ಪಾಟ್ನ: ಜೆಎನ್‍ಯು ವಿದ್ಯಾರ್ಥಿ ಯೂನಿಯನ್ ಮಾಜಿ ಅಧ್ಯಕ್ಷ ಕನಯ್ಯಾ ಕುಮಾರ್ ಮುಂದಿನ ಲೋಕ ಸಭಾ ಚುನಾವಣೇಯಲ್ಲಿ ಬಿಹಾರದಿಂದ ಸ್ಪರ್ಧಿಸಲಿದ್ದಾರೆ. ಬಿಹಾರದ ಬೆಗುಸರಾಯ್ ಲೋಕಸಭಾ ಕ್ಷೇತ್ರದಿಂದ ಕನಯ್ಯ ಸ್ಪರ್ಧಿಸಲಿದ್ದು, ಇದಕ್ಕಾಗಿ ಎಡಪಕ್ಷಗಳ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂದು ವರದಿಯಾಗಿವೆ. ಸಿಪಿಐ ಟಿಕೆಟ್‍ನಲ್ಲಿ ಕನಯ್ಯಾ ಬೆಗುಸರಾಯ್‍ನಿಂದ ಸ್ಪರ್ಧಿಸುತ್ತಿದ್ದು ಅವರು ಬಿಹಾರದ ಬಿಹಾಡ್ ಪಂಚಾಯತ್ ನಿವಾಸಿಯಾಗಿದ್ದಾರೆ.

2016 ಫೆಬ್ರವರಿಯಲ್ಲಿಜೆಎನ್‍ಯು ವಿಶ್ವವಿದ್ಯಾನಿಲಯದಲ್ಲಿ ನಡೆದ ಭಾರತ ಕಾರ್ಯಕ್ರಮದಲ್ಲಿ ಭಾರತವಿರೋಧಿ ಘೋಷಣೆ ಕೂಗಿದ್ದಾರೆ ಎಂಬ ಆರೋಪದಡಿಯಲ್ಲಿ ಅವರನ್ನು ದಿಲ್ಲಿಪೊಲೀಸರು ಬಂಧಿಸಿದ್ದರು. ಆದರೆ ಕನಯ್ಯಾ ತನ್ನವಿರುದ್ಧವಿರುವ ಎಲ್ಲ ಆರೋಪಗಳನ್ನುನಂತರ ನಿರಾಕರಿಸಿದ್ದರು.

Leave a Reply