53 ವರ್ಷದ ಮದನ್ ಗೋಪಾಲ್ ಮೆನೇರಿಯಾ ಸಮಾಜದ ಮುಂದಿರುವ ಜೀವಂತ ಸ್ಪೂರ್ತಿದಾಯಕ ವ್ಯಕ್ತಿತ್ವ. ಯಾಕೆಂದರೆ 1980 ರಲ್ಲಿ ಟೈಫಾಯಿಡ್ ನಿಂದ ಅವರು ದೃಷ್ಟಿ ಕಳಕೊಂಡರು. ಆಗ ಅವರು 9 ನೇ ತರಗತಿಯಲ್ಲಿ ಕಲಿಯುತ್ತಿದ್ದರು. ಉದಯಪುರದ ಖಾರ್ಸನ್ ವಲ್ಲಭನಗರ ನಿವಾಸಿಯಾಗಿರುವ ಅವರು ಕಣ್ಣು ಕಳಕೊಂಡರೂ ತನ್ನ ಜೀವನವನ್ನು ಜಗತ್ತನ್ನು ಬೆಳಗಿಸುವ ಕಾಯಕದಲ್ಲಿ ತೊಡಗಿಸಿಕೊಂಡರು.

ದೈನಿಕ್ ಭಾಸ್ಕರ್ ಅವರ ವರದಿಯ ಪ್ರಕಾರ, ದೃಷ್ಟಿ ಕಳಕೊಂಡ ಬಳಿಕ ಅವರಿಗೆ ಕಲಿಕೆ ಮುಂದುವರೆಸಲು ಅಸಾಧ್ಯವಾಯಿತು. ಮುಂದಿನ ಜೀವನ ಅವರದ್ದು ಸವಾಲಿನದ್ದು. ತನ್ನ ಓದುವ ಆಸೆ ಈಡೇರಿಸಲಾಗಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಅವರು ಕಲಿಯಲು ಮನಸ್ಸಿದ್ದು, ಆರ್ಥಿಕ ಪರಿಸ್ಥಿತಿಗಳಿಂದಾಗಿ ಕಲಿಕೆ ಮುಂದುವರೆಸಲು ಸಾಧ್ಯವಾಗದಂತಹ ವಿದ್ಯಾರ್ಥಿಗಳಿಗೆ ಸಹಾಯ ಮಾಡಬೇಕೆಂದು ನಿರ್ಧರಿಸಿದರು.

ಬಳಿಕ ಅವರು ಭಿಕ್ಷೆ ಬೇಡಲು ತೊಡಗಿದರು. ದೇವಾಲಯಗಳಿಂದ ಸಂಗ್ರಹಿಸಿದ ಹಣ, ಭಿಕ್ಷೆಯಲ್ಲಿ ಪಡೆದ ಹಣ ಮತ್ತು ತನ್ನ ಬಳಿ ಇರುವ ಯಾವುದೇ ಹಣದಿಂದ ಅವರು ಶಾಲೆಗಳಿಗೆ ಸಹಾಯ ಮಾಡಲು ಪ್ರಾರಂಭಿಸಿದರು. ಅವರು ಅನೇಕ ಸರ್ಕಾರಿ ಶಾಲೆಗಳಲ್ಲಿ ಕೊಠಡಿಗಳು, ಬ್ಲ್ಯಾಕ್‌ಬೋರ್ಡ್‌ಗಳು, ವಾಟರ್ ಟ್ಯಾಂಕ್‌ಗಳಂತಹ ವಸ್ತುಗಳನ್ನು ನೀಡಲು ಸಹಾಯ ಮಾಡಿದ್ದಾರೆ. ಈಗಾಗಲೇ ಅವರು 10 ಲಕ್ಷ ರೂ.ಗಳ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ.

ಅವರ ಈ ಸಮಾಜಸೇವಾ ಕಾರ್ಯಕ್ಕೆ ಅವರಿಗೆ 5 ಬಾರಿ ಪ್ರಶಸ್ತಿ ನೀಡಲಾಗಿದೆ. 2003-4ರಲ್ಲಿ ಅವರನ್ನು ಅಂದಿನ ಗುಜರಾತ್ ನೌಕಾಪಡೆಯ ಕಿಶೋರ್ ಶರ್ಮಾ ಗೌರವಿಸಿದರು. ಮಾತ್ರವಲ್ಲ ಅನೇಕ ಸಹೃದಯರು ಅವರನ್ನು ಗೌರವಿಸಿ ಸನ್ಮಾನಿಸಿದ್ದಾರೆ.

Leave a Reply