ಬೆಂಗಳೂರು: ಸಾಲವನ್ನು ಮರಳಿ ಕೇಳಿದ್ದಕ್ಕಾಗಿ ಮಹಿಳೆಯೋರ್ವರು ಆಕೆಯ ಸ್ನೇಹಿತನಿಂದಲೇ ಕೊಲೆಯಾದ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

ಮಹಿಳೆಯ ಶವ ಕೊಳೆತ ಸ್ಥಿತಿಯಲ್ಲಿ ಕಂಡು ಬಂದಿದ್ದು, ಈ ಸಂಬಂಧಿ ಆರೋಪಿ ಗೋಪಿನಾಥ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅವರು ತಾರಾ ಎನ್ನುವ ಕೊಲೆಯಾದ ಮಹಿಳೆಯ ಕುಟುಂಬಕ್ಕೆ ಬಹಳ ಹತ್ತಿರವಾಗಿದ್ದರು ಎನ್ನಲಾಗಿದೆ.

ಈ ಘಟನೆ ಕರ್ಮರ್ಶಿಯಲ್ ಸ್ಟ್ರೀಟ್ ಬಳಿ ನಡೆದಿದ್ದು, ಆರೋಪಿ ಗೋಪಿನಾಥ್ ಎಚ್ಎಎಲ್ ಗುತ್ತಿಗೆ ಕಾರ್ಮಿಕ ತಾರಾರೊಂದಿಗೆ 11 ಲಕ್ಷ ಸಾಲ ತೆಗೆದು ಆಟ ಆಡಿಸುತ್ತಿದ್ದ. ಈ ಬಗ್ಗೆ ಇವರಿಬ್ಬರ ಮಧ್ಯೆ ಹಲವು ಬಾರಿ ಜಗಳ ಆಗಿತ್ತು.

Leave a Reply