ಕೋಲ್ಕತ್ತಾ:ತ್ರಿವಳಿ ತಲಾಕ್ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಇಶ್ರತ್ ಜಹಾನ್ ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಗೊಂಡಿರುವುದಾಗಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಯಾದ ಸಯಾಂತನ್ ಬಸು ರವರು ತಿಳಿಸಿದ್ದಾರೆ.
ಹೌರಾ ಬಿಜೆಪಿ ಶಾಖೆಯಲ್ಲಿ ಸೇರ್ಪಡೆಗೊಂಡ ಅವರನ್ನು ಸನ್ಮಾನಿಸಲಾಗಿದ್ದು ರಾಜ್ಯಮಟ್ಟದಲ್ಲಿ ಸನ್ಮಾನ ನಡೆಸಲು ತೀರ್ಮಾನಿಸಲಾಗಿದೆ ಎಂದು ಬಸು ಈ ಸಂದರ್ಭದಲ್ಲಿ ತಿಳಿಸಿದ್ದಾರೆ. ಈ ಸುದ್ದಿಯನ್ನು ಪಕ್ಷದ ಮೂಲಗಳಿಂದ ತಿಳಿದ ಪಶ್ಚಿಮ ಬಂಗಾಳ ಪ್ರವಾಸಗೈಯ್ಯುತ್ತಿರುವ ಬಿಜೆಪಿ ನಾಯಕ ದಿಲೀಪ್ ಘೋಷ್ ಇಶ್ರತ್ ರವರಿಗೆ ಫೋನಾಯಿಸಿದರಾದರೂ ಇಶ್ರತ್ ರವರಿಂದ ಯಾವುದೇ ಪ್ರತಿಕ್ರಿಯೆ ಲಭಿಸಿಲ್ಲ ಎಂದಿದ್ದಾರೆ.
ಇಶ್ರತ್ ಜಹಾನ್ ರವರಿಗೆ 2014 ರಂದು ಅವರ ಪತಿ ದುಬೈಯಿಂದ ದೂರವಾಣಿ ಕರೆಯ ಮೂಲಕ ತಲಾಕ್ ನೀಡಿದ್ದರು. ಇದನ್ನು ಪ್ರಶ್ನಿಸಿದ ಜಹಾನ್ ಸುಪ್ರೀಮ್ ಕೋರ್ಟ್ ಮೆಟ್ಟಿಲೇರಿದ್ದರು. ತ್ರಿವಳಿ ತಲಾಕ್ ವಿರುದ್ಧ ದೂರು ದಾಖಲಿಸಿದ ಐವರು ಮಹಿಳೆಯರಲ್ಲಿ ಇಶ್ರತ್ ಜಹಾನ್ ಕೂಡ ಒಬ್ಬರು.

Leave a Reply