಳಿಸುವ ಯೋಜನೆ ರೂಪಿಸಲಾಗುತ್ತಿದೆ.

ಗ್ರಾಮದ ಮಹಿಳೆಯರು ಆರಾಮವಾಗಿ ಆಹಾರ ತಯಾರಿಸುವಂತಾಗಬೇಕೆಂದು ಇದರ ಉದ್ದೇಶವಾಗಿದೆ. ಈ ವ್ಯವಸ್ಥೆ ಸಿಕ್ಕ ಬಳಿಕ ಗ್ರಾಮೀಣ ಜನರಿಗೆ ಗ್ಯಾಸ್ ಸಿಲಿಂಡರ್ ತುಂಬುವ ಮತ್ತು ಅದು ತರಿಸಿಕೊಳ್ಳುವ ತಲೆ ನೋವು ತೆರವುಆಗಲಿದೆ.

ಪರಿಸರ ಸುರಕ್ಷೆ:

ಕೇಂದ್ರದ ವಿದ್ಯುತ್ ರಾಜ್ಯ ಸಚಿವ ಆರ್‍ಕೆ ಸಿಂಗ್ ದೇಶದ ಎಲ್ಲ ಮನೆಗಳಲ್ಲಿವಿದ್ಯುತ್ ಖಾತರಿ ಪಡಿಸಿದ ಬಳಿಕ ಅವರ ಜೀವನ ಮಟ್ಟವನ್ನು ಎತ್ತರಿಸುವ ಕುರಿತು ಯೋಚಿಸುತ್ತೇವೆ ಎಂದು ಹೇಳಿದರು. ದೇಶದಲ್ಲಿ ಇಂಡಕ್ಷನ್ ಮತ್ತು ಸಓಲಾರ್ ಕುಕ್ಕರ್ ಬಳಕೆಯನ್ನು ಪ್ರೋತ್ಸಾಹಿಸಲಾಗುತ್ತದೆ. ಇದರಿಂದ ಪರಿಸರ ಸುರಕ್ಷೆ ಲಭ್ಯವಾಗುವುದು. ಜೊತೆಗೆ ದೇಶಕ್ಕೆ ಆಮದು ಮಾಡಿಕೊಳ್ಳಲು ವ್ಯಯಿಸುವ ಹಣ ಕಡಿಮೆಯಾಗಲಿದೆ ಎಂದು ಸಚಿವರು ಹೇಳಿದರು.

Leave a Reply