ಚಂಡೀಗಢದ ಟ್ರಾಫಿಕ್ ಪೊಲೀಸ್ ಅಧಿಕಾರಿಯ ವಿಡಿಯೋ ತುಂಬಾ ವೈರಲ್ ಆಗಿದೆ. ಪ್ರಿಯಾಂಕಾ ಹೆಸರಿನ ಟ್ರಾಫಿಕ್ ಪೊಲೀಸ್ ಅಧಿಕಾರಿಯು ತನ್ನ ಮಗುವನ್ನು ಹಿಡಿದು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಈ ವಿಡಿಯೋ ವೈರಲ್ ಆದ ಬಳಿಕ ಹಲವಾರು ಮಂದಿ ಸೋಶಿಯಲ್ ಮಾಧ್ಯಮದಲ್ಲಿ ಪ್ರಶ್ನೆಗಳನ್ನು ಎತ್ತಿದ್ದಾರೆ. ಇಂಡಿಯನ್ ಎಕ್ಸ್‌ಪ್ರೆಸ್ ಸುದ್ದಿಯ ಪ್ರಕಾರ ಪ್ರಿಯಾಂಕಾ ಕರ್ತವ್ಯಕ್ಕೆ ತಡವಾಗಿ ಬಂದಿದ್ದು, ಪ್ರಿಯಾಂಕಾ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ ಎಂದು ವರದಿಯಾಗಿದೆ.

ಟ್ರಾಫಿಕ್ ಆಫೀಸರ್ ಪ್ರಿಯಾಂಕಾ ಅವರು ಬೆಳಿಗ್ಗೆ 8 ಗಂಟೆಗೆ ಕರ್ತವ್ಯಕ್ಕೆ ಹಾಜರಾಗಬೇಕಿತ್ತು. ಆದರೆ ಅವರು ಅಲ್ಲಿ ಕಂಡುಬಂದಿಲ್ಲ. ಕರ್ತವ್ಯಕ್ಕೆ ಹಾಜರಾಗದ ಕಾರಣ ಅವರನ್ನು ಖಂಡಿಸಲಾಯಿತು ಮತ್ತು ಕರ್ತವ್ಯಕ್ಕೆ ಹೋಗಲು ಹೇಳಲಾಗಿತ್ತು. ಬಳಿಕ ಅವರು ತಮ್ಮ ಮಗುವಿನೊಂದಿಗೆ ಕರ್ತವ್ಯಕ್ಕೆ ಹೋದರು ಎಂದು ಹೇಳಿದರು. ಈ ಕ್ರಮದ ನಂತರ ಪ್ರಿಯಾಂಕಾ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

3 ಗಂಟೆ ತಡವಾಗಿ ಕರ್ತವ್ಯಕ್ಕೆ ಹಾಜರಾದುದ್ದಕ್ಕೆ ಹಿರಿಯ ಅಧಿಕಾರಿಗಳು ಪ್ರಿಯಾಂಕ ಮೇಲೆ ಕೋಪಗೊಡಿದ್ದಕ್ಕೆ ಪ್ರಿಯಾಂಕಾ ಅಸಮಾಧಾನಗೊಂಡಿದ್ದಾರೆ ಎಂದು ಇಲಾಖೆಯ ಕೆಲವು ಮೂಲಗಳು ತಿಳಿಸಿದೆ ಎಂದು ಇಂಡಿಯಾ ಟುಡೇ ಉಲ್ಲೇಖಿಸಿವೆ. ಕರ್ತವ್ಯ ನಿರ್ವಹಿಸುವಾಗ ಪ್ರಿಯಾಂಕಾ ತನ್ನ ಮಗುವನ್ನು ಕಂಕುಳದಲ್ಲಿ ಕೂರಿಸಿರುವ ವಿಡಿಯೋವನ್ನು ಸ್ಥಳೀಯ ವ್ಯಕ್ತಿಯೊಬ್ಬರು ತೆಗೆದುಕೊಂಡಿದ್ದಾರೆ. ಈ ವಿಡಿಯೋದಲ್ಲಿ ಪ್ರಿಯಾಂಕಾ ಅವರೊಂದಿಗೆ ಮತ್ತೊಬ್ಬ ಮಹಿಳಾ ಸಂಚಾರ ಪೊಲೀಸ್ ಸಹ ಕಾಣಿಸಿಕೊಂಡಿದ್ದಾರೆ. ಈ ವೀಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ಹೋದ ಕೂಡಲೇ ವೈರಲ್ ಆಗಿವೆ.

ಮಗು ತುಂಬಾ ಚಿಕ್ಕವನಾಗಿದ್ದು ಅವನನ್ನು ಬಿಟ್ಟು ಬರಲು ಸಾಧ್ಯವಾಗುತ್ತಿಲ್ಲ. ಕೆಲವೊಮ್ಮೆ ಮಗು ಅತ್ತರೆ ಗಂಡ ಅಥವಾ ಕುಟುಂಬ ಸದಸ್ಯರು ಕರ್ತವ್ಯದಲ್ಲಿರುವ ಸ್ಥಳಕ್ಕೆ ಕರೆತರುತ್ತಾರೆ. ಅವಳು ಮಗುವನ್ನು ಸ್ವಲ್ಪ ಹೊತ್ತು ಮೌನಗೊಳಿಸಿ ನಂತರ ಮನೆಗೆ ಕಳುಹಿಸುತ್ತಾಳೆ. ನಂತರ ರಜೆ ತೆಗೆದುಕೊಳ್ಳುವಂತೆ ಪ್ರಿಯಾಂಕಾ ಹಿರಿಯರು ಕೇಳಿಕೊಂಡಿದ್ದಾರೆ. ಅವರಿಗೆ ಕೆಲಸ ಮಾಡಲು ಏನಾದರೂ ತೊಂದರೆ ಇದ್ದರೆ ರಜೆ ತೆಗೆದುಕೊಳ್ಳುವಂತೆ ಕೇಳಲಾಯಿತು, ಆದರೆ ಪ್ರಿಯಾಂಕಾ ನೇರವಾಗಿ ತನ್ನ ಮಗುವಿನೊಂದಿಗೆ ಕರ್ತವ್ಯಕ್ಕೆ ಹೋದರು.

Leave a Reply