ಕೇಪ್‌ಟೌನ್‌: ಇಲ್ಲಿ ನಡೆಯುತ್ತಿರುವ ಭಾರತ ಹಾಗು ದಕ್ಷಿಣ ಆಫ್ರಿಕಾ ನಡುವಣ ನಡೆಯುತ್ತಿರುವ ಪ್ರಥಮ ಟೆಸ್ಟ್ ಪಂದ್ಯಾಟದ ಎರಡನೆಯ ದಿನದ ಅಂತ್ಯಕ್ಕೆ ದಕ್ಷಿಣ ಆಫ್ರಿಕಾ ಎರಡು ವಿಕೆಟ್‌ಗಳನ್ನು ಕಳೆದುಕೊಂಡು 65 ರನ್‌ಗಳನ್ನು ಗಳಿಸಿದೆ.‌ ಇದರೊಂದಿಗೆ 142 ರನ್‌ಗಳ ಮುನ್ನಡೆಯನ್ನು ಸಾಧಿಸಿ ಮೂರನೇಯ ದಿನಕ್ಕೆ‌ ಬ್ಯಾಟಿಂಗ್ ಕಾಯ್ದಿರಿಸಿದೆ.

ಇದಕ್ಕೂ ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತ, ಅಜೆಯರಾಗಿ ಉಳಿದ ರೋಹಿತ್ ಶರ್ಮಾ ಅವರ ವಿಕೆಟನ್ನು ಬೇಗನೆ ಕಳೆದುಕೊಂಡಿತ್ತು. ನಂತರ ಬಂದ ಆಶ್ವಿನ್ ಪುಜಾರ ಜೊತೆ ಸ್ವಲ್ಪ ಹೊತ್ತು ಕ್ರೀಸಿನಲ್ಲಿ ನಿಲ್ಲಲು ಕ್ರಮಿಸಿದರು. ಆದರೆ ವೇಗಿ ಪಿಲಾಂಡರ್ ಅವಕಾಶ ನೀಡಲಿಲ್ಲ. ಇಬ್ಬರನ್ನು ಪೆವಿಲಿಯನ್‌ಗೆ ಕಳುಹಿಸಿವಲ್ಲಿ ಸಫಲರಾದರು.

ಏಳನೆಯ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಸ್ಪೋಟಕ ದಾಂಡಿಗ ಜೂನಿಯರ್ ಕಪೀಲ್ ದೇವ್ ಖ್ಯಾತಿಯ ಹಾರ್ದಿಕ್ ಪಾಂಡ್ಯ ಆಫ್ರಿಕಾನರ ದಾಳಿಯನ್ನು ದಂಡಿಸುತ್ತಾ ಹೋದರು. ಪಾಂಡ್ಯ ಬಿರುಸಿನ ಬ್ಯಾಟಿಂಗ್ ಮುಂದೆ ಆಫ್ರಿಕಾನ್ ದಾಳಿಗಾರರು ಒಮ್ಮೆಲೆ ಬೆವರಿದ್ದರು. ಕೇವಳ 94 ಎಸೆತಗಳನ್ನು ಎದುರಿಸಿದ ಅವರು 93 ರನ್ ಗಳಿಸಿ ಶತಕದ ಹೊಸ್ತಿಲಲ್ಲಿ ನಿಂತಿದ್ದರು. ‌ಈ ವೇಳೆಯಲ್ಲಿ ದಾಳಿಗಿಳಿದ ರಬಾದ ಪಾಂಡ್ಯ ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾದರು. ಪಾಂಡ್ಯ ಜೊತೆಗೂಡಿದ ಭುವನೇಶ್ವರ್‌ ಕುಮಾರ್ 25 ರನ್‌ಗಳ ಕೊಡುಗೆ ನೀಡಿದರು. ದಕ್ಷಿಣ ಆಫ್ರಿಕಾ ಪರ ರಬಾದ, ಪಿಲಾಂಡರ್ ತಲಾ ಮೂರು ವಿಕೆಟ್‌ಗಳನ್ನು ಪಡೆದು ಮಿಂಚಿದರು.

Leave a Reply