ಚೀನಾದಲ್ಲಿ ವ್ಯಕ್ತಿಯೊಬ್ಬರು ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಪುಟ್ಟ ಮಗುವನ್ನ ಮಹಡಿಯಿಂದ ಬೀಳುದನ್ನು ರಕ್ಷಿಸಿದ ಘಟನೆ ಚೀನಾದಲ್ಲಿ ನಡೆದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಚೀನಾದ ಝೀಜಿಯಾಂಗ್ ಪ್ರಾಂತ್ಯದ ಹಾಂಗ್ಝೂನಲ್ಲಿ ಈ ಘಟನೆ ನಡೆದಿದೆ.ವಿಡಿಯೋದಲ್ಲಿ ಕಾಣುವಂತೆ, ಮಗು ನಾಲ್ಕನೇ ಮಹಡಿಯಲ್ಲಿದ್ದ ತನ್ನ ಮನೆಯ ಕಿಟಕಿಯಿಂದ ಕೆಳಗೆ ಬಿದ್ದಿದ್ದು, ಮೂರನೇ ಮಹಡಿಯ ಛಾವಣಿಯಂತ ಮೇಲ್ಕಟ್ಟಿನ ಮೇಲೆ ಸಿಲುಕಿದ.
ಆದರೆ ಮಗು ಕೆಳಗೆ ಬೀಳುವುದರಲ್ಲಿ ಇತ್ತು. ಮಗು ಸಂಪೂರ್ಣ ಹೆದರಿತ್ತು. ಆದರೆ ಸ್ಥಳೀಯ ವ್ಯಕ್ತಿಯೋರ್ವರು ಸಮಯಕ್ಕೆ ಸರಿಯಾಗಿ ಬಂದು ಸಾಹಸ ತೋರಿದ್ದಾರೆ. ಇದರಿಂದ ಮಗುವಿನ ಜೀವ ಉಳಿದಿದೆ. ಸಾಮಾಜಿಕ ಈ ಜೀವ ರಕ್ಷಕನಿಗೆ ಪ್ರಶಂಸೆ ಸಿಕ್ಕಿದೆ. ಹೌದು ತನ್ನ ಪ್ರಾಣವನ್ನು ಪಣಕ್ಕಿಟ್ಟು ಮಗುವನ್ನು ರಕ್ಷಿಸುವ ವಿಡಿಯೋ ನೋಡುವಾಗಲೇ ಮೈ ಜುಮ್ಮೆನ್ನುತ್ತದೆ. ಅಂಥದ್ದರಲ್ಲಿ ಮೂರನೇ ಮಹಡಿಯಿಂದ ಕೈ ಹಾಕಿ ಮಗುವನ್ನು ರಕ್ಷಿಸಲು ಆ ವ್ಯಕ್ತಿಗೆ ಧೈರ್ಯ ಬೇಡ! ಈ ವಿಡಿಯೋ ಕಳೆದ ವರ್ಷದದ್ದಾದರೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಾ ಇರುತ್ತದೆ.

Leave a Reply