ಕ್ಯಾನ್ಸರ್ ನಿಂದ ಬದುಕುಳಿದ ಮಹಿಳೆಯೊಬ್ಬಳು ತನ್ನ ಕಾಲಿನ ಮೂಳೆಯೊಂದಿಗೆ ವಿಲಕ್ಷಣವಾದ ಮತ್ತು ಅದ್ಭುತವಾದ ಸಾಹಸಗಳಿಗೆ ಇನ್ಸ್ಟಾಗ್ರಾಮ್ ಖಾತೆಯನ್ನು ಮೀಸಲಿಟ್ಟಿದಾಳೆ.
ಒಕ್ಲಹೋಮದ ಕ್ರಿಸ್ಟಿ ಲೊಯಾಲ್(25) ಕಳೆದ ವರ್ಷ ಅಪರೂಪದ ಕ್ಯಾನ್ಸರ್ ಗೆ ಬಲಿಯಾಗಿದ್ದಳು. ರೋಗ ಹರಡುವುದನ್ನು ತಡೆಯಲು ಅವಳ ಬಲ ಕಾಲನ್ನು ಕತ್ತರಿಸಲಾಯಿತು.
ಜೀವನದಲ್ಲಿ ಗಂಭೀರ ಪರಿಸ್ಥಿತಿಯನ್ನು ಅನುಭವಿಸಿ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ, ತನ್ನ ಸ್ನೇಹಿತ ಸೂಚನೆಯಂತೆ ಕ್ರಿಸ್ಟಿ ಒನ್ ಫುಟ್ ವಂಡರ್ ಎನ್ನುವ ತನ್ನ ಇನ್ಸ್ಟಾಗ್ರಾಮ್ ಫೋಟೊ ಸರಣಿಯನ್ನು ಆರಂಭಿಸಲು ನಿರ್ಧರಿಸಿದರು .
“ನಾನು ಜನರನ್ನು ನಗಿಸಲು ಬಯಸುತ್ತೇನೆ. ಕಠಿಣ ಪರಿಸ್ಥಿತಿಯಲ್ಲಿರುವ ಜನರಿಗೆ ವಿಶ್ವಾಸವನ್ನು ತುಂಬಲು ಬಯಸುತ್ತೇನೆ, ಜೀವನದಲ್ಲಿ ಭಯಾನಕ ಘಟನೆ ಏನಾದರೂ ಸಂಭವಿಸಿದರೆ ನಿಮ್ಮ ಜೀವನವು ಮುಗಿಯುವುದಿಲ್ಲ ಎಂದು ಅವರಿಗೆ ತೋರಿಸಿಕೊಡಲು ಇಚ್ಛಿಸುತ್ತೇನೆ” ಎಂದು ಕ್ರಿಸ್ಟಿ ಹೇಳುತ್ತಾರೆ.
ಶಸ್ತ್ರಚಿಕಿತ್ಸೆ ನಂತರ ಅವಳು ತನ್ನ ಕಾಲಿನ ಮೂಳೆಯನ್ನು ಪಡೆದು ಮತ್ತು ಅದನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ತಂತಿಯಲ್ಲಿ ಅದನ್ನು ಗಟ್ಟಿಗೊಳಿಸಿ ತನ್ನ ಒನ್ ಫುಟ್ ವಂಡರ್ ಅನ್ನು ಆರಂಭಿಸಿದಳು .
ಕ್ರಿಸ್ಟಿ ಮತ್ತು ಅವಳ ಪ್ರೀತಿಯ ಬಲ ಕಾಲಿನ ಮೂಳೆಯ ಚಿತ್ರಗಳನ್ನು ಕೆಲವು ಮೋಜಿನ ಶೀರ್ಷಿಕೆಗಳೊಂದಿಗೆ ಇನ್ಸ್ಟಾಗ್ರಾಮಲ್ಲಿ ದಾಖಲಿಸಲಾಗಿದೆ.




