ಕುಡಿಕಾಡು ದಲಿತರಿಗೆ ಹೊಸ ವರ್ಷದ ಆಚರಣೆ ದುಃಖ ನೋವಿನೊಂದಿಗೆ ಆರಂಭ ಆಗಿದೆ. ಮೇಲ್ವರ್ಗದ ಜಾತಿವಾದಿ ಹಿಂದೂಗಳ ಜನಸಮೂಹವು ಅವರನ್ನು ಆಕ್ರಮಣ ಮಾಡಿ, ಮನೆಗಳನ್ನು ಧ್ವಂಸಗೊಳಿಸಿ ಮೋಟಾರುಬೈಕನ್ನು ಹಾನಿಗೊಳಿಸಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.

ಸೋಮವಾರದಂದು ಹೋರಾಟಗಾರರು ಸೇರಿದಂತೆ ಬಾಧಿತ ದಲಿತರು ತಂಜಾವೂರು-ಪಟ್ಟುಕೊಟ್ಟೈ ರಸ್ತೆಯ ಸುಮಾರು ಎರಡು ಗಂಟೆಗಳ ಕಾಲ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

ಕುಡಿಕಾಡು, ಅಂಬಾಲ್ಪಟ್ಟು ದಕ್ಷಿಣ ಗ್ರಾಮದಲ್ಲಿ ನೆಲೆಸಿದೆ. ಭಾನುವಾರ ರಾತ್ರಿ, ದಲಿತರು ಹೊಸ ವರ್ಷವನ್ನು ದೀಪಗಳಿಂದ ಮತ್ತು ಧ್ವನಿ ವರ್ಧಕಗಳಿಂದ ಆಚರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಹೊಸ ವರ್ಷಾಚರಣೆ ಸಂಭ್ರಮ ವೇಳೆ ರಚಿಸಿದ್ದ ಕಮಾನುಗಳನ್ನು ನೆರೆಯ ಗ್ರಾಮದ ಜಾತಿವಾದಿ ಹಿಂದೂ ಯುವಕರು ವಿರೂಪಗೊಳಿಸಿದರು. ಈ ಘಟನೆಯ ಬಗ್ಗೆ ದಲಿತರು ಅವರ ಮಧ್ಯೆ ವಾಗ್ವಾದ ನಡೆಯಿತು. ನಂತರ ಜಾತಿವಾದಿ ಹಿಂದೂಗಳು ತಮ್ಮ ಸಮುದಾಯದ ಸದಸ್ಯರೊಂದಿಗೆ ಮರಳಿ ಆಚರಣೆಯಲ್ಲಿ ಬಳಸಿದ ಸೌಂಡ್ ಸಿಸ್ಟಮ್ ಮೂಲಕ ಪ್ರಚೋದಿಸಿದರು. ನಂತರ ದಲಿತರ ಮನೆಗಳ ಮೇಲೆ ಆಕ್ರಮಣ ಮಾಡಲು ಪ್ರಾರಂಭಿಸಿದರು. ಶಸ್ತ್ರಾಸ್ತ್ರಗಳನ್ನು ಕೂಡಾ ಒಂದು ವ್ಯಾನ್ನಲ್ಲಿ ತರಲಾಗಿತ್ತು ಎನ್ನಲಾಗಿದೆ.

ದಲಿತರು ಮನೆಯೊಳಗೆ ಚಿಲಕ ಹಾಕಿ ಭಯದಿಂದ ಕಳೆದಿದ್ದಾರೆ.

ಟಿ.ಶ್ರೀರಂಗನ್ (56), ಎಸ್. ರಾಜ್ ಕುಮಾರ್ (35) ಮತ್ತು ದಲಿತ ಸಮುದಾಯದ ಗುನಶೇಖರನ್ ಅವರ ವಿರುದ್ಧ ಸೆಣಸಿ ಗಾಯಗೊಂಡರು.

14 ದಲಿತರಿಗೆ ಸೇರಿದ ಮನೆಗಳ ಮುಂಭಾಗದ ಭಾಗಗಳನ್ನು ಹಾನಿಗೊಳಿಸಲಾಗಿದೆ. ಟಿವಿ, ಪೀಠೋಪಕರಣಗಳು ಸೇರಿದಂತೆ ಮನೆ ಸಾಮಗ್ರಿಗಳು ನಾಶಗೊಂಡವು.

ಆರು ಜಾತಿವಾದಿ ಹಿಂದೂಗಳನ್ನು ಬಂಧಿಸಲಾಗಿದೆ ಎಂದು ತನಿಖಾಧಿಕಾರಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್. ಕಣ್ಣನ್ ಎನ್ಐಐಗೆ ತಿಳಿಸಿದ್ದಾರೆ.

Leave a Reply