ಕೋಟ್ಟಯಂ: ಆರಂಭದಿಂದಲೂ ಜಲಂಧರ್ ಬಿಷಪ್ ಪರ ಮಾತಾಡುತ್ತಾ ಬಂದ ಕೇರಳದ ಶಾಸಕ ಪಿಸಿ ಜಾರ್ಜ್ ಹೊಸ ವರಸೆ ಪ್ರಯೋಗಿಸಿದ್ದಾರೆ. ಈಗ ಬಲಿಪಶುಯಾರು? ಜಲಂಧರ್ ಬಿಷಪ್ ಅಥವಾ ಕ್ರೈಸ್ತಸನ್ಯಾಸಿನಿಯೇ ಎಂದು ಅವರು ಪ್ರಶ್ನಿಸಿದ್ದು, ಇವರಲ್ಲಿ ಯಾರು ಬಲಿಪಶು ಎನ್ನುವ ಬಗ್ಗೆ ತನಗೆ ಸಂದೇಹವಿದೆ ಎಂದು ಅವರು ಹೇಳಿದರು. ಕ್ರೈಸ್ತ ಸನ್ಯಾಸಿನಿ ಪೊಲೀಸರಿಗೆ ದೂರು ನೀಡಿದ್ದಾರೆ. ಆಮೂಲಕ ಅವರು ಕ್ರೈಸ್ತ ಸಭೆಯನ್ನೇ ಅಪಮಾನಿಸಿದ್ದಾರೆ. ಈ ಅಶಿಸ್ತು ಸಹಿಸುವಂತಹದ್ದಲ್ಲ. ಕ್ರೈಸ್ತ ಸಭೆಯಿಂದ ದೂರವಾದವರು ಸನ್ಯಾಸಿನಯ ಜೊತೆಯಿದ್ದಾರೆ ಎಂದು ಶಾಸಕರು ಆರೋಪಿಸಿದರು.

ದೂರು ನೀಡಿದ ಮಹಿಳೆಯನ್ನು ಸನ್ಯಾಸಿನಿ ಎಂದು ಹೇಗೆ ಒಪ್ಪಿಕೊಳ್ಳುವುದು. ಕಾನೂನಾತ್ಮಕವಾಗಿ ಹೋರಾಡ ಬಹುದಿತ್ತು. ಆದರೆ ಮಾಧ್ಯಮಗಳ ನೆರವನ್ನು ಪಡೆದು ಅವರು ಸಭೆಯನ್ನು ಅಪಮಾನಿಸಿದರು. ಕ್ರೈಸ್ತ ಸಭೆಯನ್ನು ಅಪಮಾನಿಸಲು ಬಯಸುತ್ತಿರುವವರು ಇದಕ್ಕಾಗಿ ಕೋಟ್ಯಂತರ ಹಣವನ್ನು ಖರ್ಚು ಮಾಡುತ್ತಿದ್ದಾರೆ.ಸನ್ಯಾಸಿನಿ ಮಹಿಳಾ ಸುರಕ್ಷಾ ಕಾನೂನಿನ ಲಾಭವೆತ್ತಲು ಪ್ರಯತ್ನಿಸುತ್ತಿದ್ದಾರೆ ಎಂದು ಪಿ.ಸಿ. ಜಾರ್ಜ್ ಆರೋಪಿಸಿದರು.

ಸನ್ಯಾಸಿನಿಯ ಸಹೋದರರು ಮುಂತಾದವರ ಆದಾಯದ ಬಗ್ಗೆತನಿಖೆ ನಡೆಯಬೇಕು. ಮೂರುವರ್ಷದಲ್ಲಿ ಸನ್ಯಾಸಿನಿಯ ಸಹೋದರರು ಬಹಳ ಆಸ್ತಿ ಸಂಪಾದಿಸಿಕೊಂಡಿದ್ದಾರೆ. ಇದು ಹೇಗೆ ಸಾಧ್ಯವಾಯಿತು ಎನ್ನುವುದುತನಿಖೆಯಿಂದ ಬಹಿರಂಗವಾಗಲಿ ಎಂದು ಶಾಸಕ ಜಾರ್ಜ್ ಹೇಳಿದ್ದು ತನ್ನ ನಿಲುವಿನಲ್ಲಿ ಬದಲಾವಣೆಯಿಲ್ಲ. ಮಹಿಳಾ ಆಯೋಗದಿಂದ ಕೇಸು ಆದರೆ ಅದನ್ನು ಎದುರಿಸುವೆ ಎಂದು ಹೇಳಿದರು.

Leave a Reply