ಮಧ್ಯಪ್ರದೇಶ: ಕೇಪ್‌ಟೌನ್‌‌ನಲ್ಲಿ ನಡೆಯುತ್ತಿರುವ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ನಡೆಯುತ್ತಿರುವ ಪ್ರಥಮ ಟೆಸ್ಟ್ ಪಂದ್ಯಾಟದ, ಪ್ರಥಮ ಇನ್ನಿಂಗ್ಸ್‌ನಲ್ಲಿ ಭಾರತ ನಾಯಕ ಕಪ್ತಾನ ವಿರಾಟ್ ಕೋಹ್ಲಿ ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿದ್ದಕ್ಕೆ 63 ವರ್ಷದ ಪ್ರಾಯದ ಕಟ್ಟಾ ಅಭಿಮಾನಿಯೊರ್ವ ಮೈಮೇಲೆ ಪೆಟ್ರೋಲ್ ಸುರಿದು ಆತ್ಮಹತ್ಯೆ ಯತ್ನ ನಡೆಸಿದ ಘಟನೆ ಮಧ್ಯಪ್ರದೇಶದ ರತ್ನಪುರಿಯಲ್ಲಿ ನಡೆದಿದೆ.

ಆತ್ಮಹತ್ಯೆ ಯತ್ನ ನಡೆಸಿದ ವ್ಯಕ್ತಿಯ ಹೆಸರು ಬಾಬುಲಾಲ್ ಬೈರ್ವ ಎಂದು ಗುರುತಿಸಲಾಗಿದೆ.‌ ಮೈಗೆ ಬೆಂಕಿ ಹಚ್ಚಿಕೊಂಡಿದ್ದನ್ನು ಗಮನಿಸಿ ಪತ್ನಿ ಬೊಬ್ಬೆ ಹೊಡೆದಾಗ ನೆರೆಹೊರೆಯವರು ಧಾವಿಸಿ ಬಂದು ಅವರನ್ನು ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

Leave a Reply