ಬೆಂಗಳೂರು: ಇದೇ ಬರುವ ಜನವರಿ 27 ಶನಿವಾರದಂದು ಕರ್ನಾಟಕ ಬಂದ್ ಗೆ ಕನ್ನಡ ಪರ ಸಂಘಟನೆಗಳು ಕರೆ ನೀಡಿವೆ.

ಮಹದಾಯಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಜನವರಿ 27ರಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಕರ್ನಾಟಕ ಬಂದ್ ಕರೆ ನೀಡಲಾಗಿದೆ. ಜನವರಿ 28ರಂದು ಮೋದಿ ಆಗಮಿಸುತ್ತಿದ್ದಾರೆ. ಒಂದು ವೇಳೆ ಮಹದಾಯಿ ವಿಚಾರದಲ್ಲಿ ಅವರು ಭರವಸೆ ನೀಡಿದರೆ ಬಂದ್ ಹಿಂಪಡೆಯುವುದಾಗಿ
ಈ ಬಂದ್ ಗೆ ಎಲ್ಲಾ ಕನ್ನಡ ಪರ ಸಂಘಟನೆಗಳು ಬೆಂಬಲ ನೀಡಬೇಕು ಎಂದು ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತಾಡಿದ ವಾಟಾಲ್ ನಾಗರಾಜ್ ಮನವಿ ಮಾಡಿದ್ದಾರೆ.

ಈ ಹಿಂದೆ ಮಹಾದಾಯಿ ಹೋರಾಟ ತಾರಕ್ಕೇರಿತ್ತು. ಮತ್ತೆ ಈ ಹೋರಾಟ ಕಾವೇರುವ ಲಕ್ಷಣ ಕಂಡು ಬರುತ್ತಿದೆ.

Leave a Reply