ಮಕ್ಕಳು ಬಾಯಿಗೆ ನಾಣ್ಯ ಹಾಕಿ ಆಟವಾಡುವುದು ಸಹಜವಾಗಿದೆ. ನಾಣ್ಯ ಸಿಕ್ಕಿದ ಕೂಡಲೇ ಪುಟ್ಟ ಮಕ್ಕಳು ಅದನ್ನು ಬಾಯಿಗೆ ಹಾಕಿ ಕೊಳ್ಳುತ್ತಾರೆ. ಆದರೆ ಕೆಲವೊಮ್ಮೆ ಅದನ್ನು ತಮಗರಿವಿಲ್ಲದಂತೆಯೇ ನುಂಗಿ ಬಿಡುತ್ತಾರೆ. ನುಂಗಿ ನಂತರ ಸ್ವಾಭಾವಿಕವಾಗಿ ಅದು ದೇಹದಿಂದ ಹೊರ ಬಂದರೆ ಚಿಂತಿಲ್ಲ. ಆದರೆ ಕೆಲವೊಮ್ಮೆ ಅದು ಗಂಟಲಿಗೆ ಸಿಕ್ಕಿ ಅಪಾಯ ತಂದೊಡ್ಡುತ್ತದೆ. ಅದನ್ನು ಸುಲಭವಾಗಿ ತೆಗೆಯಲು ಸಾಧ್ಯವೇ ಇಲ್ಲ.
ಆದರೆ ಇಲ್ಲೊಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಲೇಡಿ ಡಾಕ್ಟರ್ ಒಬ್ಬರು ನಾಣ್ಯ ನುಂಗಿದ ಪುಟ್ಟ ಮಗುವಿನ ಗಂಟಲಿಗೆ ಸಿಕ್ಕಿದ ನಾಣ್ಯವನ್ನು ಬಹಳ ಚಾಣಾಕ್ಷತನದೊಂದಿಗೆ ಹೊರತೆಗೆಯುವ ವಿಡಿಯೋ ಅದಾಗಿದೆ. ನೀವೂ ಆ ಡಾಕ್ಟರ್ ರವರ ತಂತ್ರವನ್ನು ನೋಡಿ..ಆದರೆ ಮನೆಯಲ್ಲಿ ಅದನ್ನು ಪ್ರಯೋಗಿಸಬೇಡಿ. ಯಾಕೆಂದರೆ ಸಣ್ಣ ನಿರ್ಲಕ್ಷ್ಯವೂ ದೊಡ್ಡ ಮಟ್ಟದ ಅಪಾಯ ತಂದೊಡ್ಡುತ್ತದೆ ಮತ್ತು ಕೆಲವೊಮ್ಮೆ ಜೀವಕ್ಕೆ ಅಪಾಯವಾಗುವ ಸಂಭವವಿದೆ.

Leave a Reply