ಕೊಚ್ಚಿ: ಅತ್ಯಾಚಾರ ಆರೋಪಿ ಜಲಂಧರ್ ಬಿಷಪ್ ವಿರುದ್ಧ ಕ್ರೈಸ್ತ ಸನ್ಯಾಸಿಯರು ಬೀದಿಗಿಳಿದಿದ್ದು ಅಚ್ಚರಿ ಸೃಷ್ಟಿಸಿದೆ .ಅವರ ನ್ಯಾಯಯುತ ಹೋರಾಟವನ್ನು ಮಹಿಳಾ ಕಾಂಗ್ರೆಸ್ ಬೆಂಬಲಿಸುತ್ತದೆ ಎಂದು ಕೇರಳದ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲತಿಕಾ ಸುಭಾಶ್ ಹೇಳಿದರು. ಇದು ಕ್ರೈಸ್ತ ಸಭೆಗೆ ಅವಮಾನ ತರುವಂತಹ ಘಟನೆಯೆಂದೂ ಅವರು ಹೇಳಿದರು.

ನ್ಯಾಯಕ್ಕಾಗಿರುವ ಹೋರಾಟದಲ್ಲಿ ಸನ್ಯಾಸಿನಿಯರ ಜೊತೆ ಮಹಿಳಾ ಕಾಂಗ್ರೆಸ್ ಇದ್ದು ಎಲ್ಲ ರೀತಿಯ ಬೆಂಬಲವನ್ನು ನೀಡುತ್ತದೆ. ಜಲಂಧರ್ ಬಿಷಪ್‍ರ ಬಂಧನ ತಡವಾಗುತ್ತಿರುವುದು ಸಂದೇಹಗಳನ್ನು ಸೃಷ್ಟಿಸಿದೆ. ಸರಕಾರ ಮತ್ತು ಕ್ರೈಸ್ತ ಸಭೆ ಇವರಿಗೆ ನ್ಯಾಯ ಒದಗಿಸಿ ಕೊಡಬೇಕು ಎಂದು ಲತಿಕಾ ಹೇಳಿದರು.

Leave a Reply