ಬೆಂಗಳೂರು: ಕೆ.ಎಸ್. ಅಶ್ವಥ್, ಸ್ಯಾಂಡಲ್‍ವುಡ್ ಖ್ಯಾತ ಹಿರಿಯ ನಟರ ಹೆಸರು ಕೇಳದವರಿಲ್ಲ. ಆದರೆ ಅವರ ಪುತ್ರ ಈಗ ಜೀವನ ನಿರ್ವಹಣೆಗಾಗಿ ಏನು ಮಾಡುತ್ತಿದ್ದಾರೆ ಎಂದು ಕೇಳಿದರೆ ನಿಮಗೆ ಆಶ್ಚರ್ಯ ಆಗಬಹುದು. ಹೌದು, ಜೀವನ ನಿರ್ವಹಣೆಗಾಗಿ ಕ್ಯಾಬ್ ಚಾಲಕರಾಗಿ ಕೆಲಸ ಮಾಡ್ತಿದ್ದಾರೆ ಅವರು…

ತನ್ನ ಅಭಿನಯದ ಮೂಲಕವೇ ಸಿನೆಮಾ ಕ್ಷೇತ್ರದಲ್ಲಿ ಅಪಾರ ಜನಮನ್ನಣೆ ಗಳಿಸಿದ ಕೆ.ಎಸ್ ಅಶ್ವಥ್ ಮಗನಾಗಿ ಎರಡೂವರೆ ದಶಕಗಳಿಂದ ಪುತ್ರ ಶಂಕರ್ ಅಶ್ವಥ್ ಬೆಳ್ಳಿತೆರೆ ಮತ್ತು ಕಿರುತೆರೆಗಳಲ್ಲಿ ಅಭಿನಯಿಸಿದ್ದರು. ನಂತರ ಸರಿಯಾದ ಅವಕಾಶ ಸಿಗದೆ ಅವರು ಊಬರ್ ಕ್ಯಾಬ್ ಚಾಲಕರಾಗಿ ದುಡಿಯುತ್ತಿದ್ದಾರೆ.

ಸ್ವಾಭಿಮಾನವಾಗಿ ಬದುಕಬೇಕು. ಈಗ ಅಭಿನಯದಲ್ಲಿ ಸಾಕಷ್ಟು ಅವಕಾಶ ಸಿಗದಿದ್ದುದರಿಂದ ಮನೆಯಲ್ಲಿ ಸುಮ್ಮನೆ ಕೂರುವುದು ಬೇಡ ಎಂದು ಈ ತೀರ್ಮಾನ ಕೈಗೊಂಡಿದ್ದಾರೆ. ಆದರೆ ಸಿನೆಮಾ ಅಭಿನಯ ಬಿಟ್ಟಿಲ್ಲ ಎಂದು ಅವರ ಪತ್ನಿ ಪಬ್ಲಿಕ್ ಟಿವಿಗೆ ಹೇಳಿದ್ದಾರೆ.

ಕೆ.ಎಸ್. ಅಶ್ವಥ್

Leave a Reply