ಮುಹಮ್ಮದ್ ಸದೀದ್

ಮೊಲ ಮತ್ತು ಆಮೆಯ ಕಥೆಯನ್ನು ನೀವೆಲ್ಲಾ ಕೇಳಿರಬಹುದು. ಇದರಲ್ಲಿ ಆಮೆಯು ತನ್ನ ನಿಧಾನ ನಡಿಗೆಯ ಹೊರ ತಾಗಿಯೂ ಸ್ಪರ್ಧೆಯಲ್ಲಿ ಗೆಲ್ಲುತ್ತದೆ. ಆದರೆ ವಾಸ್ತವಿಕತೆಯೆಂದರೆ ಇದು ಕೇವಲ ಕಥೆ ಯಾಗಿದೆ. ಮೊಲವು ವಾಹನಕ್ಕಿಂತಲೂ ವೇಗ ವಾಗಿ ಓಡಬಲ್ಲದು. ಮೊಲವನ್ನು ನೋಡಿ ದರೆ ಎಲ್ಲರೂ ಇಷ್ಟಪಡುತ್ತಾರೆ. ಅದರ ಮೃದು ವಾದ ಮತ್ತು ಮೈ ತುಂಬಿರುವ ರೋಮವು ಆ ಪ್ರಾಣಿಗೆ ಮುದ್ದುತನವನ್ನು ನೀಡಿದೆ. ಹಿಂದಿ ಭಾಷೆಯಲ್ಲಿ ಮೊಲಕ್ಕೆ `ಖರ್‍ಗೋಶ್’ ಎನ್ನಲಾಗುತ್ತದೆ. ಖರ್ ಎಂದರೆ `ಕತ್ತೆ’ ಗೋಸ್ ಎಂದರೆ `ಕಿವಿ’ ಕತ್ತೆಯಂತಹ ಕಿವಿ ಯನ್ನು ಹೊಂದಿರುವ ಪ್ರಾಣಿ. ಇದು ಫಾರ್ಸಿ ಭಾಷೆಯ ಪದವಾಗಿದೆ.

ಮೊಲ ಬಹಳ ಸಾಧು ಪ್ರಾಣಿ. ಇದು 30ರಿಂದ 50 ಸೆಂಟಿ ವಿೂಟರ್‍ನಷ್ಟು ಉದ್ದ ವಾಗಿರುತ್ತದೆ. ತರಕಾರಿ ಮತ್ತು ಹಣ್ಣುಗಳನ್ನು ಇಷ್ಟಪಟ್ಟು ತಿನ್ನುತ್ತವೆ. ಆಹಾರವನ್ನು ಹಲ್ಲಿ ನಿಂದ ಕಚ್ಚಿ ತಿನ್ನುತ್ತವೆ. ಇದರ ಹಲ್ಲುಗಳು ಕುಕ್ಕಿ ತಿನ್ನಲು ಉಪಯುಕ್ತವಾಗಿವೆ. ಬಹಳ ಚೂಪಾಗಿವೆ. ಇದರ ಮೇಲ್ದವಡೆಯಲ್ಲಿ ಎರಡು ಸಾಲಿನಲ್ಲಿ ನಾಲ್ಕು ಚೂಪು ಹಲ್ಲು ಗಳಿವೆ. ಹಿಂದಿನ ಹಲ್ಲುಗಳು ಕಚ್ಚಿ ತಿನ್ನಲು ಸಹಕರಿಸುತ್ತವೆ. ಕೆಲವು ವಿಜ್ಞಾನಿಗಳ ಪ್ರಕಾರ ಒಂದು ವಿಶಿಷ್ಟ ಜಾತಿಯ ಪ್ರಾಣಿ ಎನಿಸಿ ಕೊಂಡಿದೆ. ಇದರ ಹಿಂಗಾಲುಗಳು ಮುಂದಿನ ಕಾಲುಗಳಿಗಿಂತ ಉದ್ದವಾಗಿಯೂ ಬಲಿಷ್ಠವಾಗಿಯೂ ಇದೆ. ಇದರ ಸಹಾಯ ದಿಂದ ಅದು ಬಹಳ ದೂರಕ್ಕೆ ನೆಗೆಯ ಬಲ್ಲದು. ಆದರೂ ಅದು ಬಹಳ ದೂರದ ತನಕ ಓಡುವುದು ಸಾಧ್ಯವಿಲ್ಲ. ಇತರ ಜೀವಿಗಳಂತೆ ಓಡಾಡುವುದು ಸಾಧ್ಯವಿಲ್ಲದ ಕಾರಣ ಮೊಲವು ಕುಪ್ಪಳಿಸುತ್ತಾ ಮುಂದಕ್ಕೆ ಹೋಗುತ್ತದೆ. ದೊಡ್ಡ ದೊಡ್ಡ ನೆಗೆತಗಳನ್ನು ಮಾಡುತ್ತಾ ಓಡುವಾಗ ಜಿಂಕೆ ಮತ್ತು ಕುದುರೆ ಗಿಂತಲೂ ವೇಗವಾಗಿ ತಲುಪುತ್ತದೆ.

ಇದು ಗಂಟೆಗೆ 65 ಕಿಲೋ ಮೀಟರ್ ದೂರ ಓಡ ಬಲ್ಲದು. ತಮ್ಮ ಕೈಗಳಿಂದ ಮೃದುವಾದ ನೆಲದಲ್ಲಿ ಬಿಲಗಳನ್ನು ತೋಡಿ ಅದರೊಳಗೆ ವಾಸಿಸುತ್ತದೆ. ಕೆಲವು ಸಂದರ್ಭಗಳಲ್ಲಿ ಹುಲ್ಲು ಕಣ್ಣಗಳ ಮಧ್ಯೆ ಸ್ಥಳವನ್ನು ಮಾಡಿಕೊಂಡು ಅಲ್ಲಿಯೇ ಅಡಗಿ ಕುಳಿತುಕೊಳ್ಳುತ್ತದೆ. ಇದು ಬಿಳಿ ಮತ್ತು ಬೂದಿ ಬಣ್ಣದಲ್ಲಿರುತ್ತದೆ. ಕಪ್ಪು ಬಣ್ಣದ ಮೊಲಗಳು ಕೃಷಿ ಭೂಮಿಯಲ್ಲಿ ಅಡಗಿಕೊಂಡಿರುತ್ತದೆ. ಇದರ ಇರುವಿಕೆಯು ಸಾಮಾನ್ಯವಾಗಿ ಯಾರ ಗಮನಕ್ಕೂ ಬರುವು ದಿಲ್ಲ. ಈ ರೀತಿ ಕಂದು, ಬೂದು, ಬಿಳಿ ಮತ್ತು ಕಪ್ಪುಬಣ್ಣಗಳ ಮೊಲಗಳು ಕಾಣಸಿಗು ತ್ತವೆ. ಅದರ ಬಣ್ಣವೂ ಶತ್ರುಗಳಿಂದ ರಕ್ಷಿಸಿ ಕೊಳ್ಳಲು ಮೊಲಗಳಿಗೆ ಸಹಾಯ ಮಾಡು ತ್ತದೆ. ಮೊಲಗಳು ಸದಾ ಎಚ್ಚರ ದಿಂದಿರುವಂತೆ ಕಂಡು ಬಂದರೂ ಬಹಳ ಹೆದರು ಪುಕ್ಕಲು ಪ್ರಾಣಿ. ದೂರದ ಶಬ್ದ ಗಳನ್ನು ಗ್ರಹಿಸಲು ತನ್ನ ಕಿವಿಗಳನ್ನು ಸದಾ ಅತ್ತಿಂದಿತ್ತ ಆಡಿಸುತ್ತಿರುತ್ತದೆ.

ಯಾವುದೇ ಕಷ್ಟವಿಲ್ಲದೆ 200 ವಿೂಟರ್ ದೂರದ ಶಬ್ದವನ್ನು ಕೂಡಾ ಮೊಲಗಳು ಗ್ರಹಿಸಬಲ್ಲವು ಎಂದು ವಿಜ್ಞಾನಿಗಳು ಅಭಿ ಪ್ರಾಯ ಪಡುತ್ತಾರೆ. ಸುಗಂಧವನ್ನೂ ಗ್ರಹಿಸು ತ್ತದೆ ಮತ್ತು ಓಡಲು ಸಿದ್ಧವಾಗಿ ನಿಲ್ಲುತ್ತದೆ.

ಹೆಣ್ಣು ಮೊಲವು ವರ್ಷಂಪ್ರತಿ ಅನೇಕ ಬಾರಿ ಮರಿಗಳನ್ನು ಹಾಕುತ್ತವೆ. ಒಂದೊಂದು ವೇಳೆ ಹನ್ನೆರಡು ಮರಿಗಳನ್ನು ಹಾಕುವುದೂ ಇದೆ. ಜನಿಸುವ ವೇಳೆ ಮರಿಯ ಕಣ್ಣುಗಳು ತೆರೆದಿರುತ್ತವೆ. ಅದರ ಕಿವಿಗಳನ್ನು ಹಿಡಿದು ನಾವು ಮಡಿಲಲ್ಲಿ ಕುಳ್ಳಿರಿಸಬಹುದಾಗಿದೆ. ಮೊಲವು ಮೂರರಿಂದ ನಾಲ್ಕು ಕಿಲೋ ಗ್ರಾಮ್ ತೂಗುತ್ತದೆ. ಕಾಡು ಮೊಲಗಳು ಬಿಲಗಳನ್ನು ಕೊರೆದು ಅವುಗಳೊಳಗೆ ವಾಸಿಸುತ್ತವೆ.

ಸಾಧಾರಣವಾಗಿ ಮೊಲಗಳು ಅಲ್ಪ ಆಹಾರ ಸೇವಿಸುತ್ತವೆ. ಆದರೆ ಕೃಷಿ ಭೂಮಿಗೆ ಬಹಳ ನಷ್ಟವನ್ನುಂಟು ಮಾಡುತ್ತವೆ. ಇದು ಚೆನ್ನಾಗಿ ಈಜಾಡಬಲ್ಲ ಪ್ರಾಣಿ. ಶತ್ರುಗಳಿಂದ ತಪ್ಪಿಸಿಕೊಳ್ಳಲು ನೀರಿನಲ್ಲಿ ಧುಮುಕಿ ಅಡಗಿ ಕೊಳ್ಳುತ್ತವೆ. ಆಗ ಅದರ ಮೂಗನ್ನು ನೀರಿ ನಿಂದ ಹೊರಕ್ಕೆ ತರುತ್ತದೆ. ಅಸ್ಸಾಮ್ ಮತ್ತು ಹಿಮಾಲಯದ ಪರ್ವತಗಳಲ್ಲಿ ಕಾಣಸಿಗುವ ಮೊಲಗಳು ಸಾಮಾನ್ಯವಾಗಿ ಕಪ್ಪು ಬಣ್ಣದ್ದಾಗಿರುತ್ತವೆ. ಮೊಲದ ಮಾಂಸ ಬಹಳ ಸ್ವಾದಿಷ್ಟ ವಾಗಿರುತ್ತದೆ. ಈ ಕಾರಣದಿಂದಲೇ ಸಿಂಹ, ನಾಯಿ, ತೋಳ, ನರಿ, ಬೆಕ್ಕು ಮುಂತಾದ ಪ್ರಾಣಿಗಳು ಮೊಲದ ಬೇಟೆಗಾಗಿ ಬಹಳ ಕಾಯುತ್ತದೆ. ಇದರ ಮೃದುವಾದ ಚರ್ಮದಿಂದ ಬೆಲೆಬಾಳುವ ಟೋಪಿ, ಪರ್ಸ್, ಕೈಚೀಲಗಳನ್ನು ತಯಾರಿಸಲಾಗು ತ್ತದೆ. ನಾವು ಮೊಲಗಳನ್ನು ಸಂರಕ್ಷಿಸಬೇಕಾ ಗಿದೆ. ಇಂದು ಜಗತ್ತಿನ ಹಲವೆಡೆ ಮತ್ತು ಭಾರತದ ಅನೇಕ ಭಾಗಗಳಲ್ಲಿ ಮೊಲಗಳನ್ನು ಕಾಣಬಹುದಾಗಿದೆ.

Leave a Reply