ಕಲಬುರಗಿ: ಎಮ್ಮೆಗಳ ಬಣ್ಣ ಯಾವುದು ಎಂಬುದು ಎಲ್ಲರಿಗೂ ತಿಳಿದಿದೆ. ಕಲಬುರಗಿಯ ಅಫಜಲಪುರ ತಾಲೂಕಿನ ಸಿರಸಗಿ ಗ್ರಾಮದಲ್ಲಿ ಎಮ್ಮೆಯೊಂದು ಬಿಳಿ ಎಮ್ಮೆಗೆ ಜನ್ಮ ನೀಡಿದೆ.

ಅಣ್ಣಾರಾವ್ ಪಾಟೀಲ್ ಎಂಬವರ ಮನೆಯಲ್ಲಿ ಬಿಳಿ ಎಮ್ಮೆ ಜನಿಸಿದ್ದು, ಸುತ್ತಮುತ್ತಲಿನ ಗ್ರಾಮದ ಜನರು ಆಶ್ಚರ್ಯವನ್ನು ನೋಡಲು ಅಣ್ಣಾರಾವ್ ಪಾಟೀಲ್ ಮನೆಗೆ ದಾಪುಗಾಲು ಹಾಕುತ್ತಿದ್ದಾರೆ.

ಇಂತಹ ಅಪರೂಪದ ಘಟನೆ ಒಂದಿಲ್ಲೊಂದು ನಡೆಯುತ್ತಲೇ ಇರುತ್ತದೆ. ಪ್ರಕೃತಿಯ ಅದ್ಭುತಗಳನ್ನು ಮಾತುಗಳಲ್ಲಿ ವರ್ಣಿಸಲು ಅಸಾಧ್ಯ. ಇಂತಹ ವಿಚಿತ್ರ ಸಂಭವಿಸಿದರೆ ಜನಸಾಮಾನ್ಯರಿಗೆ ಆಶ್ಚರ್ಯ ಆಗುವುದು ಸಹಜ. ಹಳ್ಳಿ ಪ್ರದೇಶಗಳಲ್ಲಿ ಈ ಬಗ್ಗೆ ಜನ ಏನೇನೆಲ್ಲಾ ಮಾತಾಡುತ್ತಾರೆ.

ಚಿತ್ರ ಕೃಪೆ: ಪಬ್ಲಿಕ್ ಟಿವಿ

Leave a Reply