ಕೊರಿಯಾಗ್ರಫರ್, ನಟ, ನಿರ್ದೆಶಕ ರಾಘವ ಲಾರೆನ್ಸ್ ರವರು ಸಮಾಜ ಸೇವೆಯ ಕೆಲಸವನ್ನು ಯಾರಿಗೂ ತಿಳಿಯದಂತೆ ಮಾಡುತ್ತಿದ್ದಾರೆ. ರಾಘವ ಲಾರೆನ್ಸ್ ಹೆಸರಿನ ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಿದ್ದು, ಈ ಸಂಸ್ಥೆ ಮೂಲಕ 200 ಕ್ಕೂ ಹೆಚ್ಚು ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡಿದ್ದಾರೆ. ಕೇವಲ ವಿದ್ಯಾರ್ಥಿಗಳಿಗೆ ಮಾತ್ರವಷ್ಟೇ ಅಲ್ಲ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ 150 ಕ್ಕೂ ಹೆಚ್ಚು ಜನರಿಗೆ ನೆರವಾಗಿದ್ದಾರೆ. 60 ಕ್ಕೂ ಹೆಚ್ಚು ಜನರನ್ನು ದತ್ತು ತೆಗೆದುಕೊಂಡಿದ್ದಾರೆ.

ಲಾರೆನ್ಸ್ ನೃತ್ಯ ಸಂಯೋಜಕರಾಗಿ ವೃತ್ತಿ ಆರಂಭಿಸಿದಾಗ ನಟ ಚಿರಂಜೀವಿ ಚಿತ್ರಗಳಿಗೆ ಹೆಚ್ಚು ಕೊರಿಯೋಗ್ರಫಿ ಮಾಡಿದ್ದಾರೆ. ಚಿರಂಜೀವಿ ಅಂದ್ರೆ ಲಾರೆನ್ಸ್ ಅವರಿಗೂ ಅಚ್ಚುಮೆಚ್ಚು. ಸಿನಿಮಾ ಕೆಲಸಗಳನ್ನ ಬಿಟ್ಟು ಸಾಮಾಜಿಕ ಕಾರ್ಯಕ್ರಮಗಳನ್ನ ಮಾಡುವ ಲಾರೆನ್ಸ್ ಬಗ್ಗೆ ಚಿರಂಜೀವಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಕಾಂಚನಾ-3’ ಸಿನಿಮಾದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಚಿರು ಮಾತನಾಡಿದ್ದಾರೆ. ಲಾರೆನ್ಸ್ ಅವರ ಈ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ನಟ ಚಿರಂಜೀವಿ, ಲಾರೆನ್ಸ್ ಚಾರಿಟಬಲ್ ಟ್ರಸ್ಟ್ ಗೆ 10 ಲಕ್ಷ ರೂ ಹಣ ಸಹಾಯ ಮಾಡಿದ್ದಾರೆ.

Leave a Reply